AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನೇ ಬೇಕು ನೀನೇ ಬೇಕು ಎನ್ನುವಂತಾಗಲಿ’: ವಸಿಷ್ಠ ಸಿಂಹ, ಡಾಲಿ ಧನಂಜಯಗೆ ಹಂಸಲೇಖ ಹಾರೈಕೆ

‘ನೀನೇ ಬೇಕು ನೀನೇ ಬೇಕು ಎನ್ನುವಂತಾಗಲಿ’: ವಸಿಷ್ಠ ಸಿಂಹ, ಡಾಲಿ ಧನಂಜಯಗೆ ಹಂಸಲೇಖ ಹಾರೈಕೆ

TV9 Web
| Edited By: |

Updated on: Apr 07, 2022 | 3:35 PM

Share

ನಟ ವಸಿಷ್ಠ ಸಿಂಹ ಅವರು ಹೊಸ ಆಡಿಯೋ ಕಂಪನಿ ಆರಂಭಿಸಿದ್ದಾರೆ. ಅದರ ಲೋಗೋ ಅನಾವರಣ ಕಾರ್ಯಕ್ರಮಕ್ಕೆ ಹಂಸಲೇಖ ಮತ್ತು ಡಾಲಿ ಧನಂಜಯ ಅವರು ಅತಿಥಿಗಳಾಗಿ ಆಗಮಿಸಿದ್ದರು.

ನಟ ವಸಿಷ್ಠ ಎನ್​. ಸಿಂಹ (Vasishta N Simha) ಅವರು ಹಂಸಲೇಖ ಅವರ ದೇಸಿ ಶಾಲೆಯಲ್ಲಿ ಕಲಿತವರು. ಈಗ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಟನಾಗಿ ಬೆಳೆದಿದ್ದಾರೆ. ಅದರ ಜೊತೆ ಹೊಸ ಆಡಿಯೋ ಕಂಪನಿ ಕೂಡ ಶುರು ಮಾಡಿದ್ದಾರೆ. ಅವರ ಒಡೆತನದ ‘ಸಿಂಹ ಆಡಿಯೋ’ ಮೂಲಕವೇ ‘ಕಾಲ ಚಕ್ರ’ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ. ‘ಸಿಂಹ ಆಡಿಯೋ’ ಕಂಪನಿಯ ಲೋಗೋ ಅನಾವರಣ ಮಾಡಲು ‘ನಾದ ಬ್ರಹ್ಮ’ ಹಂಸಲೇಖ (Hamsalekha) ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರ ಜೊತೆಗೆ ನಟ ಡಾಲಿ ಧನಂಜಯ (Daali Dhananjaya) ಕೂಡ ವೇದಿಕೆ ಏರಿದ್ದರು. ಈ ವೇಳೆ ಇಬ್ಬರ ಕುರಿತು ಹಂಸಲೇಖ ಮಾತನಾಡಿದರು. ‘ಈ ಸಿನಿಮಾದ ನೀನೇ ಬೇಕು ಎಂಬ ಹಾಡು ಚೆನ್ನಾಗಿದೆ. ನೀವಿಬ್ಬರು ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಿ, ಆ ಚಿತ್ರ ಹಿಟ್​ ಆಗಿ, ಎಲ್ಲರೂ ನೀನೇ ಬೇಕು ನೀನೇ ಬೇಕು ಎಂಬಷ್ಟು ಬೇಡಿಕೆ ಸೃಷ್ಟಿಯಾಗಲಿ’ ಎಂದು ಹಂಸಲೇಖ ಅವರು ಹಾರೈಸಿದರು.

ಇದನ್ನೂ ಓದಿ:

‘ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು’: ಹಂಸಲೇಖ ಬಗ್ಗೆ ಡಾಲಿ ಧನಂಜಯ ಮಾತು

ಪುನೀತ್​ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್​ಕುಮಾರ್​? ‘ಹೊಂಬಾಳೆ ಫಿಲ್ಮ್ಸ್​’ ಬಗ್ಗೆ ಹಬ್ಬಿದೆ ಗುಸುಗುಸು

Follow Us
TV9 Web
TV9 Web

TV9 Kannada

Read More