ಹೊಸ ಸಾಹಸಕ್ಕೆ ಮುಂದಾದ ನಟ ವಸಿಸ್ಠ ಸಿಂಹ; ಲಾಂಚ್ ಆಯ್ತು ‘ಸಿಂಹ ಆಡಿಯೋ’

ಹೊಸ ಸಾಹಸಕ್ಕೆ ಮುಂದಾದ ನಟ ವಸಿಸ್ಠ ಸಿಂಹ; ಲಾಂಚ್ ಆಯ್ತು ‘ಸಿಂಹ ಆಡಿಯೋ’
ವಸಿಷ್ಠ ಸಿಂಹ

‘ಕಾಲಚಕ್ರ’ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿವಿಧ ಗೆಟಪ್​ನಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Apr 04, 2022 | 4:58 PM

ವಸಿಷ್ಠ ಸಿಂಹ (Vasishta  Simha) ನಟನಾಗಿ ಸ್ಯಾಂಡಲ್​ವುಡ್​ನಲ್ಲಿ (Sandalwood) ಗುರುತಿಸಿಕೊಂಡಿದ್ದಾರೆ. ಯಶ್ ನಟನೆಯ ‘ರಾಜ ಹುಲಿ’ ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ ಅವರಿಗೆ ನಂತರ ಹಲವು ಆಫರ್​ಗಳು ಬಂದವು. ನಟನಾಗಿ, ಖಳನಾಗಿ, ರೊಮ್ಯಾಂಟಿಕ್​ ಹೀರೋ ಆಗಿ ಅವರು ಎಲ್ಲರ ಮನ ಗೆದ್ದಿದ್ದಾರೆ. ಈಗ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತಮ್ಮದೇ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಈ ವಿಚಾರವನ್ನು ವಸಿಷ್ಠ ಸಿಂಹ ಅವರೇ ಅಧಿಕೃತ ಘೋಷಣೆ ಮಾಡಿದ್ದಾರೆ.

‘ಸಿಂಹ ಆಡಿಯೋ’ (Simmhaa Audio) ಲೇಬಲ್​ಅನ್ನು ವಸಿಸ್ಠ ಸಿಂಹ ಆರಂಭಿಸಿದ್ದಾರೆ. ಅವರ ನಟನೆಯ ‘ಕಾಲಚಕ್ರ’ ಸಿನಿಮಾದ ‘ನೀನೆ ಬೇಕು..’ ಹಾಡು ‘ಸಿಂಹ ಆಡಿಯೋ’ ಮೂಲಕ ಇಂದು (ಏಪ್ರಿಲ್​ 4) ಸಂಜೆ 6 ಗಂಟೆಗೆ ರಿಲೀಸ್ ಆಗಲಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಎಲ್ಲರೂ ವಸಿಷ್ಠ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಜತೆಗೆ ಈ ಆಡಿಯೋ ಲೇಬಲ್​ನಿಂದ ಹೆಚ್ಚೆಚ್ಚು ಸಾಂಗ್​ಗಳು ರಿಲೀಸ್​ ಆಗಲಿ ಎಂದು ಶುಭ ಹಾರೈಸಿದ್ದಾರೆ.

‘ಕಾಲಚಕ್ರ’ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿವಿಧ ಗೆಟಪ್​ನಲ್ಲಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ. ಸುಮಂತ್​ ಕ್ರಾಂತಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಶ್ಮಿ ಕೆ. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಕ್ಷಾ, ಸುಚೇಂದ್ರ ಪ್ರಸಾದ್, ದೀಪಕ್​ ಶೆಟ್ಟಿ ಮೊದಲಾದವರು ನಟಿಸಿರುವ ಈ ಸಿನಿಮಾ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ.

ವಸಿಷ್ಠ ಸಿಂಹ ಅವರು ಗಾಯಕರಾಗಿಯೂ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ‘ಕಿರಿಕ್ ಪಾರ್ಟಿ’ ಸಿನಿಮಾದ ‘ನೀಚ ಸುಳ್ಳು ಸುತ್ತೋ ನಾಲಿಗೆ..’, ‘ದಯವಿಟ್ಟು ಗಮನಿಸಿ..’ ಸಿನಿಮಾದ ‘ಮರೆತೇ ಹೋದೆನು..’ ಸೇರಿ ಹಲವು ಹಾಡುಗಳನ್ನು ಅವರು ಹಾಡಿದ್ದಾರೆ. ಅವರಿಗೆ ಸಂಗೀತದ ಮೇಲೂ ಆಸಕ್ತಿ ಇರುವುದರಿಂದ ಆಡಿಯೋ ಸಂಸ್ಥೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.

‘ಕಾಲಚಕ್ರ’ ಮಾತ್ರವಲ್ಲದೆ, ‘ಪಂಥ’ ಸಿನಿಮಾದಲ್ಲೂ ವಸಿಷ್ಠ ನಟಿಸುತ್ತಿದ್ದಾರೆ. ಏಪ್ರಿಲ್​ 14ರಂದು ಬಿಡುಗಡೆ ಆಗುತ್ತಿರುವ ‘ಕೆಜಿಎಫ್​: ಚಾಪ್ಟರ್​ 2’ನಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ. ಮೊದಲ ಪಾರ್ಟ್​ನಲ್ಲಿ ಕಮಲ್​ ಆಗಿ ಕಾಣಿಸಿಕೊಂಡಿದ್ದ ವಸಿಷ್ಠ ಸಿಂಹ ಅವರ ಪಾತ್ರ ಪಾರ್ಟ್​ 2ನಲ್ಲೂ ಮುಂದುವರಿದಿದೆ.

ಇದನ್ನೂ ಓದಿ: ನ್ಯೂ ಇಯರ್​ ದಿನದಂದು.. ಸಿಂಹದ ಮರಿಯನ್ನು ದತ್ತು ಪಡೆದ ‘ಚಿಟ್ಟೆ’ ವಸಿಷ್ಠ ಸಿಂಹ

‘ಹೆಡ್ ​ಬುಷ್​’ ಚಿತ್ರದಲ್ಲಿ ವಸಿಷ್ಠ ಸಿಂಹ ಪಾತ್ರ ಏನು? ಗುಟ್ಟು ಬಿಟ್ಟುಕೊಟ್ಟ ಧನಂಜಯ

Follow us on

Related Stories

Most Read Stories

Click on your DTH Provider to Add TV9 Kannada