AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ 2’ ಟಿಕೆಟ್ ಬುಕಿಂಗ್ ಓಪನ್​ ಆದ 12 ಗಂಟೆಯಲ್ಲಿ 1 ಲಕ್ಷ ಟಿಕೆಟ್​ ಸೋಲ್ಡ್​ಔಟ್​; ಉತ್ತರ ಭಾರತದಲ್ಲಿ ಯಶ್ ಹವಾ

ಬಾಲಿವುಡ್ ತಜ್ಞರ ಪ್ರಕಾರ, ಈ ಸಿನಿಮಾ ಮೊದಲ ದಿನ ಹಿಂದಿಯಲ್ಲಿ 15 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ‘

‘ಕೆಜಿಎಫ್​ 2’ ಟಿಕೆಟ್ ಬುಕಿಂಗ್ ಓಪನ್​ ಆದ 12 ಗಂಟೆಯಲ್ಲಿ 1 ಲಕ್ಷ ಟಿಕೆಟ್​ ಸೋಲ್ಡ್​ಔಟ್​; ಉತ್ತರ ಭಾರತದಲ್ಲಿ ಯಶ್ ಹವಾ
ಯಶ್
TV9 Web
| Edited By: |

Updated on: Apr 08, 2022 | 2:29 PM

Share

‘ಕೆಜಿಎಫ್​ ಚಾಪ್ಟರ್​ 2’ ಚಿತ್ರ (KGF Chapter 2) ಕೇವಲ ಸ್ಯಾಂಡಲ್​ವುಡ್​ ಸಿನಿಮಾ ಆಗಿ ಮಾತ್ರ ಉಳಿದುಕೊಂಡಿಲ್ಲ. ಕನ್ನಡಕ್ಕಿಂತ ಹೆಚ್ಚಾಗಿ ಬಾಲಿವುಡ್​ (Bollywood) ಮಂದಿ ಈ ಸಿನಿಮಾ ವೀಕ್ಷಿಸಲು ಕಾದು ಕೂತಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್​ ಸ್ಟಾರ್​ಗಳ ಆಗಮನ ಆಗಿರುವುದರಿಂದ ಸಿನಿಮಾದ ಮೈಲೇಜ್​ ಹೆಚ್ಚಿದೆ. ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಈ ಚಿತ್ರಕ್ಕೆ ಪ್ರಚಾರ ನೀಡಲಾಗುತ್ತಿದೆ. ಯಶ್ (Yash)​ ಆ್ಯಂಡ್ ಟೀಂ ದೆಹಲಿ ಹಾಗೂ ಮೊದಲಾದ ಕಡೆಗಳಲ್ಲಿ ಸುತ್ತಾಟ ನಡೆಸುತ್ತಾ ಚಿತ್ರದ ಪ್ರಮೋಷ್​​ನಲ್ಲಿ ಬ್ಯುಸಿ ಆಗಿದೆ. ಬಾಲಿವುಡ್​ನ ತವರಾದ ಮುಂಬೈನಲ್ಲೂ ಚಿತ್ರದ ಅಬ್ಬರ ಜೋರಾಗಿದೆ. ಈಗ ಆನ್​ಲೈನ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಟಿಕೆಟ್​ ಬುಕಿಂಗ್ ಓಪನ್​ ಆಗಿದೆ. ವಿಶೇಷ ಎಂದರೆ ಈ ಚಿತ್ರ ಪ್ರೀ ಬುಕಿಂಗ್​ನಲ್ಲೂ ಧೂಳೆಬ್ಬಿಸಿದೆ.

ಕೆಲ ಪ್ರಮುಖ ನಗರಗಳಲ್ಲಿ ಸಿನಿಮಾದ ಟಿಕೆಟ್​ ಬುಕಿಂಗ್ ಬಿಡಲಾಗಿದೆ. ಮುಂಬೈ, ದೆಹಲಿ ಮೊದಲಾದ ಕಡೆಗಳಲ್ಲಿ ‘ಕೆಜಿಎಫ್​ ಚಾಪ್ಟರ್​ 2’ನ ಹಿಂದಿ ವರ್ಷನ್ ಟಿಕೆಟ್​​ ಬುಕಿಂಗ್ ಮಾಡಬಹುದು. ಟಿಕೆಟ್ ಬುಕಿಂಗ್ ಆರಂಭವಾದ 12 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್​ಗಳು ಬಿಕರಿ ಆಗಿವೆ. ಅಂದರೆ, 12 ಗಂಟೆಯಲ್ಲಿ 3.35 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಚಿತ್ರ.

ಬಾಲಿವುಡ್ ತಜ್ಞರ ಪ್ರಕಾರ, ಈ ಸಿನಿಮಾ ಮೊದಲ ದಿನ ಹಿಂದಿಯಲ್ಲಿ 15 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ‘ಕೆಜಿಎಫ್​’ ಸಿನಿಮಾ ನೋಡಿ ಅಭಿಮಾನಿಗಳು ಸಖತ್​ ಖುಷಿ ಪಟ್ಟಿದ್ದಾರೆ. ಇನ್ನು ಬಾಲಿವುಡ್ ಸ್ಟಾರ್​​ಗಳಾದ ಸಂಜಯ್​ ದತ್​, ರವೀನಾ ಟಂಡನ್ ಎರಡನೇ ಚಾಪ್ಟರ್​ನಲ್ಲಿ ನಟಿಸಿದ್ದಾರೆ. ಇದರಿಂದ ‘ಕೆಜಿಎಫ್​ 2’ ಸಿನಿಮಾದ ಬೇಡಿಕೆ ಹೆಚ್ಚಿದೆ. ಈ ಚಿತ್ರವನ್ನು ನೋಡಲು ಬಾಲಿವುಡ್​ಮಂದಿ ತುದಿಗಾಲಿನಲ್ಲಿ ನಿಂತಿದ್ದಾರೆ. ಹಿಂದಿಯಲ್ಲಿ ಚಿತ್ರದ ಒಟ್ಟೂ ಕಲೆಕ್ಷನ್​ 100 ಕೋಟಿ ರೂಪಾಯಿ ದಾಟಲಿದೆ ಎಂಬುದು ತಜ್ಞರ ಲೆಕ್ಕಾಚಾರ.

ಇನ್ನು, ಹಿಂದಿಯಲ್ಲಿ ‘ಕೆಜಿಎಫ್​ 2’ಗೆ ಎದುರಾಗಿ ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಸಿನಿಮಾ ತೆರೆಗೆ ಬರುತ್ತಿದೆ. ಶೇ.60 ಚಿತ್ರಮಂದಿರಗಳು ‘ಕೆಜಿಎಫ್​ 2’ಗೆ ಸಿಕ್ಕರೆ ಉಳಿದ ಶೇ. 40 ಥಿಯೇಟರ್​ಗಳು ‘ಜೆರ್ಸಿ’ ಸಿನಿಮಾಗೆ ಸಿಗಲಿದೆ ಎಂಬ ಲೆಕ್ಕಾಚಾರವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: KGF Chapter 2: ಮುಂಬೈನಲ್ಲಿ ‘ಕೆಜಿಎಫ್ 2’ ಚಿತ್ರತಂಡ; ಯಶ್ ನೋಡಲು ಮುಗಿಬಿದ್ದ ಫ್ಯಾನ್ಸ್- ಇಲ್ಲಿವೆ ಫೋಟೋಗಳು

‘ಸಲ್ಮಾನ್ ಖಾನ್​​, ಶಾರುಖ್ ಖಾನ್​​​ಗೆ ನನ್ನ ಹೋಲಿಸಬೇಡಿ’; ಯಶ್​ ನೇರ ಮಾತು

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್