AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರು ಸರ್ಜಾ ಕೊನೇ ಸಿನಿಮಾಗೆ ಕಂಠದಾನ ಮಾಡಿದ ಧ್ರುವ ಸರ್ಜಾ

ಚಿರು ಸರ್ಜಾ ಕೊನೇ ಸಿನಿಮಾಗೆ ಕಂಠದಾನ ಮಾಡಿದ ಧ್ರುವ ಸರ್ಜಾ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 08, 2022 | 2:56 PM

‘ರಾಜಮಾರ್ತಾಂಡ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ಅವರು ಡಬ್ಬಿಂಗ್ ಕೆಲಸ ಮಾಡಿರಲಿಲ್ಲ. ಈಗ ಧ್ರುವ ಸರ್ಜಾ ಅವರು ಚಿರಂಜೀವಿ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ.

ಚಿರಂಜೀವಿ ಸರ್ಜಾ (Chiranjeevi Sarja) ನಮ್ಮನ್ನು ಅಗಲಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಅವರ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಸಿನಿಮಾ (Rajamarthanda  Movie) ಕೆಲಸಗಳು ಕಾರಣಾಂತರಗಳಿಂದ ವಿಳಂಬ ಆದವು. ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ಅವರು ಡಬ್ಬಿಂಗ್ ಕೆಲಸ ಮಾಡಿರಲಿಲ್ಲ. ಈಗ ಧ್ರುವ ಸರ್ಜಾ (Dhruva Sarja) ಅವರು ಚಿರಂಜೀವಿ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರು ಮೃತಪಟ್ಟು ಕೆಲವು ತಿಂಗಳು ಕಳೆದ ನಂತರದಲ್ಲಿ ರಾಯನ್​ ಜನಿಸಿದ. ಈಗ ಸಿನಿಮಾದಲ್ಲಿ ರಾಯನ್​ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ರಾಮ್​ ನಾರಾಯಣ್​ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಪ್ರಮೋಷನ್​ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದೆ. ಈ ವೇಳೆ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಸರ್ಜಾ ಜತೆಗಿನ ಅಪರೂಪದ ಫೋಟೋ ಹಂಚಿಕೊಂಡ ಗೆಳೆಯ ಪನ್ನಗ ಭರಣ

ಚಿರಂಜೀವಿ ಸರ್ಜಾ ಚಿತ್ರದಲ್ಲಿ ರಾಯನ್​ ರಾಜ್​ ಸರ್ಜಾ; ‘ರಾಜಮಾರ್ತಾಂಡ’ ರಿಲೀಸ್​ಗಾಗಿ ವಿಶೇಷ ಹೋಮ