ಶಕ್ತಿಧಾಮದಲ್ಲಿರುವ ಮಕ್ಕಳು ಸ್ವಂತ ಮನೆಗಳಲ್ಲಿಗಿಂತ ಹೆಚ್ಚು ಸಂತೋಷವಾಗಿದ್ದಾರೆ: ಸುತ್ತೂರು ದೇಶಿಕೇಂದ್ರ ಸ್ವಾಮೀಜಿ
ಇಲ್ಲಿರುವ ಮಕ್ಕಳು ತಮ್ಮ ಸ್ವಂತ ಮನೆಯಲ್ಲಿರುವಷ್ಟೇ ಸಂತೋಷದಿಂದ ಇದ್ದಾರೆ. ಆವರ ಮುಖಗಳಲ್ಲಿರುವ ಖುಷಿ ನೋಡುತ್ತಿದ್ದರೆ, ನಮ್ಮ ಮನಸ್ಸಿನಲ್ಲಿ ಸಂತೃಪ್ತಿಯ ಭಾವ ಮೂಡುತ್ತದೆ ಎಂದು ಸ್ವಾಮೀಜಿ ಹೇಳಿದರು.
ಮೈಸೂರಿನ ಶಕ್ತಿಧಾಮದ (Shakthidhama) ಮತ್ತಷ್ಟು ವಿಸ್ತರಣೆಗೊಳುತ್ತಿದೆ. ಇನ್ಫೋಸಿಸ್ ಫೌಂಡೇಶನ್ (Infosys Foundation) ಶಕ್ತಿಧಾಮದಲ್ಲಿ ಒಂದು ಶಾಲೆಯನ್ನು ಸ್ಥಾಪಿಸುತ್ತಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಮೈಸೂರಿನ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Suttur Shivaratri Deshikendra Swamiji) ಅವರು ಶಕ್ತಿಧಾಮದ ಸ್ಥಾಪನೆ ಮತ್ತು ಅದರೆ ಏಳಿಗೆಗೆ ಶ್ರಮಿಸಿದ ಎಲ್ಲರನ್ನು ತಮ್ಮ ಭಾಷಣದಲ್ಲಿ ಶ್ಲಾಘಿಸಿದರು. ಶಕ್ತಿಧಾಮ ಅಸ್ತಿತ್ತಕ್ಕೆ ಬಂದಾಗ ಮೈಸೂರಿನ ಪೊಲೀಸ್ ಕಮೀಷನರ್ ಅಗಿದ್ದ ಕೆಂಪಯ್ಯ ಅವರು ಮಾಡಿದ ಉತ್ತಮ ಕೆಲಸಗಳನ್ನು ನೆನಪು ಮಾಡಿಕೊಂಡರು. ಅವರ ಅಧಿಕಾರಾವಧಿಯಲ್ಲಿ ಮೈಸೂರು ನಗರದಲ್ಲಿ ಪೊಲೀಸ್ ಶಾಲೆ ಅಸ್ತಿತ್ವಕ್ಕೆ ಬಂತು, ಶಿಥಿಲಗೊಂಡಿದ್ದ ಹಲವಾರು ಪೊಲೀಸ್ ಠಾಣೆಗಳನ್ನು ಅವರು ಸರ್ಕಾರದ ನೆರವಿನೊಂದಿಗೆ ನವೀಕರಿಸಿದರು ಎಂದು ಸ್ವಾಮೀಜಿ ಹೇಳಿದರು.
ಸಾರ್ವಜನಿಕರೊಂದಿಗೆ ನಡೆಸಿದ ಒಂದು ಸಭೆಯಲ್ಲಿ ಕೆಂಪಯ್ಯನವರು, ನಗರದಲ್ಲಿ ಒಂದೋ ಪೊಲೀಸರಿರ ಬಕು, ಇಲ್ಲ ಕಳ್ಳಕಾಕರು, ಪುಂಡರು ಇರಬೇಕು ಎಂದು ಹೇಳಿದ್ದು ತಮಗೆ ಬಹಳ ಮೆಚ್ಚಿಕೆಯಾಯಿತು ಎಂದು ಸ್ವಾಮೀಜಿ ಹೇಳಿದರು. ನಂತರ ಕೆಂಪಯ್ಯ ಅವರು ದಿವಂಗತ ಪಾರ್ವತಮ್ಮ ರಾಜಕುಮಾರ ಅವರ ಆಶಯದಂತೆ ಶಕ್ತಿಧಾಮದ ಕಾರ್ಯಗಳಲ್ಲೂ ಪಾಲ್ಗೊಂಡರು ಎಂದು ಶ್ರೀಗಳು ಹೇಳಿದರು.
ಶಕ್ತಿಧಾಮದ ಉಸ್ತುವಾರಿ ವಹಿಸಿಕೊಂಡಿರುವ ಜಯದೇವ ಅವರು ಅತ್ಯಂತ ಆಸ್ಥೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಾ ಅದನ್ನು ಈ ಹಂತಕ್ಕೆ ಬೆಳಸಿದ್ದಾರೆ. ಇಲ್ಲಿರುವ ಮಕ್ಕಳು ತಮ್ಮ ಸ್ವಂತ ಮನೆಯಲ್ಲಿರುವಷ್ಟೇ ಸಂತೋಷದಿಂದ ಇದ್ದಾರೆ. ಆವರ ಮುಖಗಳಲ್ಲಿರುವ ಖುಷಿ ನೋಡುತ್ತಿದ್ದರೆ, ನಮ್ಮ ಮನಸ್ಸಿನಲ್ಲಿ ಸಂತೃಪ್ತಿಯ ಭಾವ ಮೂಡುತ್ತದೆ ಎಂದು ಸ್ವಾಮೀಜಿ ಹೇಳಿದರು.
ಶಕ್ತಿಧಾಮಕ್ಕೆ 5 ಕೋಟಿ ರೂ. ಗಳ ಅನುದಾನ ಪ್ರಕಟಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರ ಔದಾರ್ಯ ಮತ್ತು ಹೃದಯವಂತಿಕೆಯನ್ನು ಶ್ರೀಗಳು ಕೊಂಡಾಡಿದರು. ಹಾಗೆಯೇ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರದ ಬೊಮ್ಮಾಯಿ ಮಂಡಿಸಿದ ಬಜೆಟ್ ಕೂಡ ಶ್ರೀಗಳ ಮೆಚ್ಚುಗೆಗೆ ಪಾತ್ರವಾಯಿತು.
ಶಕ್ತಿಧಾಮದಲ್ಲಿ ಡೈನಿಂಗ್ ಹಾಲ್ ಮತ್ತು ವಿವಿಧೊದ್ದೇಶ ಹಾಲ್ ನಿರ್ಮಿಸಿರುವ ಬಗ್ಗೆ ಶ್ರೀಗಳು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಲ್ಲದೆ ನಟ ಶಿವರಾಜ್‌ಕುಮಾರ್, ಅವರ ಪತ್ನಿ ಗೀತಾ ಶಿವರಾಜಕುಮಾರ್, ಮೈಸೂರಿನ ಸಂಸದ, ಶಾಸಕರು, ಹಾಗೂ ಶಕ್ತಿಧಾಮದ ಮಕ್ಕಳು, ಹಿರಿಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಅಪ್ಪು ಆಸೆಯಂತೆ ಶಕ್ತಿಧಾಮದಲ್ಲಿ ವಿದ್ಯಾಶಾಲೆಗೆ ಶಂಕುಸ್ಥಾಪನೆ; ನನ್ನ ಉಸಿರಿರುವವರೆಗೂ ಈ ಮಕ್ಕಳ ಜೊತೆ ಇರುತ್ತೇನೆ ಎಂದ ಶಿವಣ್ಣ