ಚಿರಂಜೀವಿ ಸರ್ಜಾ ಚಿತ್ರದಲ್ಲಿ ರಾಯನ್​ ರಾಜ್​ ಸರ್ಜಾ; ‘ರಾಜಮಾರ್ತಾಂಡ’ ರಿಲೀಸ್​ಗಾಗಿ ವಿಶೇಷ ಹೋಮ

ಚಿರಂಜೀವಿ ಸರ್ಜಾ ಫ್ಯಾನ್ಸ್​ ಕಾಯುತ್ತಿರುವ ‘ರಾಜಮಾರ್ತಾಂಡ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಚಿತ್ರತಂಡ ಹೋಮ ನೆರವೇರಿಸಿದೆ.

TV9kannada Web Team

| Edited By: Madan Kumar

Apr 08, 2022 | 1:43 PM

ಚಿರಂಜೀವಿ ಸರ್ಜಾ (Chiranjeevi Sarja) ನಟನೆಯ ‘ರಾಜಮಾರ್ತಾಂಡ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ವಿಶೇಷ ನಿರೀಕ್ಷೆ ಇದೆ. 2020ರಲ್ಲಿ ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಚಿರಂಜೀವಿ ಸರ್ಜಾ ಅವರು ಈ ಸಿನಿಮಾದ ಶೂಟಿಂಗ್​ ಮುಗಿಸಿದ್ದರು. ಡಬ್ಬಿಂಗ್​ ಕೆಲಸಗಳು ಬಾಕಿ ಉಳಿದಿದ್ದವು. ಅವರ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡುತ್ತಿದ್ದಾರೆ. ಈಗ ‘ರಾಜಮಾರ್ತಾಂಡ’ ಸಿನಿಮಾ (Rajamarthanda Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿಶೇಷ ಹೋಮ ನೆರವೇರಿಸಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಅವರ ಪುತ್ರ ರಾಯನ್​ ರಾಜ್​ ಸರ್ಜಾ(Raayan Raj Sarja) ಕೂಡ ಕಾಣಿಸಿಕೊಳ್ಳಲಿದ್ದಾನೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಆ ಕಾರಣದಿಂದಲ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗುವಂತಾಗಿದೆ. ‘ರಾಜಮಾರ್ತಾಂಡ’ ಚಿತ್ರಕ್ಕೆ ರಾಮ್​ ನಾರಾಯಣ್​ ನಿರ್ದೇಶನ ಮಾಡಿದ್ದು, ಹಾಡುಗಳಿಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:

ಸಿಂಪಲ್​ ಆದ್ರೂ ಸೂಪರ್​ ಆಗಿವೆ ಮೇಘನಾ ರಾಜ್​ ಫೋಟೋಗಳು

ರಾಯನ್​ ಸರ್ಜಾಗೆ ಮಾತು ಕಲಿಸಿದ ಮೇಘನಾ ರಾಜ್​; ಇಲ್ಲಿದೆ ವಿಡಿಯೋ

Follow us on

Click on your DTH Provider to Add TV9 Kannada