ಕಾಲಿಗೆ ಕಾಡುಬಳ್ಳಿ ತೊಡರಿ ಬಿಡಿಸಿಕೊಳ್ಳಲಾಗದೆ ಅರಚುತ್ತಿದ್ದ ಕರಡಿಯನೆರವಿಗ ಅರಣ್ಯ ಸಿಬ್ಬಂದಿ ಧಾವಿಸಿದರು

ಕಾಲಿಗೆ ಕಾಡುಬಳ್ಳಿ ತೊಡರಿ ಬಿಡಿಸಿಕೊಳ್ಳಲಾಗದೆ ಅರಚುತ್ತಿದ್ದ ಕರಡಿಯನೆರವಿಗ ಅರಣ್ಯ ಸಿಬ್ಬಂದಿ ಧಾವಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 08, 2022 | 8:08 PM

ಅದರಲ್ಲೂ ಇಂಥ ಸ್ಥಿತಿಯಲ್ಲಿರುವ ಅದರ ಬಳಿಗೆ ಹೋದರೆ ಅದು ಖಂಡಿತವಾಗಿಯೂ ಆಕ್ರಮಣ ನಡೆಸುತ್ತದೆ. ತನ್ನನ್ನು ಎತ್ಹಾಕಿಕೊಂಡು ಹೋಗಲು ಬಂದಿರಬಹುದೆಂದು ದಾಳಿ ಮಾಡಲು ಮುಂದಾಗುತ್ತದೆ.

ಕಾಡಿನಲ್ಲಿ ಸ್ವೇಚ್ಛೆಯಿಂದ ತಿರುಗಾಡುವ ವನ್ಯ ಜೀವಿಗಳು (wild animals) ಕೆಲವು ಸಲ ಹೀಗೆ ಅಪಾಯಕ್ಕೆ ಸಿಕ್ಕುಬಿಡುತ್ತವೆ. ಈ ವಿಡಿಯೋ ನೋಡಿ. ಉತ್ತರ ಕನ್ನಡ ಜಿಲ್ಲೆ ಮುಂಡಗೋಡ (Mundgod) ತಾಲ್ಲೂಕಿನ ಕಾತೂರ ಅರಣ್ಯ ವ್ಯಾಪ್ತಿಯಲ್ಲಿ ಕರಡಿಯೊಂದು (bear) ಕಾಡುಬಳ್ಳಿಗೆ ಸಿಕ್ಹಾಕಿಕೊಂಡು ಬಿಡಿಸಿಕೊಳ್ಳಲಾಗದೆ ಅಸಹಾಯಕತೆ ಮತ್ತು ಹತಾಷೆಯಿಂದ ಒದ್ದಾಡುತ್ತಾ ಅರಚುತ್ತಿದೆ. ಬೇರೆ ಪ್ರಾಣಿಗಳಿಗೆ ಅದರ ತೊಂದರೆ ಹೇಗೆ ಅರ್ಥವಾದೀತು ಮಾರಾಯ್ರೇ. ಅದೃಷ್ಟವಶಾತ್ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಕರಡಿ ಅರಚುವುದು ಕೇಳಿಸಿದೆ. ಶಬ್ದ ಬರುತ್ತಿದ್ದ ಕಡೆ ಅವರು ಹೋದಾಗ ಕರಡಿ ಈ ಸ್ಥಿತಿಯಲ್ಲಿ ಕಂಡಿದೆ. ಆದರೆ ಕರಡಿ ಅಪಾಯಕಾರಿ ಪ್ರಾಣಿ ಮಾರಾಯ್ರೇ.

ಅದರಲ್ಲೂ ಇಂಥ ಸ್ಥಿತಿಯಲ್ಲಿರುವ ಅದರ ಬಳಿಗೆ ಹೋದರೆ ಅದು ಖಂಡಿತವಾಗಿಯೂ ಆಕ್ರಮಣ ನಡೆಸುತ್ತದೆ. ತನ್ನನ್ನು ಎತ್ಹಾಕಿಕೊಂಡು ಹೋಗಲು ಬಂದಿರಬಹುದೆಂದು ದಾಳಿ ಮಾಡಲು ಮುಂದಾಗುತ್ತದೆ.

ಆಗಲೇ ಹೇಳಿದಂತೆ, ಕರಡಿ ಅಪಾಯಕಾರಿ ಮತ್ತು ಅದರ ಆಕ್ರಮಣ ಮಾರಣಾಂತಿಕ. ಹಾಗಾಗೇ ಆರಣ್ಯ ಸಿಬ್ಬಂದಿಗೆ ಅದನ್ನು ಹೇಗೆ ಬಲೆಯಿಂದ ಬಿಡಿಸುವುದು ಅಂತ ಮೊದಲಿಗೆ ಗೊತ್ತಾಗಿಲ್ಲ.ಆದರೆ ಆಮೇಲೆ ಅವರು ಬುದ್ಧಿ ಪ್ರಯೋಗಿಸಿ ಕರಡಿಯನ್ನೇ ಬಲೆಯಲ್ಲಿ ಬಂಧಿಸಲು ನಿರ್ಧರಿಸಿ ಅದನ್ನು ಬಲೆಯಲ್ಲಿ ಕೆಡವಿದ್ದಾರೆ. ನಿಮಗದು ವಿಡಿಯೋನಲ್ಲಿ ಕಾಣುತ್ತದೆ.

ಸಿಬ್ಬಂದಿ ಹೇಳುವ ಹಾಗೆ ಇದು 2 ವರ್ಷ ಪ್ರಾಯದ ಗಂಡು ಕರಡಿ. ಅದನ್ನು ಬಂಧಿಸಿದ ಬಳಿಕ ಅದರ ಕಾಲಿಗೆ ತೊಡರಿದ್ದ ಬಳ್ಳಿಯನ್ನು ಕತ್ತರಿಸಿ ಹಾಕಿದ್ದಾರೆ. ಅಮೇಲೆ ಅದನ್ನು ಇಲಾಖೆಯ ವಾಹನದಲ್ಲಿ ಕಾಡಿನೊಳಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಅಲ್ಲಿಗೆ ಕರಡಿ ಪ್ರಹಸನ ಮುಕ್ತಾಯಗೊಂಡಿದೆ.

ಇದನ್ನೂ ಓದಿ: ಬೈಕ್​ನಿಂದ ಬಿದ್ದರೂ ಎದ್ದು ಹೊಸ ಬೈಕ್​ನೊಂದಿಗೆ ಸ್ಪರ್ಧೆ ಮುಂದುವರೆಸಿದ ರೇಸರ್​​​​​​​​​​​​​​; ಮೈ ಜುಂ ಎನ್ನಿಸುವ ವಿಡಿಯೋದ ಅಸಲಿಯತ್ತೇನು?