ಯಾದಗಿರಿಯ ಯರಗೋಳನಲ್ಲಿ ಹಿಂದೂ-ಮುಸ್ಲಿಂ ಜನ ಒಟ್ಟಿಗೆ ಸೇರಿ ಜಮಾಲುದ್ದೀನ್ ಸಾಹೇಬ ಉರುಸ್ ಆಚರಿಸಿದರು!
ಇದು ಮುಸಲ್ಮಾನರು ಅಯೋಜಿಸುವ ಸಂದಲ್ ಆದರೂ ಅದರಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಡೊಳ್ಳು ತಮ್ಮಟೆ ಬಾರಿಸುತ್ತಿರುವವರು ಹಿಂದೂಗಳು, ಕೋಲಾಟ ಮತ್ತು ಲೇಜಿಮ್ ಕುಣಿತ ಮಾಡುತ್ತಿರುವವರು ಹಿಂದೂಗಳೇ.
ಯಾದಗಿರಿ ಜಿಲ್ಲಾ ಕೆಂದ್ರದಿಂದ ಸುಮಾರು 20 ಕಿಮೀ ದೂರದಲ್ಲಿದೆ ಯರಗೋಳ (Yaragol) ಹೆಸರಿನ ಒಂದೂರು. ಈ ಊರಿಂದ ನಮಗೆ ಒಂದು ವಿಡಿಯೋ ಲಭ್ಯವಾಗಿದೆ. ಇಲ್ಲಿ ಉರುಸ್ (ಮುಸಲ್ಮಾನ ಸಮುದಾಯ ಆಯೋಜಿಸುವ ಜಾತ್ರೆ) (Urs) ಪೂರ್ವಭಾವಿ ಮೆರವಣಿಗೆಯೊಂದು ನಡೆಯುತ್ತಿದೆ. ಇದನ್ನು ಮುಸಲ್ಮಾನರು ಸಂದಲ್ (ಗಂಧದ ಮೆರವಣಿಗೆ) ಅಂತ ಕರೆಯುತ್ತಾರೆ. ಸಂದಲ್ ನಡೆದ ಮರುದಿನ ಉರುಸ್ ನಡೆಯುತ್ತದೆ. ಉರುಸ್ ಗಳು ಕೇವಲ ಯರಗೋಳ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ನಡೆಯುವುದಿಲ್ಲ, ಎಲ್ಲಾ ಕಡೆ ನಡೆಯುತ್ತವೆ. ಯರಗೋಳದಲ್ಲಿ ನಡೆಯೋದು ಜಮಾಲುದ್ದೀನ್ ಸಾಹೇಬ್ ಉರುಸ್. ರಾಜ್ಯದ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಯರಗೋಳದ ಉರುಸ್ ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಯಾಕೆ ಅಂತ ನಿಮಗೆ ಗೊತ್ತು.
ಇದು ಮುಸಲ್ಮಾನರು ಅಯೋಜಿಸುವ ಸಂದಲ್ ಆದರೂ ಅದರಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಡೊಳ್ಳು ತಮ್ಮಟೆ ಬಾರಿಸುತ್ತಿರುವವರು ಹಿಂದೂಗಳು, ಕೋಲಾಟ ಮತ್ತು ಲೇಜಿಮ್ ಕುಣಿತ ಮಾಡುತ್ತಿರುವವರು ಹಿಂದೂಗಳೇ.
ಹಿಂದೂ ದೇವಾಲಯಗಳ ಆವರಣದಲ್ಲಿ ಮತ್ತು ಮತ್ತು ಹಿಂದೂಗಳ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಳಿಗೆ ಅಂಗಡಿಗಳನ್ನು ಹಾಕಲು ಅವಕಾಶ ನೀಡಬಾರದು, ಮುಸ್ಲಿಂ ಮಾಂಸದ ಅಂಗಡಿಗಳಿಂದ ಹಲಾಲ್ ಕಟ್ ಮಾಂಸ ಖರೀದಿಸಬಾರದು ಮೊದಲಾದ ಅಭಿಯಾನಗಳು ಉತ್ತುಂಗದಲ್ಲಿರುವ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಯರಗೋಳದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನ ಒಟ್ಟಿಗೆ ಸೇರಿ ಸಂದಲ್ ನಲ್ಲಿ ಭಾಗವಹಿಸಿರುವುದು ಒಂದು ಉತ್ತಮ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತದೆ.
ಉತ್ತರ ಕರ್ನಾಟಕದಲ್ಲಿ ಮೊಹರಂ ಸಹ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ. ಉದ್ಯೋಗ ನಿಮಿತ್ತ ದೊಡ್ಡ ಪಟ್ಟಣಗಳಿಗೆ ಹೋಗಿರುವ ಹಿಂದೂಗಳು ಮೊಹರಂ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಬರುತ್ತಾರೆ.
ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಲ್ಲಿ ನಡೆದ ಉರುಸ್ನಲ್ಲೂ ರಾರಾಜಿಸಿದರು ಕನ್ನಡಿಗರ ಕಣ್ಮಣಿ ಡಾ ಪುನೀತ್ ರಾಜಕುಮಾರ್!