ಬೈಕ್ನಿಂದ ಬಿದ್ದರೂ ಎದ್ದು ಹೊಸ ಬೈಕ್ನೊಂದಿಗೆ ಸ್ಪರ್ಧೆ ಮುಂದುವರೆಸಿದ ರೇಸರ್; ಮೈ ಜುಂ ಎನ್ನಿಸುವ ವಿಡಿಯೋದ ಅಸಲಿಯತ್ತೇನು?
Viral Video: ಸಾಮಾಜಿಕ ಜಾಲತಾಣಗಳಲ್ಲಿ ಓರ್ವ ಐಎಎಸ್ ಅಧಿಕಾರಿ ಹಂಚಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಬೈಕ್ ರೇಸ್ ಸ್ಪರ್ಧಿಯೋರ್ವ ಬೈಕ್ನಿಂದ ಬಿದ್ದ ನಂತರವೂ ಓಡುತ್ತಾ ಮತ್ತೊಂದು ಬೈಕ್ನೊಂದಿಗೆ ಸ್ಪರ್ಧೆ ಮುಂದುವರೆಸುವ ಪ್ರೇರಣಾದಾಯಿ ವಿಡಿಯೋ ಅದಾಗಿದೆ. ಆದರೆ ಇದರ ಅಸಲಿಯತ್ತೇನು?
ಸಾಕಷ್ಟು ಪ್ರೇರಣಾದಾಯಿ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡಿರುತ್ತೀರಿ. ಇತ್ತೀಚೆಗೆ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಬೈಕ್ ರೇಸರ್ ಓರ್ವ ಸ್ಪರ್ಧೆಯ ವೇಳೆ ಬೈಕ್ನಿಂದ ಬೀಳುತ್ತಾನೆ. ಈ ಸಂದರ್ಭ ನೋಡಿದರೆ ಎಂಥವರಿಗೂ ಮೈ ಜುಂ ಎನ್ನುತ್ತದೆ. ಆದರೆ ಗುರಿಯೆಡೆಗೆ ತಲುಪುವ ಅವರ ಉತ್ಸಾಹ ಎಂತಹ ಪ್ರೇರಣೆ ನೀಡಬಲ್ಲದು ಎಂದರೆ, ಅವರು ಮರಳಿ ಬಂದು ಹೊಸ ಬೈಕ್ನೊಂದಿಗೆ ಸ್ಪರ್ಧೆ ಮುಂದುವರೆಸುತ್ತಾರೆ. ಈ ಸಂದರ್ಭದ ತುಣುಕುಗಳು ವೈರಲ್ (Viral Video) ಆಗಿವೆ. ಈ ವಿಡಿಯೋವನ್ನು ಹಂಚಿಕೊಂಡಿರುವವರು ಅವನೀಶ್ ಶರಣ್ ಎನ್ನುವ ಐಎಎಸ್ ಅಧಿಕಾರಿ. ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವನೀಶ್, ಪ್ಯಾಶನ್ ಅಥವಾ ಕೆಲಸದ ಮೇಲಿನ ಉತ್ಸಾಹ ಒಂದು ಅತ್ಯುನ್ನತ ಭಾವನೆ, ಅದೇ ಗುರಿಯೆಡೆಗೆ ಕರೆದೊಯ್ಯಲು ಸಹಾಯ ಮಾಡುವಂಥದ್ದು ಎಂಬರ್ಥದಲ್ಲಿ ಕ್ಯಾಪ್ಶನ್ ನೀಡಿದ್ದಾರೆ.
ವಿಡಿಯೋದಲ್ಲಿ ಬೈಕ್ ಸವಾರನೊಬ್ಬ ಸ್ಪರ್ಧೆಯ ನಡುವೆಯೇ ಆಯ ತಪ್ಪಿ ಬೀಳುತ್ತಾನೆ. ಈ ವೇಳೆ ಆತನ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗುತ್ತದೆ. ಅದೃಷ್ಟವಶಾತ್ ಸ್ಪರ್ಧಿ ತನ್ನ ಚಾಣಾಕ್ಷತೆಯಿಂದ ಈ ಅವಘಡದಿಂದ ಪಾರಾಗುತ್ತಾನೆ. ನಂತರದ ದೃಶ್ಯದಲ್ಲಿ ಓಡುತ್ತಲೇ ಗ್ಯಾರೇಜ್ಗೆ (ಸ್ಪರ್ಧೆಯ ವೇಳೆ ತಂಡಗಳು ಬೈಕ್ಗಳನ್ನು ಸರ್ವಿಸ್ ಮಾಡುವ ಜಾಗ ಹಾಗೂ ಬೈಕ್ಗಳನ್ನು ಇಟ್ಟುಕೊಂಡಿರುವ ಸ್ಥಳ) ತೆರಳುವ ಸ್ಪರ್ಧಿ ಅಲ್ಲಿಂದ ಹೊಸ ಬೈಕ್ಅನ್ನು ತೆಗೆದುಕೊಂಡು ಸ್ಪರ್ಧೆಯನ್ನು ಮುಂದುವರೆಸುತ್ತಾನೆ. ಈ ವಿಡಿಯೋವನ್ನು ಅವನೀಶ್ ಹಂಚಿಕೊಂಡಿದ್ದಾರೆ.
ಅವನೀಶ್ ಶರಣ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:
Passion is a very strong Emotion. pic.twitter.com/JyHDcBZ6k2
— Awanish Sharan (@AwanishSharan) April 6, 2022
ಸುಮಾರು 6 ಲಕ್ಷ ವೀಕ್ಷಣೆ ಪಡೆದಿರುವ ಈ ವಿಡಿಯೋ ಸದ್ಯ ವೈರಲ್ ಆಗಿದೆ. ಸರಿಸುಮಾರು 32,000 ಜನರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಎಲ್ಲರೂ ಆ ಸ್ಪರ್ಧಿಯ ಹೋರಾಟದ ಮನೋಭಾವವನ್ನು ಕೊಂಡಾಡಿದ್ದಾರೆ.
ವಿಡಿಯೋದ ಅಸಲಿಯತ್ತೇನು?
ನೋಡುವವರಿಗೆ ಪ್ರೇರಣೆ ನೀಡುವಂತೆ ತಯಾರಾಗಿರುವ ಈ ವಿಡಿಯೋದ ಅಸಲಿಯತ್ತು ಬೇರೆಯೇ ಇದೆ. ಮೊದಲ ತುಣುಕಿನಲ್ಲಿ ಬೀಳುವ ದೃಶ್ಯ ಬೇರೆಯೇ ದಿನ ನಡೆದಿದೆ. ಬಿದ್ದ ನಂತರ ರೇಸರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಪರ್ಧಿಯೋರ್ವ ಓಡುತ್ತಾ ಮತ್ತೊಂದು ಬೈಕ್ನೊಂದಿಗೆ ಸ್ಪರ್ಧೆ ಮುಂದುವರೆಸುವುದು ಬೇರೆಯದೇ ದಿನ ನಡೆದ ಘಟನೆಯಾಗಿದೆ. ಈ ಬಗ್ಗೆ ಜನರು ಕಾಮೆಂಟ್ ಮೂಲಕ ಐಎಎಸ್ ಅಧಿಕಾರಿ ಹಂಚಿಕೊಂಡ ವಿಡಿಯೋಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂತಹ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.
The Real incidents after the crash can be seen here ?the driver is taken to the medical care, it isnt the same driver who rushed for another bike. https://t.co/2MWzfwKVuA
— Rao.. #ProudHindu (@bubblebuster26) April 6, 2022
oh please. It is combination of 2 diff videos or 2 diff instances happened on two diff days. The rider fallen and never went to ride another bike. 2nd part is from this day –https://t.co/WcS3yR8RKU
— Tzar Khatri (@tzarkhatri) April 6, 2022
ಇದನ್ನೂ ಓದಿ: ಪುಟಿನ್ ಆಪ್ತ ಟಿವಿ ನಿರೂಪಕನ ಇಟಲಿ ಮನೆಯ ಗೋಡೆಗಳ ಮೇಲೆ ಹಂತಕ, ಯುದ್ಧ ಬೇಡ ಎಂಬ ಸ್ಲೋಗನ್ಗಳು
Chanakya Niti: ನಾವು ಬಯಸಿದರೆ ನಾಯಿಯಿಂದಲೂ ಬಹಳಷ್ಟು ಕಲಿಯಬಹುದು, ನಾಯಿಯ 4 ವಿಶೇಷ ಗುಣಗಳಿವು- ಚಾಣಕ್ಯ ನೀತಿ
Published On - 9:22 am, Thu, 7 April 22