Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟದ ಮನಮೋಹಕ ವಿಡಿಯೋ ಮೂಲಕ ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ

Anand Mahindra | Viral Video: ಇತ್ತೀಚೆಗೆ ಆನಂದ್ ಮಹೀಂದ್ರಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅದು ವೈರಲ್ ಆಗಿದೆ. ವಿಡಿಯೋದಲ್ಲಿ ಮೌಂಟ್ ಎವರೆಸ್ಟ್​ನ ಶಿಖರದಿಂದ 360 ಡಿಗ್ರಿ ನೋಟ ಹೇಗಿದೆ ಎನ್ನುವುದನ್ನು ತೋರಿಸಲಾಗಿದೆ. ಇದರೊಂದಿಗೆ ಬದುಕಿನ ಪಾಠವನ್ನೂ ಹೇಳಿದ್ದಾರೆ ಆನಂದ್ ಮಹೀಂದ್ರಾ.

ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟದ ಮನಮೋಹಕ ವಿಡಿಯೋ ಮೂಲಕ ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ ಹಂಚಿಕೊಂಡ ಮೌಂಟ್ ಎವರೆಸ್ಟ್ ವಿಡಿಯೋದ ತುಣುಕು
Follow us
TV9 Web
| Updated By: shivaprasad.hs

Updated on:Apr 07, 2022 | 10:12 AM

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿರುತ್ತಾರೆ. ಪ್ರೇರಣಾದಾಯಿ ಬರಹಗಳ ಜತೆಗೆ ಕುತೂಹಲಕರ ವಿಚಾರಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಇದೇ ಕಾರಣದಿಂದ ಅವರಿಗೆ ಅಭಿಮಾನಿ ಬಳಗವೂ ಹಿರಿದಾಗಿದೆ. ಕೇವಲ ಟ್ವಿಟರ್​ಒಂದರಲ್ಲೇ ಅವರಿಗೆ ಸುಮಾರು 90 ಲಕ್ಷ ಫಾಲೋವರ್​ಗಳಿದ್ದಾರೆ. ಇತ್ತೀಚೆಗೆ ಆನಂದ್ ಮಹೀಂದ್ರಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅದು ವೈರಲ್ ಆಗಿದೆ. ವಿಡಿಯೋದಲ್ಲಿ ಮೌಂಟ್ ಎವರೆಸ್ಟ್​ನ ಶಿಖರದಿಂದ 360 ಡಿಗ್ರಿ ನೋಟ ಹೇಗಿದೆ ಎನ್ನುವುದನ್ನು ತೋರಿಸಲಾಗಿದೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಆನಂದ್ ಮಹೀಂದ್ರಾ ಬದುಕಿನ ಪಾಠ ಹೇಳಿದ್ದಾರೆ. ‘ಯಾವುದಾದರೂ ಕಠಿಣ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕಾದರೆ ನೀವು ಎವರೆಸ್ಟ್​​ನ ಮೇಲಿದ್ದೀರಿ ಎಂದು ಭಾವಿಸಲು ಇದು ಸಹಾಯ ಮಾಡುತ್ತದೆ. ಯಾವುದೇ ಅಡೆತಡೆಯಿಲ್ಲದೆ ಜಗತ್ತಿನ ಕುರಿತು ನಿಮಗೆ ನೋಟ ಸಿಗುತ್ತದೆ. ಕಾರಣ, ನೀವು ಎಲ್ಲವುಗಳಿಗಿಂತ ಎತ್ತರದಲ್ಲಿರುತ್ತೀರಿ. ಇದರಿಂದ ದೊಡ್ಡದಾದ, ದೂರದೃಷ್ಟಿಯ ನೋಟ ನಿಮಗೆ ಸಿಗುತ್ತದೆ’’ ಎಂದಿದ್ದಾರೆ ಆನಂದ್ ಮಹೀಂದ್ರಾ.

ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋ ಇಲ್ಲಿದೆ:

ಆನಂದ್ ಮಹೀಂದ್ರಾ ಹಂಚಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಸುಮಾರು 41 ಸೆಕೆಂಡ್​ಗಳ ಈ ವಿಡಿಯೋವನ್ನು 4.5 ಲಕ್ಷ ಜನರು ವೀಕ್ಷಿಸಿದ್ದಾರೆ. ಸುಮಾರು 28 ಸಾವಿರ ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.

ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಇಂತಹ ಕುತೂಹಲಕರ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ಸಮಯದ ಹಿಂದೆ ಮಿಜೋರಾಂನಲ್ಲಿ ಜನರು ಟ್ರಾಫಿಕ್ ನಿಯಮಗಳನ್ನು ಅನುಸರಿಸುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಕಿರಿದಾದ ರಸ್ತೆಯಲ್ಲಿ ಜನರು ಟ್ರಾಫಿಕ್ ಹೆಚ್ಚಿದ್ದರೂ, ಯಾವುದೇ ನಿಯಮ ಉಲ್ಲಂಘಿಸದೇ ಸಾವಕಾಶವಾಗಿ ಕಾಯುತ್ತಿರುವ ಚಿತ್ರ ಅದಾಗಿತ್ತು. ಇದನ್ನು ನೋಡಿ ಜನರು ಅಪಾರ ,ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ: ಬೇಸಿಗೆಯಲ್ಲಿ ನದಿ-ಸರೋವರದ ನೀರು ತಂಪಾಗಿರುತ್ತದೆ; ಚಳಿಗಾಲದಲ್ಲಿ ಬಿಸಿಯಾಗಿರುತ್ತದೆ; ಇದಕ್ಕೆ ಕಾರಣವೇನು?

ಹಿಂದೂ ಮುಸ್ಲಿಂ ಸಾಮರಸ್ಯದ ಕರಗ ಉತ್ಸವಕ್ಕೆ ಎದುರಾಗಲಿದೆಯಾ ಕಂಟಕ? ದರ್ಗಾ ಪ್ರವೇಶಿಸುತ್ತಾಳ ದ್ರೌಪಧಿಯಮ್ಮ

Published On - 10:05 am, Thu, 7 April 22

ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ