ಕ್ಯಾಲಿಫೋರ್ನಿಯಾ: ಮಂಚದಲ್ಲಿ 7 ಅಡಿ ಉದ್ದದ ಹಾವು ಮಲಗಿದ್ದನ್ನು ನೋಡಿ ಹೌಹಾರಿದ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ

ಮಂಚದ ಮೇಲೆ ಕುಳಿತಿರುವ ವ್ಯಕ್ತಿಯೋರ್ವನಿಗೆ ಅಲ್ಲಿ ಹಾವು ಮಲಗಿರುವ ವಿಚಾರ ಸಡನ್ನಾಗಿ ತಿಳಿದರೆ ಹೇಗಾಬೇಡಿ? ಎಂಥವರ ಎದೆಯೂ ಒಮ್ಮೆ ನಡುಗೀತು. ಕೇಳುವುದಕ್ಕೇ ಮೈ ಜುಂ ಎನ್ನಿಸುವ ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ. ವೈರಲ್ ವಿಡಿಯೋ ಇಲ್ಲಿದೆ.

ಕ್ಯಾಲಿಫೋರ್ನಿಯಾ: ಮಂಚದಲ್ಲಿ 7 ಅಡಿ ಉದ್ದದ ಹಾವು ಮಲಗಿದ್ದನ್ನು ನೋಡಿ ಹೌಹಾರಿದ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ
ರಕ್ಷಿಸಲಾದ ಹಾವು
Follow us
| Updated By: shivaprasad.hs

Updated on: Apr 07, 2022 | 4:03 PM

ಮಂಚದ ಮೇಲೆ ಕುಳಿತಿರುವ ವ್ಯಕ್ತಿಯೋರ್ವನಿಗೆ ಅಲ್ಲಿ ಹಾವು ಮಲಗಿರುವ ವಿಚಾರ ಸಡನ್ನಾಗಿ ತಿಳಿದರೆ ಹೇಗಾಬೇಡಿ? ಎಂಥವರ ಎದೆಯೂ ಒಮ್ಮೆ ನಡುಗೀತು. ಅದೂ ಕೂಡ ದೈತ್ಯಾಕಾರದ ಹಾವು. ಹೌದು. ಕೇಳುವುದಕ್ಕೇ ಮೈ ಜುಂ ಎನ್ನಿಸುವ ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ. 7 ಅಡಿ ಉದ್ದದ ವಿಯೆಟ್ನಾಮೀಸ್ ಬ್ಲ್ಯೂ ಬ್ಯೂಟಿ ರ್ಯಾಟ್ ಸ್ನೇಕ್ ಅದು! ಅದನ್ನು ತನ್ನ ಮಂಚದಲ್ಲಿ ನೋಡಿದ ವ್ಯಕ್ತಿ ಹೌಹಾರಿ ಉರಗ ತಜ್ಞರನ್ನು ಕರೆಸಿದ್ದಾನೆ. ಉರಗ ತಜ್ಞರು ನಂತರ ಹಾವನ್ನು ಹಿಡಿದಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. 9ನ್ಯೂಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಹಾವು ಮಂಚದ ಬದಿಯಲ್ಲಿ ಅಡಗಿ ಕುಳಿತಿರುವುದು ಕಾಣುತ್ತದೆ. ಈ ವಿಡಿಯೋ ಸದ್ಯ ವೈರಲ್ (Viral Video) ಆಗಿದೆ.

ಫೇಸ್​ಬುಕ್​ನಲ್ಲಿ ಮತ್ತೊಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಉರಗ ತಜ್ಞ ಅಲೆಕ್ಸ್ ತೇಜೋ ಹಾವಿನ ಬಾಲ ಹಿಡಿದಿರುವುದು ಕಾಣುತ್ತದೆ. ‘‘ಯಾರೋ ಕರೆಮಾಡಿ ಹಾವನ್ನು ಹಿಡಿಯಲು ಹೇಳಿದರು. ಹಿಡಿದಿದ್ದೇನೆ. ಮುಂದೇನು ಮಾಡುವುದು ತಿಳಿಯುತ್ತಿಲ್ಲ’’ ಎಂದು ತೇಜೋ ವಿಡಿಯೋದಲ್ಲಿ ಮಾತನಾಡುತ್ತಿರುವಾಗಲೇ ಹಾವು ಅವರ ಹಿಡಿತದಿಂದ ತಪ್ಪಿಸಿಕೊಂಡು ಅವರಿಗೇ ಕಚ್ಚಲು ಮುಂದಾಗಿದೆ. ನಂತರ ಜಾಗರೂಕತೆಯಿಂದ ಅದನ್ನು ಸುರಕ್ಷಿತ ಸ್ಥಳಕ್ಕೆ ಉರಗ ತಜ್ಞರು ರವಾನಿಸಿದ್ದಾರೆ.

ಅಲೆಕ್ಸ್ ತೇಜೋ ಹಂಚಿಕೊಂಡಿರುವ ವಿಡಿಯೋ:

ಹಾವು ಮನೆಯ ಒಳಗೆ ತೆರಳಿ ಮಂಚದ ಮೇಲೆ ಮಲಗಿದ್ದು ಹೇಗೆ ಎನ್ನುವುದು ಇನ್ನೂ ನಿಗೂಢ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ವಿಡಿಯೋ ನೋಡಿದ ಪ್ರೇಕ್ಷಕರೂ ಪ್ರಶ್ನೆ ಮಾಡಿದ್ದಾರೆ. ಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿರುವುದು ಒಳ್ಳೆಯ ವಿಚಾರ ಎಂದು ಹಲವರು ಬರೆದಿದ್ದಾರೆ.

ಖಾಸಗಿ ಮಾಧ್ಯಮವೊಂದು ಹಂಚಿಕೊಂಡ ವಿಡಿಯೋ:

ಪ್ರಸ್ತುತ ಈ ವಿಡಿಯೋ ವೈರಲ್ ಆಗಿದ್ದು, ಜನರು ವಿಧವಿಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾವನ್ನು ಹಿಡಿಯುವಾಗ ಮತ್ತಷ್ಟು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದೂ ಹಲವರು ಕಳಕಳಿಯಿಂದ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

ಬೆಳಗಾವಿ ಅಜ್ಜಿ ಬಳ್ಳಾರಿ ಕಾಲೇಜಿಗೆ ದೇಹ ದಾನ ಮಾಡಿ ಸಾರ್ಥಕತೆ ಮೆರೆದರು ! ಇದಕ್ಕೆ ಪ್ರೇರಣೆ ಯಾರು? ಇಲ್ಲಿದೆ ಕ್ರಾಂತಿಕಾರಿ ಸ್ಟೋರಿ!

How To Apply For PMAY: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?