AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ನದಿ-ಸರೋವರದ ನೀರು ತಂಪಾಗಿರುತ್ತದೆ; ಚಳಿಗಾಲದಲ್ಲಿ ಬಿಸಿಯಾಗಿರುತ್ತದೆ; ಇದಕ್ಕೆ ಕಾರಣವೇನು?

Knowledge: ನೀರಿನ ತಾಪಮಾನವು ಅದರ ಸುತ್ತಲಿನ ತಾಪಮಾನಕ್ಕೆ ವಿರುದ್ಧವಾಗಿರುವುದು ಏಕೆ ಎಂಬುದು ಕುತೂಹಲಕರ ಪ್ರಶ್ನೆ. ಚಳಿಗಾಲದಲ್ಲಿ, ಗಾಳಿ ತಂಪಾಗಿದ್ದರೂ ನೀರು ಬೆಚ್ಚಗಿರುತ್ತದೆ. ಬೇಸಿಗೆಯಲ್ಲಿ ಬಿಸಿ ಗಾಳಿಯಿದ್ದರೂ ನೀರು ತಂಪಿರುತ್ತದೆ. ಇದಕ್ಕೆ ಕಾರಣ, ವಾತಾವರಣವು ನೀರಿನ ಮೂಲದ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಒಂದೇ ರೀತಿ ಇರುತ್ತದೆ. ಹೀಗಾಗಿಯೇ ನಮಗೆ ಚಳಿ ಎನ್ನಿಸಿದಾಗ ನೀರು ಬೆಚ್ಚಗಿದ್ದಂತೆ ಅನ್ನಿಸುತ್ತದೆ ಮತ್ತು ಹೊರಗೆ ಬಿಸಿಲಿನ ವಾತಾವರಣ ಇದ್ದಾಗ ನೀರು ತಣ್ಣಗಿದೆ ಎನ್ನಿಸುವುದು.

shivaprasad.hs
|

Updated on: Apr 07, 2022 | 9:45 AM

Share
ನೀರಿನ ತಾಪಮಾನವು ಅದರ ಸುತ್ತಲಿನ ತಾಪಮಾನಕ್ಕೆ ವಿರುದ್ಧವಾಗಿರುವುದು ಏಕೆ ಎಂಬುದು ಕುತೂಹಲಕರ ಪ್ರಶ್ನೆ. ಚಳಿಗಾಲದಲ್ಲಿ, ಗಾಳಿ ತಂಪಾಗಿದ್ದರೂ ನೀರು ಬೆಚ್ಚಗಿರುತ್ತದೆ. ಬೇಸಿಗೆಯಲ್ಲಿ ಬಿಸಿ ಗಾಳಿಯಿದ್ದರೂ ನೀರು ತಂಪಿರುತ್ತದೆ. ಇದಕ್ಕೆ ಕಾರಣ ಏನು? ವಿಜ್ಞಾನಿಗಳು ಏನನ್ನುತ್ತಾರೆ? ಇಲ್ಲಿದೆ ಉತ್ತರ

1 / 5
ಬೇಸಿಗೆಯಲ್ಲೂ ನೀರು ಏಕೆ ತಂಪಾಗಿರುತ್ತದೆ? ಸರಳವಾಗಿ ಹೇಳುವುದಾದರೆ, ನೀರು ಬಿಸಿ ಮಾಡದೆಯೇ ಗರಿಷ್ಠ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಬಿಸಿಮಾಡಲು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ ನದಿಗಳು ಮತ್ತು ಸರೋವರಗಳ ನೀರು ಬೇಸಿಗೆಯಲ್ಲಿ ತಂಪಾಗಿರುತ್ತದೆ. ಪ್ರಪಂಚದ ಅನೇಕ ದೇಶಗಳಲ್ಲಿ ತಾಪಮಾನ ಹೆಚ್ಚಾದಾಗ ಜನರು ನದಿಗಳು ಮತ್ತು ಸಾಗರಗಳ ದಡದಲ್ಲಿ ವಿಹರಿಸುವುದು ಇದಕ್ಕೆ ಉದಾಹರಣೆ.

2 / 5
ಚಳಿಗಾಲದಲ್ಲಿ ನೀರು ಏಕೆ ಬೆಚ್ಚಗಿರುತ್ತದೆ ಎಂದರೆ, ನೀರಿನ ತಾಪಮಾನವು ಅದರ ಅಣುಗಳ ವೇಗವನ್ನು ಅವಲಂಬಿಸಿರುತ್ತದೆ. ನೀರಿನ ಉಷ್ಣತೆಯು ಹೆಚ್ಚಾದಾಗ ಅದರ ಅಣುಗಳು ಬೇಗ ಚಲಿಸುತ್ತವೆ. ಆದರೆ ನೀರಿನ ಅಣುಗಳ ಚಲನೆ ನಿಧಾನವಾದಾಗ, ಅವು ಒಟ್ಟಿಗೆ ಅಂಟಿಕೊಳ್ಳುತ್ತವೆ. ಹೀಗಾದಾಗ ಶಾಖ ಅಂದರೆ ನೀರಿನ ಉಷ್ಣ ಸಾಮರ್ಥ್ಯವು ಹೆಚ್ಚಾಗಿರುತ್ತದೆ. ಇದರಿಂದಾಗಿ ಬಾಹ್ಯ ಪರಿಸರವು ನೀರಿನ ತಾಪಮಾನದ ಮೇಲೆ ಪರಿಣಾಮ ಬೀರುವುದಿಲ್ಲ.

3 / 5
ಒಂದು ವರದಿಯ ಪ್ರಕಾರ, ವಾತಾವರಣವು ನೀರಿನ ಮೂಲದ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಒಂದೇ ರೀತಿ ಇರುತ್ತದೆ. ಹೀಗಾಗಿಯೇ ನಮಗೆ ಚಳಿ ಎನ್ನಿಸಿದಾಗ ನೀರು ಬೆಚ್ಚಗಿದ್ದಂತೆ ಅನ್ನಿಸುತ್ತದೆ ಮತ್ತು ಹೊರಗೆ ಬಿಸಿಲಿನ ವಾತಾವರಣ ಇದ್ದಾಗ ನೀರು ತಣ್ಣಗಿದೆ ಎನ್ನಿಸುವುದು.

4 / 5
ಚಳಿಗಾಲದಲ್ಲಿ ನದಿಗಳು ಮತ್ತು ಸರೋವರಗಳಲ್ಲಿನ ನೀರಿನ ಮೇಲ್ಮೈಯಿಂದ ಹೊಗೆ ಏಕೆ ಹೊರಬರುತ್ತದೆ? ಚಳಿಗಾಲದಲ್ಲಿ ಸಹ ನದಿ ಮತ್ತು ಸಮುದ್ರದ ನೀರು ಘನೀಕರಿಸುವ ಬಿಂದುವಿಗಿಂತ ತಂಪಾಗಿರುವುದಿಲ್ಲ. ಆದ್ದರಿಂದ ಸಮುದ್ರದ ಮೇಲ್ಮೈ ಮೇಲಿನ ತಂಪಾದ ಗಾಳಿಗಿಂತ ಬೆಚ್ಚಗಿರುತ್ತದೆ. ಈ ಬಿಸಿ ಮತ್ತು ಶೀತ ವಾತಾವರಣದಿಂದಾಗಿ, ಬಹಳಷ್ಟು ನೀರು ಆವಿಯಾಗುತ್ತದೆ. ದೂರದಿಂದ ನೋಡಿದಾಗ ಇದು ಗಾಳಿಯಂತೆ ಕಾಣುತ್ತದೆ.

5 / 5
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್