ವಿದೇಶದಲ್ಲಿ ಅಲ್ಲು ಅರ್ಜುನ್ ಬರ್ತ್ಡೇ ಸೆಲಬ್ರೇಷನ್; ಇಲ್ಲಿದೆ ಫೋಟೋ ಗ್ಯಾಲರಿ
ಕೊವಿಡ್ ಕಡಿಮೆ ಆಗಿದೆ. ಇದರ ಜತೆಗೆ ‘ಪುಷ್ಪ’ ಸಿನಿಮಾ ಯಶಸ್ಸಿನ ಅಲೆಯಲ್ಲಿದ್ದಾರೆ ಅಲ್ಲು ಅರ್ಜುನ್. ಹೀಗಾಗಿ, ಅಲ್ಲು ಅರ್ಜುನ್ ಅವರು ಬರ್ತ್ಡೇಯನ್ನು ದೊಡ್ಡ ಮಟ್ಟದಲ್ಲೇ ಆಚರಿಸಿದ್ದಾರೆ.
Updated on: Apr 08, 2022 | 7:03 PM

ನಟ ಅಲ್ಲು ಅರ್ಜುನ್ ಅವರು ಇಂದು (ಏಪ್ರಿಲ್ 8) 40ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಬರ್ತ್ಡೇ ಪ್ರಯುಕ್ತ ಅಭಿಮಾನಿಗಳು ಅಲ್ಲು ಅರ್ಜುನ್ ಅವರಿಗೆ ಶುಭಕೋರುತ್ತಿದ್ದಾರೆ. ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ಅವರ ನಟನೆಯ ‘ಪುಷ್ಪ’ ಚಿತ್ರ ದೊಡ್ಡ ಯಶಸ್ಸು ಗಳಿಸಿದೆ. ಈ ಕಾರಣಕ್ಕೆ ಅವರಿಗೆ ಈ ವರ್ಷ ಬರ್ತ್ಡೇ ತುಂಬಾನೇ ವಿಶೇಷವಾಗಿದೆ.

ಕೊವಿಡ್ ಕಡಿಮೆ ಆಗಿದೆ. ಇದರ ಜತೆಗೆ ‘ಪುಷ್ಪ’ ಸಿನಿಮಾ ಯಶಸ್ಸಿನ ಅಲೆಯಲ್ಲಿದ್ದಾರೆ ಅಲ್ಲು ಅರ್ಜುನ್. ಹೀಗಾಗಿ, ಅಲ್ಲು ಅರ್ಜುನ್ ಅವರು ಬರ್ತ್ಡೇಯನ್ನು ದೊಡ್ಡ ಮಟ್ಟದಲ್ಲೇ ಆಚರಿಸಿದ್ದಾರೆ.

ಅಲ್ಲು ಅರ್ಜುನ್ ತಮ್ಮ ಆಪ್ತರೊಂದಿಗೆ ಸೆರ್ಬಿಯಾ ದೇಶದ ಬೆಲ್‌ಗ್ರೇಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಜತೆಗೆ ಕನ್ನಡ ಹೀರೋ ಧನಂಜಯ ಅವರು ಸ್ಕ್ರೀನ್ ಶೇರ್ ಮಾಡಿದ್ದಾರೆ. ಅವರು ಅಲ್ಲು ಅರ್ಜುನ್ ಜತೆಗಿನ ಫೋಟೋ ಹಂಚಿಕೊಂಡು ಶುಭಕೋರಿದ್ದಾರೆ.

‘ಪುಷ್ಪ 2’ ಸಿನಿಮಾದ ಶೂಟಿಂಗ್ ಇನ್ನೇನು ಕೆಲವೇ ತಿಂಗಳಲ್ಲಿ ಶುರುವಾಗಲಿದೆ. 2023ರ ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕೆ ಇದೆ ಎಂದು ವರದಿ ಆಗಿದೆ.
























