ಅಲ್ಲು ಅರ್ಜುನ್ ಜನ್ಮದಿನ: ಟಾಲಿವುಡ್ ಸ್ಟಾರ್ ನಟನ ಬಗ್ಗೆ ಇಲ್ಲಿವೆ 5 ವಿಶೇಷ ಮಾಹಿತಿ
Allu Arjun Birthday: ನಟ ಅಲ್ಲು ಅರ್ಜುನ್ ಅವರಿಗೆ ಇಂದು (ಏ.8) ಜನ್ಮದಿನದ ಸಂಭ್ರಮ. ಅವರಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಅಲ್ಲು ಅರ್ಜುನ್ ಕುರಿತ ಕೆಲವು ಸ್ಪೆಷಲ್ ಮಾಹಿತಿ ಇಲ್ಲಿದೆ..
Updated on: Apr 08, 2022 | 12:12 PM

Allu Arjun Birthday: Pushpa Actor Allu Arjun five lesser-known facts

Allu Arjun Birthday: Pushpa Actor Allu Arjun five lesser-known facts

ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿದ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಹೆಸರು ಕೂಡ ಇದೆ. 2014ರಿಂದ ಈಚೆಗೆ ಹಲವು ಬಾರಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅವರು ಭಾರತದ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ 100 ಕೋಟಿ ರೂಪಾಯಿ ಗಳಿಸಿ ಬೀಗಿತು. ಅದಕ್ಕೂ ಮುನ್ನ ಅವರ ಕೆಲವು ಸಿನಿಮಾಗಳು ಈ ಸಾಧನೆ ಮಾಡಿದ್ದವು. 2014ರಲ್ಲಿ ‘ರೇಸು ಗುರ‍್ರಂ’ ಕೂಡ ಶತಕೋಟಿ ರೂಪಾಯಿ ಗಳಿಸಿತ್ತು. ‘ಸರೈನೋಡು’, ‘ದುವ್ವಡ ಜಗನ್ನಾಥಂ’ ಹಾಗೂ ‘ಅಲಾ ವೈಕುಂಟಪುರಮುಲೋ’ ಸಿನಿಮಾಗಳು ಕೂಡ 100 ಕೋಟಿ ರೂ. ಕಲೆಕ್ಷನ್ ಮಾಡಿದ್ದವು.

ತಮ್ಮ ಅತ್ಯುತ್ತಮ ನಟನೆಯಿಂದ ಅಲ್ಲು ಅರ್ಜುನ್ ಅವರು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 5 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ 5 ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದಾರೆ.
























