ಯಶ್​ ಮಾತ್ರವಲ್ಲ, ಫ್ಯಾನ್ಸ್​ ಕೂಡ ಮಾಡ್ತಿದ್ದಾರೆ ದಾಖಲೆ; ಸಿದ್ಧವಾಗ್ತಿದೆ ಅತಿ ದೊಡ್ಡ ಮೊಸಾಯಿಕ್​ ಪೋಟ್ರೇಟ್

ಯಶ್​ ಅಭಿಮಾನಿಗಳು ಅತಿ ದೊಡ್ಡ ಮೊಸಾಯಿಕ್​ ಬುಕ್​ ಪೋಟ್ರೇಟ್​ ರಚಿಸುತ್ತಿದ್ದಾರೆ. ಇದು ಬರೋಬ್ಬರಿ 21,600 ಚದರ ಅಡಿ ಇರಲಿದೆ.

ಯಶ್​ ಮಾತ್ರವಲ್ಲ, ಫ್ಯಾನ್ಸ್​ ಕೂಡ ಮಾಡ್ತಿದ್ದಾರೆ ದಾಖಲೆ; ಸಿದ್ಧವಾಗ್ತಿದೆ ಅತಿ ದೊಡ್ಡ ಮೊಸಾಯಿಕ್​ ಪೋಟ್ರೇಟ್
ಮೊಸಾಯಿಕ್​ ಬುಕ್​ ಪೋಟ್ರೇಟ್​ ರಚಿಸುತ್ತಿರುವ ಯಶ್​ ಅಭಿಮಾನಿಗಳು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 10, 2022 | 8:38 AM

ಚಿತ್ರರಂಗದಲ್ಲಿ ನಟ ಯಶ್​ (Yash) ಅವರು ಹೊಸ ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದ್ದಾರೆ. ‘ಕೆಜಿಎಫ್​’ ಸಿನಿಮಾದಿಂದ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ಈ ಸಿನಿಮಾ ಮಾಡಿರುವ ದಾಖಲೆಗಳು ಒಂದೆರಡಲ್ಲ. ಪರಭಾಷೆಯ ಸ್ಟಾರ್ ಕಲಾವಿದರ ಸಿನಿಮಾಗಳಿಗೂ ಪೈಪೋಟಿ ನೀಡುವ ಮಟ್ಟಕ್ಕೆ ಯಶ್​ ಬೆಳೆದು ನಿಂತಿದ್ದಾರೆ. ಏ.14ರಂದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ (KGF Chapter 2) ವಿಶ್ವಾದ್ಯಂತ ರಿಲೀಸ್​ ಆಗುತ್ತಿದೆ. ಈಗಾಗಲೇ ಈ ಚಿತ್ರದ ಟ್ರೇಲರ್​ ಧೂಳೆಬ್ಬಿಸಿದೆ. ತುಂಬ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಪ್ರಚಾರ ಕಾರ್ಯದಲ್ಲಿ ಯಶ್​ ಫ್ಯಾನ್ಸ್ ಕೂಡ ಕೈ ಜೋಡಿಸಿದ್ದಾರೆ. ಸಿನಿಮಾ ಮೂಲಕ ಯಶ್​ ಹಲವು ಬಗೆಯ ದಾಖಲೆಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಯಶ್​ ಅಭಿಮಾನಿಗಳು (Yash Fans) ಕೂಡ ದಾಖಲೆಗಳನ್ನು ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಆಗುತ್ತಿರುವ ಈ ಸಂದರ್ಭದಲ್ಲಿ ಹಲವು ಬಗೆಯ ಸಾಹಸಗಳನ್ನು ಫ್ಯಾನ್ಸ್​ ಮಾಡುತ್ತಿದ್ದಾರೆ. ಈಗ ಅತಿ ದೊಡ್ಡ ಮೊಸಾಯಿಕ್​ ಬುಕ್​ ಪೋಟ್ರೇಟ್​ ರಚಿಸಲು ‘ರಾಕಿಂಗ್​ ಸ್ಟಾರ್​’ ಯಶ್​ ಅಭಿಮಾನಿಗಳು ಮುಂದಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಈ ಹಿಂದೆ ಯಶ್​ ಅಭಿಮಾನಿಗಳು ಅತಿ ದೊಡ್ಡ ಕಟೌಟ್​ ನಿರ್ಮಿಸುವ ಪ್ರಯತ್ನ ಮಾಡಿ ಗಮನ ಸೆಳೆದಿದ್ದರು. ಅದೇ ರೀತಿ ಈಗ ಅತಿ ದೊಡ್ಡ ಮೊಸಾಯಿಕ್​ ಬುಕ್​ ಪೋಟ್ರೇಟ್​ ರಚಿಸುತ್ತಿದ್ದಾರೆ. ಇದನ್ನು ವಿಶ್ವದ ಅತಿ ದೊಡ್ಡ ಮೊಸಾಯಿಕ್​ ಬುಕ್​ ಪೋಟ್ರೇಟ್ ಎಂದು ಹೇಳಿಕೊಳ್ಳಲಾಗುತ್ತಿದೆ. ಇದಕ್ಕಾಗಿ 20,700 ಬುಕ್​ಗಳನ್ನ ಬಳಸಲಾಗುತ್ತಿದೆ. ಇದು ಬರೋಬ್ಬರಿ 21,600 ಚದರ ಅಡಿ ಇರಲಿದೆ. ಮಾಲೂರಿನ ವೈಟ್ ಗಾರ್ಡನ್ ಗ್ರೌಂಡ್ಸ್​ನಲ್ಲಿ ಪೋಟ್ರೇಟ್ ಮಾಡಲಾಗುತ್ತಿದೆ. ಮಾಲೂರಿನ ಯಶ್ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಈ ಕಾರ್ಯ ಆಗುತ್ತಿದೆ.

‘ಕೆಜಿಎಫ್​: ಚಾಪ್ಟರ್​ 2’ ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಪ್ರೇಕ್ಷಕರಿಂದ ಸಿನಿಮಾಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಇರುವ ಸಿನಿಪ್ರಿಯರು ಈ ಸಿನಿಮಾ ಬಗ್ಗೆ ಹೆಚ್ಚು ಉತ್ಸಾಹ ತೋರಿಸುತ್ತಿದ್ದಾರೆ. ಮುಂಬೈ, ದೆಹಲಿ ಮುಂತಾದ ನಗರಗಳಲ್ಲಿ ಈ ಸಿನಿಮಾದ ಪ್ರಚಾರ ಮಾಡಲಾಗಿದೆ. ಮುಂಬೈನ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಪೋಸ್ಟರ್​ಗಳು ರಾರಾಜಿಸುತ್ತಿವೆ. ಅಭಿಮಾನಿಗಳೇ ವಿನ್ಯಾಸ ಮಾಡಿದ ಪೋಸ್ಟರ್​ಗಳನ್ನು ಬಳಸಿ ಭರ್ಜರಿಯಾಗಿ ಪ್ರಮೋಷನ್​ ಮಾಡಲಾಗುತ್ತಿದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದು, ವಿಜಯ್​ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಯಶ್​ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಅವರ ನಟಿಸಿರುವ ಕಾರಣ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಆಗಿದೆ. ಈಗಾಗಲೇ ಹಿಂದಿ ಅವತರಣಿಕೆಯ ಅಡ್ವಾನ್​ ಟಿಕೆಟ್​ ಬುಕಿಂಗ್​ ಓಪನ್​ ಆಗಿದೆ. ಜನರು ಮುಗಿಬಿದ್ದು ಟಿಕೆಟ್​ ಖರೀದಿಸುತ್ತಿದ್ದಾರೆ. ಏ.10ರಿಂದ ಕನ್ನಡ ಅವತರಣಿಕೆಯ ಟಿಕೆಟ್​ ಬುಕಿಂಗ್​ ಕೂಡ ಆರಂಭ ಆಗಿದೆ.

ಗಲ್ಲಾಪೆಟ್ಟಿಗೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಅತಿ ದೊಡ್ಡ ದಾಖಲೆ ಬರೆಯುವ ಸೂಚನೆ ಸಿಕ್ಕಿದೆ. ಅದ್ದೂರಿ ಆ್ಯಕ್ಷನ್​ ದೃಶ್ಯಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಮೊದಲ ದಿನ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಬಹುದು ಎಂಬ ಬಗ್ಗೆಯೂ ಈಗಾಗಲೇ ಚರ್ಚೆ ಶುರುವಾಗಿದೆ. ಯಶ್​ ವೃತ್ತಿಜೀವನದಲ್ಲಿ ಅತಿ ದೊಡ್ಡ ಓಪನಿಂಗ್​ ‘ಕೆಜಿಎಫ್​ 2’ ಸಿನಿಮಾಗೆ ಸಿಗಲಿದೆ. ವಿದೇಶದ ನೂರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:

ಯಶ್​, ಪ್ರಶಾಂತ್​ ಅವರನ್ನು ಸಂದರ್ಶನ ಮಾಡಿದ ಬಾಲಿವುಡ್​ ಸ್ಟಾರ್​ ನಟ; ಇಲ್ಲಿದೆ ವಿಡಿಯೋ

‘ಸಲ್ಮಾನ್ ಖಾನ್​​, ಶಾರುಖ್ ಖಾನ್​​​ಗೆ ನನ್ನ ಹೋಲಿಸಬೇಡಿ’; ಯಶ್​ ನೇರ ಮಾತು

Published On - 8:06 am, Sun, 10 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ