AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿ-ಬುಕ್ಕಿಂಗ್​ನಲ್ಲಿ ದಾಖಲೆ ಬರೆಯುತ್ತಿರುವ ‘ಕೆಜಿಎಫ್ 2’; ಇದುವರೆಗೆ ಆದ ಕಲೆಕ್ಷನ್ ಎಷ್ಟು? ಮೊದಲ ದಿನ ಎಷ್ಟು ಗಳಿಸಬಹುದು?

KGF Chapter 2 Pre Booking | Yash | Sanjay Dutt: ಯಶ್, ಸಂಜಯ್ ದತ್ ಮೊದಲಾದ ಖ್ಯಾತ ಕಲಾವಿದರು ನಟಿಸಿರುವ ಚಿತ್ರ ಬಿಡುಗಡೆಗೂ ಮುನ್ನವೇ ಹಲವು ದಾಖಲೆಗಳನ್ನು ಬರೆಯುತ್ತಿದೆ. ಈ ಅಂಕಿಅಂಶಗಳ ಅಂದಾಜಿನಲ್ಲಿ ಏಪ್ರಿಲ್ 14ರಂದು ‘ಕೆಜಿಎಫ್ ಚಾಪ್ಟರ್ 2’ ಒಟ್ಟಾರೆ ಎಷ್ಟು ಗಳಿಸಬಹುದು ಎಂಬ ಚರ್ಚೆಯೂ ಜೋರಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ದೊಡ್ಡ ಆರಂಭ ಕಂಡಿದ್ದ ‘ಆರ್​ಆರ್​​ಆರ್​’ ದಾಖಲೆಯನ್ನೂ ‘ಕೆಜಿಎಫ್ 2’ ಮುರಿಯಬಹುದು ಎಂದು ವರದಿಗಳು ಹೇಳಿವೆ.

ಪ್ರಿ-ಬುಕ್ಕಿಂಗ್​ನಲ್ಲಿ ದಾಖಲೆ ಬರೆಯುತ್ತಿರುವ ‘ಕೆಜಿಎಫ್ 2’; ಇದುವರೆಗೆ ಆದ ಕಲೆಕ್ಷನ್ ಎಷ್ಟು? ಮೊದಲ ದಿನ ಎಷ್ಟು ಗಳಿಸಬಹುದು?
‘ಕೆಜಿಎಫ್ 2’ ಚಿತ್ರದಲ್ಲಿ ಯಶ್
TV9 Web
| Edited By: |

Updated on:Apr 12, 2022 | 12:34 PM

Share

ಸದ್ಯ ದೇಶದಲ್ಲಿ ‘ಕೆಜಿಎಫ್ 2’ (KGF Chapter 2) ಹವಾ ಜೋರಾಗಿದೆ. ಎಲ್ಲೆಡೆ ಪ್ರಿ-ಬುಕ್ಕಿಂಗ್ ಪ್ರಾರಂಭವಾಗಿದ್ದು, ಟಿಕೆಟ್​ಗಳು ಸೋಲ್ಡ್ ಔಟ್ ಆಗುತ್ತಿವೆ. ಈ ನಡುವೆ ಹಿಂದಿ ಭಾಷಿಕ ರಾಜ್ಯಗಳಲ್ಲೂ ‘ಕೆಜಿಎಫ್ 2’ಗೆ ಪ್ರತಿಸ್ಪರ್ಧಿ ಯಾರಿಲ್ಲ. ಈ ಹಿಂದೆ ತೆರೆಕಾಣುವುದಾಗಿ ಘೋಷಿಸಿದ್ದ ‘ಜೆರ್ಸಿ’ ಹಿಂದೆ ಸರಿದಿದ್ದು, ಈ ಹಿನ್ನೆಲೆಯಲ್ಲಿ ‘ಕೆಜಿಎಫ್ 2’ಗೆ ಮತ್ತಷ್ಟು ಶೋ ಸಿಗಲಿವೆ ಎಂದು ವರದಿಗಳು ಹೇಳಿವೆ. ಯಶ್ (Yash), ಶ್ರೀನಿಧಿ ಶೆಟ್ಟಿ ಜತೆಗೆ ಸಂಜಯ್ ದತ್ (Sanjay Dutt), ರವೀನಾ ಟಂಡನ್, ಪ್ರಕಾಶ್ ರಾಜ್ ಮೊದಲಾದ ಖ್ಯಾತ ಕಲಾವಿದರು ನಟಿಸಿರುವ ಚಿತ್ರ ಬಿಡುಗಡೆಗೂ ಮುನ್ನವೇ ಹಲವು ದಾಖಲೆಗಳನ್ನು ಬರೆಯುತ್ತಿದೆ. ಈ ಅಂಕಿಅಂಶಗಳ ಅಂದಾಜಿನಲ್ಲಿ ಏಪ್ರಿಲ್ 14ರಂದು ‘ಕೆಜಿಎಫ್ ಚಾಪ್ಟರ್ 2’ ಒಟ್ಟಾರೆ ಎಷ್ಟು ಗಳಿಸಬಹುದು ಎಂಬ ಚರ್ಚೆಯೂ ಜೋರಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ದೊಡ್ಡ ಆರಂಭ ಕಂಡಿದ್ದ ‘ಆರ್​​ಆರ್​ಆರ್​’ ದಾಖಲೆಯನ್ನೂ ‘ಕೆಜಿಎಫ್ 2’ ಮುರಿಯಬಹುದು ಎಂದು ವರದಿ ಮಾಡಿದೆ ಬಾಲಿವುಡ್ ಹಂಗಾಮಾ. ಪ್ರಸ್ತುತ ಪ್ರಿ-ಬುಕ್ಕಿಂಗ್ ಆರಂಭವಾಗಿದ್ದು, ‘ಕೆಜಿಎಫ್ 2’ ಇದುವರೆಗೆ ಮೊದಲ ದಿನಕ್ಕೆ (ಏ.14) ಸುಮಾರು 20.25 ಕೋಟಿ ರೂಗಳನ್ನು ಈಗಾಗಲೇ ಬಾಚಿಕೊಂಡಿದೆ ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿ ಇದುವರೆಗೆ ಪ್ರಿ ಬುಕ್ಕಿಂಗ್​ನಿಂದ ಸುಮಾರು 4.90 ಕೋಟಿ ರೂ, ಹಿಂದಿಯಲ್ಲಿ 11.40 ಕೋಟಿ ರೂ, ಮಲಯಾಳಂನಲ್ಲಿ 1.90 ಕೋಟಿ ರೂ ಕಲೆಕ್ಷನ್ ಆಗಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಇತ್ತೀಚೆಗೆ ಬುಕ್ಕಿಂಗ್ ಆರಂಭವಾಗಿದೆ. ತಮಿಳುನಾಡಿನಲ್ಲಿ ಬುಕ್ಕಿಂಗ್​ನಿಂದ ಇದುವರೆಗೆ 2 ಕೋಟಿ ರೂ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

ಈ ಬಗ್ಗೆ ಇಂಡಿಯನ್ ಬಾಕ್ಸಾಫೀಸ್ ಹಂಚಿಕೊಂಡಿರುವ ಟ್ವೀಟ್:

ಉತ್ತರ ಭಾರತದಲ್ಲಿ ಕೆಜಿಎಫ್ 2 ಮೊದಲ ದಿನ ಎಷ್ಟು ಗಳಿಸಬಹುದು?

ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ ಪ್ರಿ-ಬುಕ್ಕಿಂಗ್ ಕಲೆಕ್ಷನ್ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬುಧವಾರ ರಾತ್ರಿಯೊಳಗೆ ‘ಕೆಜಿಎಫ್ 2’ ಅಡ್ವಾನ್ಸ್ ಬುಕ್ಕಿಂಗ್​ನಿಂದ ಒಟ್ಟಾರೆ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವುದರ ಮಾಹಿತಿ ಖಚಿತವಾಗಿ ಲಭ್ಯವಾಗಬಹುದು. ಉತ್ತರ ಭಾರತವೊಂದರಲ್ಲೇ ‘ಕೆಜಿಎಫ್ 2’ ಮೊದಲ ದಿನ ಏನಿಲ್ಲವೆಂದರೂ 40 ಕೋಟಿ ರೂಗಳನ್ನು ಗಳಿಸಬಹುದು. ಇದು 50 ಕೋಟಿ ರೂ ತಲುಪಿದರೂ ಅಚ್ಚರಿಯಿಲ್ಲ. ಇದು ಕೇವಲ ಹಿಂದಿ ಭಾಷಿಕ ರಾಜ್ಯಗಳ ಮೊತ್ತ ಮಾತ್ರ ಎಂದು ಹೇಳಲಾಗಿದೆ. ‘ಕೆಜಿಎಫ್ 2’ ಮೊದಲ ದಿನ ದೊಡ್ಡದೊಂದು ದಾಖಲೆ ಬರೆಯಲಿದೆ ಎನ್ನುವುದು ಹಲವು ಬಾಕ್ಸಾಫೀಸ್ ವಿಶ್ಲೇಷಕರ ಮಾತು.

ಶ್ರೀನಿವಾಸ ಚಿತ್ರಮಂದಿರವೊಂದರಲ್ಲೇ ಪ್ರಿ- ಬುಕ್ಕಿಂಗ್ ಮೂಲಕ 15 ಲಕ್ಷ ಕಲೆಕ್ಷನ್:

ಬೆಂಗಳೂರು ನಗರದ ಶ್ರೀನಿವಾಸ ಥಿಯೇಟರ್​ನಲ್ಲಿ ಈಗಾಗಲೇ ಫಸ್ಟ್ ಡೇ ಟಿಕೇಟ್ಸ್ ಸೋಲ್ಡ್ ಔಟ್ ಆಗಿವೆ. ‘‘8 ಶೋಗಳು ಹೌಸ್ ಪುಲ್ ಆಗಿದ್ದು, ಇದೇ ಚಿತ್ರಮಂದಿರದಲ್ಲಿ ಕೆಜಿಎಫ್ 2 ಮೊದಲು ಪ್ರದರ್ಶನ ಕಾಣಲಿದೆ. ಕೆಜಿಎಫ್ 1 ನಂತರ ಆ ಕ್ರೇಜ್​ನ ಕೆಜಿಎಫ್ 2 ಬೀಟ್ ಮಾಡುತ್ತಿದೆ. 10 ಪಟ್ಟು ದುಪ್ಪಟ್ಟು ಕಲೆಕ್ಷನ್ ಆಗುತ್ತಿದೆ. ಬರೀ ಜನರಷ್ಟೇ ಅಲ್ಲಾ ಕ್ರಿಕೆಟರ್ಸ್ ಕೂಡ ಸಿನಿಮಾ ನೋಡೋಕೆ ಕಾಯುತ್ತಿದ್ದಾರೆ. ಮೊದಲ ದಿನವೇ ನಮ್ಮ ಚಿತ್ರಮಂದಿರದಲ್ಲಿ ಅಡ್ವಾನ್ಸ್ ಪ್ರೀ ಬುಕಿಂಗ್​ನಲ್ಲಿ ಸುಮಾರು 15 ಲಕ್ಷ ರೂ ಕಲೆಕ್ಷನ್ ಆಗಿದೆ. ಕೆಜಿಎಫ್ 2 ನಮಗೆಲ್ಲಾ ಹೆಮ್ಮೆಯ ಸಿನಿಮಾ. ಗುರುವಾರ ಅಲ್ಲ ಶುಕ್ರವಾರ ಟಿಕೇಟ್ಸ್ ಕೂಡ ಸೋಲ್ಡ್ ಔಟ್ ಆಗಿದೆ. RRR ಸಿನಿಮಾದ ರೆಕಾರ್ಡ್​ನ ಖಂಡಿತ ಬ್ರೇಕ್‌ ಮಾಡುತ್ತದೆ’’ ಎಂದು ಶ್ರೀನಿವಾಸ ಥಿಯೇಟರ್ ಮ್ಯಾನೇಜರ್ ರವಿ ನುಡಿದಿದ್ದಾರೆ.

ಬೀಸ್ಟ್ ನಡುವೆಯೂ ತಮಿಳು ನಾಡಿನಲ್ಲಿ ರಾಕಿ ಭಾಯ್ ಹವಾ; ಇಲ್ಲಿದೆ ಸಾಕ್ಷಿ:

ಬೀಸ್ಟ್ ನಡುವೆಯು ತಮಿಳುನಾಡಿನಲ್ಲಿ ರಾಕಿಭಾಯ್ ಹವಾ ಜೋರಾಗಿದೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ. ‘ಮಾಯಾಜಾಲ್ ಮಲ್ಟಿಪ್ಲೆಕ್ಸ್’ನಲ್ಲಿ ಒಂದೆ ದಿನಕ್ಕೆ 40 ಶೋ ಏರ್ಪಡಿಸಲಾಗಿದೆ. ಮುಂಜಾನೆ 4 ಗಂಟೆಯಿಂದ 4.30 ಅಷ್ಟರಲ್ಲಿ 12 ಶೋ ಇದ್ದು, ಪ್ರತಿ ಒಂದು ನಿಮಿಷ ಐದು ನಿಮಿಷ ಅಂತರದಲ್ಲಿ ಪ್ರದರ್ಶನ ಆರಂಭವಾಗಲಿದೆ. ಎಲ್ಲಾ ಶೋ ಆಲ್ಮೋಸ್ಟ್ ಹೌಸ್ ಫುಲ್ ಆಗಿದೆ.

ಇದನ್ನೂ ಓದಿ: ಹೊರಬಿತ್ತು ‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾದ ಮೊದಲ ವಿಮರ್ಶೆ; ಐದಕ್ಕೆ ಐದು ಸ್ಟಾರ್​

ನೀಳ ತಲೆಗೂದಲನ್ನು ಕತ್ತರಿಸಿ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡ ಅನುಪಮಾ ಗೌಡ; ಇದಕ್ಕಿದೆ ಮಹತ್ತರ ಕಾರಣ

Published On - 12:27 pm, Tue, 12 April 22