ಬಾಲಿವುಡ್ ಒಂದರಲ್ಲೇ 300 ಕೋಟಿ ರೂಪಾಯಿ ಬಾಚಲಿದೆ ‘ಕೆಜಿಎಫ್ 2’? ಹೌದೆನ್ನುತ್ತಿದ್ದಾರೆ ಪಂಡಿತರು
ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದ ‘ವಾರ್’ ಚಿತ್ರಕ್ಕೆ ಇತ್ತು. ಈ ಚಿತ್ರ 51 ಕೋಟಿ ರೂಪಾಯಿ ಗಳಿಸಿತ್ತು. ಈಗ ‘ಕೆಜಿಎಫ್ 2’ ಇದನ್ನು ಬ್ರೇಕ್ ಮಾಡಿದೆ.
‘ಕೆಜಿಎಫ್ ಚಾಪ್ಟರ್ 2’ (KGF Chapter 2) ಸಿನಿಮಾ ಮೊದಲ ದಿನವೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈ ಚಿತ್ರ ಹಿಂದಿ ಚಿತ್ರರಂಗದಲ್ಲಿ ಯಾರೂ ಊಹಿಸದಷ್ಟು ಕಲೆಕ್ಷನ್ ಮಾಡಿದೆ. ಏಪ್ರಿಲ್ 14ರಂದು ರಿಲೀಸ್ ಆದ ಈ ಚಿತ್ರಕ್ಕೆ ಮೊದಲ ದಿನ ಹಿಂದಿಯಲ್ಲಿ 53.95 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬಾಲಿವುಡ್ (Bollywood) ಮಂದಿ ಈ ಲೆಕ್ಕಾಚಾರ ಕೇಳಿ ಅಚ್ಚರಿ ಹೊರಹಾಕುತ್ತಿದ್ದಾರೆ. ವಿಶೇಷ ಎಂದರೆ ‘ಆರ್ಆರ್ಆರ್’ ಸಿನಿಮಾದ (RRR Movie) ಬಾಕ್ಸ್ ಆಫೀಸ್ ಗಳಿಕೆ ಮೊದಲ ದಿನ 20 ಕೋಟಿ ರೂಪಾಯಿ ಆಸುಪಾಸಿನಲ್ಲಿತ್ತು. ಯಶ್ ಸಿನಿಮಾ ನುಗ್ಗುತ್ತಿರುವ ವೇಗ ನೋಡಿದರೆ, ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂಪಾಯಿ ಬಾಚಿಕೊಳ್ಳುವ ಸೂಚನೆ ಸಿಕ್ಕಿದೆ.
ಹಿಂದಿ ಚಿತ್ರರಂಗದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದ ‘ವಾರ್’ ಚಿತ್ರಕ್ಕೆ ಇತ್ತು. ಈ ಚಿತ್ರ 51 ಕೋಟಿ ರೂಪಾಯಿ ಗಳಿಸಿತ್ತು. ಈಗ ‘ಕೆಜಿಎಫ್ 2’ ಇದನ್ನು ಬ್ರೇಕ್ ಮಾಡಿದೆ. ಶುಕ್ರವಾರ (ಏಪ್ರಿಲ್ 15) ಗುಡ್ ಫ್ರೈಡೇ, ಶನಿವಾರ (ಏಪ್ರಿಲ್ 16) ಹಾಗೂ ಭಾನುವಾರ (ಏಪ್ರಿಲ್ 17) ವೀಕೆಂಡ್ ರಜೆ ಇದೆ. ಇತಿಹಾಸ ಕೆದಕಿ ನೋಡಿದಾಗ ಮೊದಲ ದಿನ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕರೆ, ಆ ಚಿತ್ರದ ಕಲೆಕ್ಷನ್ ಮುಂದಿನ ದಿನಗಳಲ್ಲಿ ಹೆಚ್ಚುತ್ತದೆ. ‘ಆರ್ಆರ್ಆರ್’ ಸೇರಿ ಅನೇಕ ಚಿತ್ರಗಳ ವಿಚಾರದಲ್ಲಿ ಹೀಗೆಯೇ ಆಗಿದೆ. ಹೀಗಾಗಿ, ‘ಕೆಜಿಎಫ್ 2’ಗೂ ಇದೇ ರೀತಿಯ ಅವಕಾಶ ಇದೆ. ಈ ಚಿತ್ರ ಮೂರು ದಿನ ಕನಿಷ್ಠ 35 ಕೋಟಿ ರೂ. ಬಾಚಿದರೂ ಚಿತ್ರದ ಕಲೆಕ್ಷನ್ 150 ಕೋಟಿ ರೂ. ದಾಟಲಿದೆ.
‘KGF2’ CREATES HISTORY, BIGGEST DAY 1 TOTAL… #KGF2 has demolished *opening day* records of #War and #ThugsOfHindostan… #KGFChapter2 is now BIGGEST OPENER in #India [#Hindi version]… *Day 1* biz… ⭐️ #KGF2: ₹ 53.95 cr ⭐️ #War: ₹ 51.60 cr ⭐️ #TOH: ₹ 50.75 cr Nett. #India biz. pic.twitter.com/XES04m8HTe
— taran adarsh (@taran_adarsh) April 15, 2022
‘ಆರ್ಆರ್ಆರ್’ ಸಿನಿಮಾ ಹಿಂದಿ ಬಾಕ್ಸ್ ಆಫೀಸ್ನಲ್ಲಿ 240 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ‘ಆರ್ಆರ್ಆರ್’ ಚಿತ್ರಕ್ಕೆ ಸಿಕ್ಕ ಸ್ವಾಗತಕ್ಕಿಂತಲೂ ‘ಕೆಜಿಎಫ್ 2’ಗೆ ಸಿಕ್ಕ ಸ್ವಾಗತ ದೊಡ್ಡದೇ. ಹೀಗಾಗಿ, ಈ ಚಿತ್ರ ಹಿಂದಿಯಿಂದ 300 ಕೋಟಿ ರೂಪಾಯಿ ಬಾಚಿಕೊಳ್ಳೋದು ಪಕ್ಕಾ ಎನ್ನಲಾಗುತ್ತಿದೆ. ಈ ವೀಕೆಂಡ್ನಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
‘ಕೆಜಿಎಫ್ 2’ ಚಿತ್ರ ರಿಲೀಸ್ ಆದ ದಿನವೇ ಪೈರಸಿ ಆಗಿದೆ. ಆದರೆ, ಇದು ಚಿತ್ರದ ಕಲೆಕ್ಷನ್ಗೆ ಅಷ್ಟು ದೊಡ್ಡ ಹೊಡೆತ ನೀಡಿಲ್ಲ. ನಿಜವಾದ ಸಿನಿಪ್ರಿಯರು ‘ಕೆಜಿಎಫ್ 2’ ಚಿತ್ರವನ್ನು ಥಿಯೇಟರ್ಗೆ ತೆರಳಿಯೇ ವೀಕ್ಷಣೆ ಮಾಡುತ್ತಿದ್ದಾರೆ. ‘ಕೆಜಿಎಫ್ 2’ಗೂ ಮೊದಲು ತೆರೆಗೆ ಬಂದ ‘ಬೀಸ್ಟ್’ ಸಿನಿಮಾ ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ: ಬಾಲಿವುಡ್ ಇತಿಹಾಸದಲ್ಲೇ ದಾಖಲೆ ಬರೆದ ‘ಕೆಜಿಎಫ್ 2’ ಮೊದಲ ದಿನದ ಕಲೆಕ್ಷನ್