ಆಲಿಯಾ-ರಣಬೀರ್​ ಆಸ್ತಿ ಸೇರಿದರೆ ಆಗಲಿದೆ 840 ಕೋಟಿ ರೂಪಾಯಿ! ಇದರಲ್ಲಿ ಯಾರ ಪಾಲು ಎಷ್ಟು?

ಆಲಿಯಾ-ರಣಬೀರ್​ ಆಸ್ತಿ ಸೇರಿದರೆ ಆಗಲಿದೆ 840 ಕೋಟಿ ರೂಪಾಯಿ! ಇದರಲ್ಲಿ ಯಾರ ಪಾಲು ಎಷ್ಟು?
ಆಲಿಯಾ ಭಟ್, ರಣಬೀರ್ ಕಪೂರ್

Alia Bhatt Ranbir Kapoor Net Worth: ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಕಲಾವಿದರು. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

TV9kannada Web Team

| Edited By: Madan Kumar

Apr 15, 2022 | 12:19 PM

ನಿರೀಕ್ಷೆಯಂತೆಯೇ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ (Ranbir Kapoor) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ಅವರ ವಿವಾಹ ನೆರವೇರಿದೆ. ಏ.14ರಂದು ಈ ಜೋಡಿ ಹಸೆಮಣೆ ಏರಿದೆ. ನವದಂಪತಿಗೆ ಎಲ್ಲರಿಂದಲೂ ಅಭಿನಂದನೆಗಳ ಸುರಿಮಳೆ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಆಲಿಯಾ ಭಟ್​-ರಣಬೀರ್​ ಕಪೂರ್​ ಮದುವೆ (Alia Bhatt Ranbir Kapoor Marriage) ಫೋಟೋ ಹಾಗೂ ವಿಡಿಯೋಗಳು ವೈರಲ್​ ಆಗುತ್ತಿವೆ. 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಯ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಆರಂಭ ಆಗಿದೆ. ಈ ನಡುವೆ ಅವರಿಬ್ಬರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ವರದಿಗಳು ಪ್ರಕಟ ಆಗುತ್ತಿವೆ. ಬಾಲಿವುಡ್​ನಲ್ಲಿ ಆಲಿಯಾ ಭಟ್​ (Alia Bhatt) ಮತ್ತು ರಣಬೀರ್​ ಇಬ್ಬರೂ ಬ್ಯುಸಿ ಆಗಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ಈಗಾಗಲೇ ಬಹುಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ. ಈಗ ಇಬ್ಬರ ಆಸ್ತಿಯನ್ನು ಒಟ್ಟು ಸೇರಿದರೆ ಬರೋಬ್ಬರಿ 840 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾದರೆ ಈ ಹಣದಲ್ಲಿ ಆಲಿಯಾ ಅವರ ಆಸ್ತಿ ಎಷ್ಟು? ರಣಬೀರ್​ ಅವರ ಪಾಲಿನದ್ದು ಎಷ್ಟು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ..

‘ಸಾವರಿಯಾ’ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಹೀರೋ ಆಗಿ ಮಿಂಚಿದವರು ರಣಬೀರ್ ಕಪೂರ್​. ಈವರೆಗೂ ಅವರು ಅನೇಕ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಸಂಜಯ್​ ದತ್ ಬಯೋಪಿಕ್​ ಆಗಿ ಮೂಡಿಬಂದ ‘ಸಂಜು’ ಸಿನಿಮಾದಲ್ಲಿ ನಟಿಸಿದ ರಣಬೀರ್​ ಕಪೂರ್​ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ಈಗ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಅನೇಕ ಉದ್ಯಮಗಳ ಮೇಲೂ ಅವರು ಹೂಡಿಕೆ ಮಾಡಿದ್ದಾರೆ. ಜಾಹೀರಾತುಗಳಲ್ಲಿ ನಟಿಸುವ ಮೂಲಕವೂ ಅವರು ಹಣ ಗಳಿಸುತ್ತಾರೆ. ಅವರ ಒಟ್ಟು ಆಸ್ತಿ ಮೌಲ್ಯ 330 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಹಣ ಗಳಿಕೆಯಲ್ಲಿ ಆಲಿಯಾ ಭಟ್​ ಕೂಡ ಕಡಿಮೆ ಏನಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅವರು ಶ್ರೀಮಂತ ನಟಿಯಾಗಿ ಗುರುತಿಸಿಕೊಂಡರು. ‘ಸ್ಟೂಡೆಂಟ್​ ಆಫ್​ ದಿ ಇಯರ್​’ ಸಿನಿಮಾದ ಮೂಲಕ ಬಾಲಿವುಡ್​ಗೆ ಕಾಲಿಟ್ಟ ಅವರು ಈಗ ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಈ ವರ್ಷ ಅವರು ನಟಿಸಿದ ‘ಗಂಗೂಬಾಯಿ ಕಾಠಿಯಾವಾಡಿ’ ಮತ್ತು ‘ಆರ್​ಆರ್​ಆರ್​’ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಎಲ್ಲದರ ಪರಿಣಾಮವಾಗಿ ಆಲಿಯಾ ಚಾರ್ಮ್​ ಹೆಚ್ಚಿದೆ. ಅವರ ಒಟ್ಟು ಆಸ್ತಿ ಮೌಲ್ಯ 510 ಕೋಟಿ ಕೋಟಿ ರೂಪಾಯಿಗಿಂತಲೂ ಹೆಚ್ಚು ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಹಣ ಗಳಿಕೆ ವಿಚಾರದಲ್ಲಿ ರಣಬೀರ್​ ಕಪೂರ್​ಗಿಂತಲೂ ಆಲಿಯಾ ಮುಂದಿದ್ದಾರೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಪ್ರತಿ ಸಿನಿಮಾಗಳಿಗೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಂದಲೂ ಹಣ ಗಳಿಸುತ್ತಾರೆ. ಇತ್ತೀಚೆಗೆ ಹೊಸ ನಿರ್ಮಾಣ ಸಂಸ್ಥೆಯನ್ನು ಕೂಡ ಅವರು ಆರಂಭಿಸಿದ್ದಾರೆ. ಅದಕ್ಕೆ ‘ಎಟರ್ನಲ್​ ಸನ್​ ಶೈನ್​ ಪ್ರೊಡಕ್ಷನ್ಸ್​’ ಎಂದು ಹೆಸರು ಇಡಲಾಗಿದೆ. ಆಡಿ ಕ್ಯೂ7, ಆಡಿ ಕ್ಯೂ5, ಆಡಿ ಕ್ಯೂ6, ಬಿಎಂಡಬ್ಲ್ಯೂ 7 ಸೀರೀಸ್​, ಲ್ಯಾಂಡ್​ ರೋವರ್​, ರೇಂಜ್​ ರೋವರ್​ ಸೇರಿದಂತೆ ಅನೇಕ ಕಾರುಗಳು ಆಲಿಯಾ ಬಳಿ ಇದೆ.

ಇದನ್ನೂ ಓದಿ:

ಆಲಿಯಾ​-ರಣಬೀರ್ ಮದುವೆ ಖಚಿತಗೊಂಡ ತಕ್ಷಣ ಪ್ರತಿಕ್ರಿಯಿಸಿದ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ

ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada