AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRR Movie First Half Review: ಹೇಗಿದೆ ‘ಆರ್​ಆರ್​ಆರ್​’ ಚಿತ್ರದ ಮೊದಲಾರ್ಧ?; ಇಲ್ಲಿದೆ ಪಿನ್​ ಟು ಪಿನ್​ ಮಾಹಿತಿ

ವಿಶ್ವಾದ್ಯಂತ ಸಿನಿಮಾ ಸುಮಾರು 8000 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹಾಗಾದರೆ, ಈ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

RRR Movie First Half Review: ಹೇಗಿದೆ ‘ಆರ್​ಆರ್​ಆರ್​’ ಚಿತ್ರದ ಮೊದಲಾರ್ಧ?; ಇಲ್ಲಿದೆ ಪಿನ್​ ಟು ಪಿನ್​ ಮಾಹಿತಿ
ಆರ್​ಆರ್​ಆರ್​
TV9 Web
| Edited By: |

Updated on:Mar 25, 2022 | 6:05 AM

Share

‘ಬಾಹುಬಲಿ’, ‘ಈಗ’ದಂತಹ ಹಿಟ್​ ಚಿತ್ರಗಳನ್ನು ನೀಡಿದ ಎಸ್​.ಎಸ್​. ರಾಜಮೌಳಿ (SS Rajamouli) ‘ಆರ್​ಆರ್​ಆರ್​’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ‘ಆರ್​ಆರ್​ಆರ್​’ (RRR Movie) ಪ್ರದರ್ಶನ ಕಂಡಿದೆ. ಹಾಡು ಹಾಗೂ ಟ್ರೇಲರ್ ಮೂಲಕ ಸಿನಿಮಾ ನಿರೀಕ್ಷೆ ಹುಟ್ಟುಹಾಕಿತ್ತು. ರಾಮ್​ ಚರಣ್​, ಜ್ಯೂ.ಎನ್​ಟಿಆರ್​, ಆಲಿಯಾ ಭಟ್​, ಅಜಯ್​ ದೇವಗನ್​ ಮೊದಲಾದ ಸ್ಟಾರ್​ ಕಲಾವಿದರ ದಂಡೇ ಚಿತ್ರದಲ್ಲಿ ಇದೆ. ಈ ಕಾರಣಕ್ಕೆ ಬಾಲಿವುಡ್​ನಲ್ಲೂ ಸಿನಿಮಾ ಬೇಡಿಕೆ ಸೃಷ್ಟಿ ಮಾಡಿಕೊಂಡಿದೆ. ವಿಶ್ವಾದ್ಯಂತ ಸಿನಿಮಾ ಸುಮಾರು 8000 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹಾಗಾದರೆ, ಈ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

  1. ರಾಮ್​ ಚರಣ್​ ಖಡಕ್​ ಪೊಲೀಸ್​ ಅಧಿಕಾರಿಯಾಗಿ ಮಿಂಚಿದ್ದಾರೆ. ಅವರ ಎಂಟ್ರಿ ಸಖತ್​ ಮಾಸ್​ ಆಗಿದೆ. ಬ್ರಿಟಿಷರನ್ನು ಎದುರು ಹಾಕಿಕೊಳ್ಳುವವರನ್ನು ನೆಲಸಮ ಮಾಡುವ ಪೊಲೀಸ್​ ಅಧಿಕಾರಿಯಾಗಿ ಮಿಂಚಿದ್ದಾರೆ.
  2. ಕಾಡಿನಲ್ಲಿ ಬೆಳೆದ ಭೀಮ್ (ಜ್ಯೂ.ಎನ್​ಟಿಆರ್​) ನಗರಕ್ಕೆ ಬರುತ್ತಾನೆ. ಅದು ಏಕೆ ಎನ್ನುವ ಕಥೆಯೊಂದಿಗೆ ಮೊದಲಾರ್ಧ ಸಾಗುತ್ತದೆ.
  3. ಹಳ್ಳಿ ನಾಟು ಹಾಡು ಮೊದಲಾರ್ಧದಲ್ಲೇ ಬರುತ್ತದೆ. ಈ ಹಾಡಿನಲ್ಲಿ ಜ್ಯೂ.ಎನ್​ಟಿಆರ್​ ಹಾಗೂ ರಾಮ್​ ಚರಣ್​ ಸಖತ್​ ಆಗಿ ಡಾನ್ಸ್​ ಪವರ್​ಫುಲ್​ ಆಗಿದೆ.
  4. ಮೊದಲಾರ್ಧದಲ್ಲಿ ಮೈ ನವಿರೇಳಿಸುವ ಫೈಟ್​ಗಳಿವೆ. ಅದ್ಭುತ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ.
  5. ಮೊದಲಾರ್ಧದ ಒಂದೂವರೆಗಂಟೆಗೂ ಅಧಿಕವಾಗಿದೆ. ಈ ಕಾರಣಕ್ಕೆ ನೋಡುಗರಿಗೆ ಸ್ವಲ್ಪ ದೀರ್ಘ ಎನಿಸಬಹುದು.
  6. ಸಿಂಪಲ್​ ಕಥೆಯನ್ನು ನಿರ್ದೇಶಕ ರಾಜಮೌಳಿ ಸಖತ್​ ಅದ್ದೂರಿಯಾಗಿ ಹೇಳಿದ್ದಾರೆ.
  7. ಹಿನ್ನಲೆ ಸಂಗೀತ, ಛಾಯಾಗ್ರಹಣ ಚಿತ್ರಕ್ಕೆ ಬೆನ್ನೆಲುಬಾಗಿದೆ.

ಇದನ್ನೂ ಓದಿ: ಆರ್​​ಆರ್​ಆರ್​ ವಿಮರ್ಶೆ: ನೀರು-ಬೆಂಕಿ ಹಿಡಿದು ತೆರೆಮೇಲೆ ರಾಜಮೌಳಿ ಮ್ಯಾಜಿಕ್​

500 ಕೋಟಿ ಬಜೆಟ್​, 800 ಕೋಟಿ ಪ್ರೀ-ರಿಲೀಸ್​ ಬಿಸ್ನೆಸ್​; ‘ಆರ್​ಆರ್​ಆರ್​’ ಕುರಿತ ಅಚ್ಚರಿ ವಿಚಾರಗಳು

Published On - 2:28 am, Fri, 25 March 22

Follow Us
TV9 Web
TV9 Web

TV9 Kannada

Read More
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್