AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2 Collection: ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಮೋಡಿ ಮಾಡಿದ ‘ಕೆಜಿಎಫ್: ಚಾಪ್ಟರ್​​ 2’

KGF Chapter 2 Box Office Collection: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಬಂಪರ್​ ಬೆಳೆ ತೆಗೆದಿದೆ. ಯಶ್​ ನಟನೆಯ ಈ ಚಿತ್ರ ಬ್ಲಾಕ್​ ಬಸ್ಟರ್​ ಆಗಿದೆ.

KGF Chapter 2 Collection: ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಮೋಡಿ ಮಾಡಿದ ‘ಕೆಜಿಎಫ್: ಚಾಪ್ಟರ್​​ 2’
ಯಶ್
TV9 Web
| Edited By: |

Updated on:Apr 15, 2022 | 8:05 AM

Share

‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ಕೊರೊನಾ ಹಾವಳಿ ನಂತರ ಅತಿ ದೊಡ್ಡ ಪ್ರಮಾಣದಲ್ಲಿ ರಿಲೀಸ್​ ಆದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ. ವಿಶ್ವಾದ್ಯಂತ 10 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತೆರೆಕಂಡಿದೆ. ಏ.14ರಂದು ಬಿಡುಗಡೆ ಆಗಿರುವ ಈ ಚಿತ್ರದಿಂದ ಯಶ್​ (Yash) ವೃತ್ತಿಜೀವನಕ್ಕೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ಪ್ರಶಾಂತ್​ ನೀಲ್​ ಅವರು ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ಸಿನಿಮಾದಲ್ಲಿ ನಟಿಸಿದ ಎಲ್ಲ ಕಲಾವಿದರ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ. ಅದ್ದೂರಿ ಮೇಕಿಂಗ್​ ಕಂಡು ಪ್ರೇಕ್ಷಕರು ವಾವ್​ ಎಂದಿದ್ದಾರೆ. ಎಲ್ಲದರ ಪರಿಣಾಮವಾಗಿ ‘ಕೆಜಿಎಫ್​ 2’ ಚಿತ್ರ ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ (KGF Chapter 2 Box Office Collection)​ ಮಾಡಿದೆ. ದಾಖಲೆ ಪ್ರಮಾಣದಲ್ಲಿ ಗಲ್ಲಾಪೆಟ್ಟಿಗೆ ಗಳಿಕೆ ಆಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಕನ್ನಡ ಚಿತ್ರರಂಗದ ಮಾರುಕಟ್ಟೆ ಸಣ್ಣದು ಎಂದು ಹೇಳುವ ಒಂದು ಕಾಲ ಇತ್ತು. ಆದರೆ ಆ ಕಾಲ ಈಗ ಬದಲಾಗಿದೆ. ಕನ್ನಡದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾವನ್ನು ವಿಶ್ವಾದ್ಯಂತ ಇರುವ ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ಮೊದಲ ದಿನವೇ ಜನರು ಭರಪೂರ ಪ್ರೀತಿ ತೋರಿಸಿದ್ದಾರೆ. ವಿದೇಶದಲ್ಲೂ ಈ ಚಿತ್ರ ಭರ್ಜರಿಯಾಗಿ ಓಪನಿಂಗ್​ ಪಡೆದುಕೊಂಡಿದೆ. ಅಮೆರಿಕದಲ್ಲಿ ಮೊದಲ ದಿನವೇ 7 ಕೋಟಿ ರೂ. ಕಲೆಕ್ಷನ್​ ಆಗಿದೆ.

ಕನ್ನಡದಲ್ಲಿ ತಯಾರಾದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾಗೆ ಉತ್ತರ ಭಾರತದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಿಂದಿ ವರ್ಷನ್​ನಿಂದ ಮೊದಲ ದಿನವೇ ಬರೋಬ್ಬರಿ 45ರಿಂದ 50 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂದು ಅಂದಾಜಿಸಲಾಗುತ್ತಿದೆ. ದಕ್ಷಿಣ ಭಾರತದ ಕಲೆಕ್ಷನ್​ ಮತ್ತು ವಿದೇಶಿ ಬಾಕ್ಸ್​ ಆಫೀಸ್​ ಗಳಿಕೆಯನ್ನೂ ಸೇರಿಸಿದರೆ 130 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಈ ಸಂಖ್ಯೆಗಳ ಕುರಿತಂತೆ ‘ಕೆಜಿಎಫ್​: ಚಾಪ್ಟರ್​ 2’ ತಂಡ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಬಾಕ್ಸ್​ ಆಫೀಸ್​ ದಾಖಲೆಗಳ ವಿಚಾರದಲ್ಲಿ ಈ ಸಿನಿಮಾ ಹೊಸ ಮೈಲಿಗಲ್ಲು ತಲುಪುವ ಸೂಚನೆ ಸಿಕ್ಕಿದೆ. ಬ್ಯಾಕ್​ ಟು ಬ್ಯಾಕ್​ ರಜಾ ದಿನಗಳ ಇರುವುದರಿಂದ ‘ಕೆಜಿಎಫ್​ 2’ ಬಳಗಕ್ಕೆ ಹೆಚ್ಚು ಅನುಕೂಲ ಆಗುತ್ತಿದೆ. ಸಿನಿಮಾ ನೋಡಿದ ಎಲ್ಲ ಪ್ರೇಕ್ಷಕರು ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಬಹುದೊಡ್ಡ ಬಲ ಸಿಕ್ಕಂತಾಗಿದೆ.

ವಿಜಯ್​ ಕಿರಗಂದೂರು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಯಶ್​ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಸಂಜಯ್​ ದತ್​, ರವೀನಾ ಟಂಡನ್​, ರಾವ್​ ರಮೇಶ್​, ಪ್ರಕಾಶ್​ ರಾಜ್​ ಮುಂತಾದ ಘಟಾನುಘಟಿ ಕಲಾವಿದರಿಂದಾಗಿ ಚಿತ್ರದ ತೂಕ ಹೆಚ್ಚಿದೆ.

ಇದನ್ನೂ ಓದಿ:

‘ಎಲ್ಲ ಶೋ ನೋಡ್ತೀನಿ, ಥಿಯೇಟರ್​ನಲ್ಲೇ ಮಲಗ್ತೀನಿ’: ಅಮೆರಿಕದಲ್ಲಿ ‘ಕೆಜಿಎಫ್​ 2’ ಪ್ರೇಕ್ಷಕರ ಪ್ರತಿಕ್ರಿಯೆ

‘ಕೆಜಿಎಫ್​: ಚಾಪ್ಟರ್​ 2’ ಟಿಕೆಟ್​ ಪಡೆಯಲು ಫ್ಯಾನ್ಸ್​ ಹರಸಾಹಸ; ಕಾಲು ಮೇಲೆ ಮಾಡಿ ನಿಂತ ಅಭಿಮಾನಿ

Published On - 7:57 am, Fri, 15 April 22

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ