‘ಎಲ್ಲ ಶೋ ನೋಡ್ತೀನಿ, ಥಿಯೇಟರ್ನಲ್ಲೇ ಮಲಗ್ತೀನಿ’: ಅಮೆರಿಕದಲ್ಲಿ ‘ಕೆಜಿಎಫ್ 2’ ಪ್ರೇಕ್ಷಕರ ಪ್ರತಿಕ್ರಿಯೆ
ವಿದೇಶದಲ್ಲೂ ‘ಕೆಜಿಎಫ್: ಚಾಪ್ಟರ್ 2’ ನೋಡಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಅಮೆರಿಕದಲ್ಲಿ ಇರುವ ಯಶ್ ಫ್ಯಾನ್ಸ್ಗೆ ಈ ಚಿತ್ರ ಸಖತ್ ಇಷ್ಟ ಆಗಿದೆ.
ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಎಲ್ಲ ಕಡೆ ಸೌಂಡು ಮಾಡುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವ ಸೂಚನೆ ನೀಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ ಈ ಚಿತ್ರ ಧೂಳೆಬ್ಬಿಸುತ್ತಿದೆ. ಅಷ್ಟೇ ಅಲ್ಲ, ವಿದೇಶದಲ್ಲೂ ಯಶ್ (Yash) ಹವಾ ಜೋರಾಗಿದೆ. ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ‘ಕೆಜಿಎಫ್ 2’ (KGF 2) ಪ್ರದರ್ಶನ ಕಾಣುತ್ತಿದೆ. ಅಮೆರಿಕದಲ್ಲಿ ಸಿನಿಮಾ ನೋಡಿದ ಕನ್ನಡಿಗರು ವಾವ್ ಎಂದಿದ್ದಾರೆ. ‘ಯಶ್ ನಟನೆ, ಹಿನ್ನೆಲೆ ಸಂಗೀತ ಸೇರಿ ಎಲ್ಲವೂ ಚೆನ್ನಾಗಿದೆ. ಪ್ರತಿ ದೃಶ್ಯದಲ್ಲೂ ಒಂದು ಟ್ವಿಸ್ಟ್ ಇದೆ. ಇವತ್ತು ಎಲ್ಲ ಶೋ ನೋಡ್ತೀನಿ. ಇಡೀ ದಿನ ಇಲ್ಲೇ ಮಲಗ್ತೀನಿ’ ಎಂದಿದ್ದಾರೆ ಯಶ್ ಅಭಿಮಾನಿ. ಅಷ್ಟರಮಟ್ಟಿಗೆ ಈ ಸಿನಿಮಾ ಕ್ರೇಜ್ ಸೃಷ್ಟಿ ಮಾಡಿದೆ.
ಇದನ್ನೂ ಓದಿ:
‘ಕೆಜಿಎಫ್: ಚಾಪ್ಟರ್ 2’ ಟಿಕೆಟ್ ಪಡೆಯಲು ಫ್ಯಾನ್ಸ್ ಹರಸಾಹಸ; ಕಾಲು ಮೇಲೆ ಮಾಡಿ ನಿಂತ ಅಭಿಮಾನಿ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ

