ವಿಶ್ವದಾದ್ಯಂತ ಬಿಡುಗಡೆಯಾಗಿ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ಕೆಜಿಎಫ್ ನಲ್ಲೇ ಬಿಡುಗಡೆಯಾಗಿಲ್ಲ, ಯಾಕೆ ಗೊತ್ತಾ?

ಕಿಂಗ್ ಸ್ಟಾರ್ ಯಶ್ ಅವರ ಜೀವನವನ್ನೇ ಬದಲಾಯಿಸಿದ ಕೆಜಿಎಫ್ ಸಿನಿಮಾದ ಶೇ 50ರಷ್ಟು ಚಿತ್ರೀಕರಣವನ್ನೂ ಕೆಜಿಎಫ್ನಲ್ಲೇ ಮಾಡಿದ್ದ ಚಿತ್ರತಂಡ ಬಹಳ ಯಶಸ್ಸನ್ನು ಹೊತ್ತು ತಿರುಗುತ್ತಿದೆ. ಒಂದೇ ದಿನಕ್ಕೆ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸುತ್ತಿದೆ. ದುರಂತ ಅಂದರೆ ಕೆಜಿಎಫ್ ಅನ್ನೋ ಸಿನಿಮಾ ಕೆಜಿಎಫ್ ನೆಲದಲ್ಲೇ ಬಿಡುಗಡೆಯಾಗಿಲ್ಲ.

ವಿಶ್ವದಾದ್ಯಂತ ಬಿಡುಗಡೆಯಾಗಿ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ಕೆಜಿಎಫ್ ನಲ್ಲೇ ಬಿಡುಗಡೆಯಾಗಿಲ್ಲ, ಯಾಕೆ ಗೊತ್ತಾ?
ವಿಶ್ವದಾದ್ಯಂತ ಬಿಡುಗಡೆಯಾಗಿ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ಕೆಜಿಎಫ್ ನಲ್ಲೇ ಬಿಡುಗಡೆಯಾಗಿಲ್ಲ
Follow us
TV9 Web
| Updated By: ಆಯೇಷಾ ಬಾನು

Updated on:Apr 14, 2022 | 5:32 PM

ಕೋಲಾರ: ನೂರಾರು ವರ್ಷಗಳ ಕಾಲ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಡುವ ಮೂಲಕ ಕೆಜಿಎಫ್(KGF) ಅನ್ನೋ ಹೆಸರು ಹೇಗೆ ವಿಶ್ವವಿಖ್ಯಾತಿ ಪಡೆದಿತ್ತೋ ಅದೇ ರೀತಿ ರಾಕಿಂಗ್ ಸ್ಟಾರ್ ಯಶ್(Actor Yash) ಅಭಿನಯದ ಕೆಜಿಎಫ್ ಸಿನಿಮಾ ಕೂಡಾ ಕೆಜಿಎಫ್ನಷ್ಟೇ ವಿಶ್ವದಾದ್ಯಂತ ಹೆಸರು ಮಾಡ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಜೀವನವನ್ನೇ ಬದಲಾಯಿಸಿದ ಕೆಜಿಎಫ್ ಸಿನಿಮಾದ ಶೇ 50ರಷ್ಟು ಚಿತ್ರೀಕರಣವನ್ನೂ ಕೆಜಿಎಫ್ನಲ್ಲೇ ಮಾಡಿದ್ದ ಚಿತ್ರತಂಡ ಬಹಳ ಯಶಸ್ಸನ್ನು ಹೊತ್ತು ತಿರುಗುತ್ತಿದೆ. ಒಂದೇ ದಿನಕ್ಕೆ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸುತ್ತಿದೆ. ದುರಂತ ಅಂದರೆ ಕೆಜಿಎಫ್ ಅನ್ನೋ ಸಿನಿಮಾ ಕೆಜಿಎಫ್ ನೆಲದಲ್ಲೇ ಬಿಡುಗಡೆಯಾಗಿಲ್ಲ. ಹೌದು ಇವತ್ತು ಕೆಜಿಎಫ್-2 ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಆದರೆ ಕೆಜಿಎಫ್ ಹೆಸರಿಟ್ಟುಕೊಂಡು ವಿಶ್ವದಾದ್ಯಂತ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾ ಕೆಜಿಎಫ್ ನಗರದಲ್ಲೇ ಬಿಡುಗಡೆ ಯಾಗಿಲ್ಲ. ಇಂದು ಕೆಜಿಎಫ್ ಜನರಿಗೆ ಸಿನಿಮಾ ನೋಡಲು ಸಿಕ್ಕಿಲ್ಲ, ಈ ಮೂಲಕ ಕೆಜಿಎಫ್ ಜನರಿಗೆ ಹಾಗೂ ಕೆಜಿಎಫ್ ಬಾಗದ ಯಶ್ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.

ಅಷ್ಟೊಂದು ಹಣ ಕೊಟ್ಟು ಸಿನಿಮಾ ತರಲಾಗದ ಚಿತ್ರಮಂದಿರದ ಮಾಲೀಕರು ಐದಾರು ಬಾಷೆಗಳಲ್ಲಿ ನಿರ್ಮಾಣ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್-2 ಎಲ್ಲೆಡೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿತ್ತು, ಹಾಗಾಗಿಯೇ ಸಿನಿಮಾ ಬಿಡುಗಡೆಗೂ ಮೊದಲೇ ಕೋಟ್ಯಾಂತರ ರೂಪಾಯಿ ಬಾಚಿತ್ತು. ಕೆಜಿಎಫ್-2 ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು. ಹಾಗಾಗಿ ಸಿನಿಮಾ ಡಿಸ್ಟ್ರಿಬ್ಯೂಟರ್ಗಳ ಬಳಿ ಹೆಚ್ಚಿನ ಹಣ ಕೇಳಿರೋದು ಸಹಜ ಆದರೆ, ಕೆಜಿಎಫ್ ಅನ್ನೋ ಬಡಜನರೇ ಇರುವ ಈ ಭಾಗದಲ್ಲಿ ಅಷ್ಟೊಂದು ಹಣ ಕೊಟ್ಟು ಸಿನಿಮಾ ತಂದು ಹಾಕುವಂತ ಚಿತ್ರಮಂದಿರದ ಮಾಲೀಕರಿಗೆ ಶಕ್ತಿ ಇಲ್ಲದ ಕಾರಣ ಇಂದು ಸಿನಿಮಾ ಬಿಡುಗಡೆಯಾಗಿಲ್ಲ. ಕೆಜಿಎಫ್ನಲ್ಲಿ ಲಕ್ಷ್ಮೀ ಚಿತ್ರಮಂದಿರ ಹಾಗೂ ಒಲಂಪಿಯಾ ಚಿತ್ರಮಂದಿರ ಮಾಲೀಕರು ಡಿಸ್ಟ್ರಿಬ್ಯೂಟರ್ ಜಯಣ್ಣ ಬಳಿ ಎರಡು ಮೂರು ಬಾರಿ ಅಲೆದಾಡಿದರೂ ಕೂಡಾ ಸಿನಿಮಾ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಕೆಜಿಎಫ್ ಭಾಗದಲ್ಲಿ ಹೆಚ್ಚಾಗಿ ಬಡ ಜನರೇ ಇರುವುದು ಅವರು ನೂರಾರು ರೂಪಾಯಿ ದುಡ್ಡು ಕೊಟ್ಟು ಸಿನಿಮಾ ನೋಡೋದಿಲ್ಲ ಹಾಗಾಗಿ ಇವರು ಹೇಳಿದಷ್ಟು ಹಣ ನೀಡಲಾಗದೆ ಕೆಜಿಎಫ್ ಚಿತ್ರಮಂದಿರದ ಮಾಲೀಕರುಗಳು ಚಿತ್ರವನ್ನು ತರಲಾಗಿಲ್ಲ ಎನ್ನುತ್ತಾರೆ ಲಕ್ಷ್ಮೀ ಹಾಗೂ ಒಲಂಪಿಯಾ ಚಿತ್ರಮಂದಿರದ ಮಾಲೀಕರಾದ ಸಂತೋಷ್ ಕುಮಾರ್ ಹಾಗೂ ಖಾನ್.

ಕೆಜಿಎಫ್ ಹೆಸರಿಟ್ಟಿದಕ್ಕಾದರೂ ಸಿನಿಮಾ ಬಿಡುಗಡೆ ಮಾಡಬೇಕಿತ್ತು ಇಂದು ಕೆಜಿಎಫ್ ಅನ್ನೋ ಹೆಸರಿಟ್ಟುಕೊಂಡು, ಕೆಜಿಎಫ್ನಲ್ಲೇ ಹೆಚ್ಚಾಗಿ ಶೂಟಿಂಗ್ ಮಾಡಿ ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ಕೆಜಿಎಫ್ನಲ್ಲೇ ಬಿಡುಗಡೆಯಾಗಿಲ್ಲ, ಕನಿಷ್ಠ ಕೆಜಿಎಫ್ ಅನ್ನೋ ಹೆಸರಿಟ್ಟುಕೊಂಡಿದಕ್ಕಾದರೂ ಕನಿಷ್ಠ ಸೌಜನ್ಯಕ್ಕಾದರೂ ಚಿತ್ರತಂಡ ಕೆಜಿಎಫ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವ ವಿಚಾರದಲ್ಲಿ ಕಾಳಜಿ ವಹಿಸಬೇಕಿತ್ತು ಅನ್ನೋದು ಕೆಜಿಎಫ್ ಭಾಗದ ಜನರ ಬೇಸರದ ಮಾತುಗಳು. ನಿಜ, ಸಿನಿಮಾ ಅನ್ನೋದು ಒಂದು ಉಧ್ಯಮ ಲಾಭ ನಷ್ಟ ವಿಚಾರ ಬರುತ್ತದೆ. ಆದರೆ ಬಿಡುಗಡೆಗೂ ಮುನ್ನವೇ ಕೋಟ್ಯಾಂತರ ರೂಪಾಯಿ ಲಾಭ ನೋಡುತ್ತಿರುವ ಸಿನಿಮಾ ಕೆಜಿಎಫ್ ಅನ್ನೋ ಹೆಸರಿನ ಋಣ ತೀರಿಸಲಿಕ್ಕಾದರೂ ಇಲ್ಲಿನ ಚಿತ್ರಮಂದಿರದ ಮಾಲೀಕರಿಗೆ ರಿಯಾಯಿತಿ ದರದಲ್ಲಿ ಕೊಟ್ಟಿದ್ದರೆ ಈ ಭಾಗದ ಜನರು ಮೊದಲ ದಿನವೇ ಸಿನಿಮಾ ನೋಡಿ ಖುಷಿಪಡುತ್ತಿದ್ದರೂ ಅನ್ನೋದು ಈ ಭಾಗದ ಜನರ ಮಾತು.

ಕೆಜಿಎಫ್​ ಸಿನಿಮಾ ಭಾಗ-1ರ ಬಿಡುಗಡೆ ವೇಳೆ ಕೂಡಾ ಹೀಗೆ ಆಗಿತ್ತು: ಕೆಜಿಎಫ್​-2 ಸಿನಿಮಾ ಬಿಡುಗಡೆ ಅಲ್ಲಾ ಕೆಜಿಎಫ್​ ಭಾಗ-1 ರ ಸಿನಿಮಾ ಬಿಡುಗಡೆ ವೇಳೆಯಲ್ಲೂ ಚಿತ್ರತಂಡ ಇದೇ ರೀತಿ ನಡೆದುಕೊಂಡಿತ್ತು, ವಿಶ್ವದಾಧ್ಯಂತ ಚಿತ್ರ ಬಿಡುಗಡೆಯಾದರೂ ಕೆಜಿಎಫ್​ ನಲ್ಲಿ ಮಾತ್ರ ಸಿನಿಮಾ ಬಿಡುಗಡೆ ಮಾಡಿರಲಿಲ್ಲ,ಈವೇಳೆ ಸ್ಥಳೀಯ ಜನರು ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದರು, ಆಗ ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ವಿತರಕರೂ ಹಾಗೂ ಕೆಜಿಎಫ್​ ಚಿತ್ರತಂಡ ಕೂಡಲೇ ಕೆಜಿಎಫ್​ ನಗರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಕ್ರಮ ಕೈಗೊಂಡಿದ್ದರು, ಆದರೆ ಈಬಾರಿ ಹಾಗಾಗಿಲ್ಲ ಕೆಜಿಎಫ್​-2 ಟೀಸರ್​ನ್ನು ಕೆಜಿಎಫ್​ನಲ್ಲೇ ಬಿಡುಗಡೆ ಮಾಡ್ತಾರೆ, ಕೆಜಿಎಫ್​ನಲ್ಲಿ ಚಿತ್ರತಂಡ ಬಂದು ಕೆಜಿಎಫ್​ ಜನರಿಗೆ ಕೃತಗ್ನತೆ ಸಲ್ಲಿಸುತ್ತಾರೆ ಎಂದೆಲ್ಲಾ ಅಂದುಕೊಂಡಿದ್ದ ಜನರ ಹತ್ತಾರು ನಿರೀಕ್ಷೆಗಳನ್ನು ಹುಸಿ ಮಾಡಿರುವ ಚಿತ್ರತಂಡ, ಕೊನೆಗೆ ಕೆಜಿಎಫ್​ನಲ್ಲಿ ಸಿನಿಮಾ ಬಿಡುಗಡೆ ಮಾಡೋದಕ್ಕೂ ಮನಸ್ಸು ಮಾಡಿಲ್ಲ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ಹಣ ದುರುಪಯೋಗ -ವಿಧಾನಸೌಧ ಪೊಲೀಸರಿಂದ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ಅರೆಸ್ಟ್

KGF 3: ‘ಕೆಜಿಎಫ್ ಚಾಪ್ಟರ್ 2’ ಕೊನೆಯಲ್ಲಿ ಬಿಗ್ ಸರ್ಪ್ರೈಸ್ ನೋಡಿ ಥ್ರಿಲ್ ಆದ ಅಭಿಮಾನಿಗಳು; ಟ್ರೆಂಡ್ ಆಯ್ತು ‘ಕೆಜಿಎಫ್ 3’

Published On - 5:10 pm, Thu, 14 April 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ