ಹಣ ದುರುಪಯೋಗ -ವಿಧಾನಸೌಧ ಪೊಲೀಸರಿಂದ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ಅರೆಸ್ಟ್
Vidhana Soudha Police: ಆರೋಪಿ ಆಯುಕ್ತರು ಅನುಮತಿ ಇಲ್ಲದೆಯೇ ಇಲಾಖೆಯ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಇಲಾಖೆಯ ಮತ್ತೋರ್ವ ಅಧಿಕಾರಿ ಅರವಿಂದ ಬಾಬು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಧಾನಸೌಧ ಠಾಣೆಯಲ್ಲಿ ಸೆಕ್ಷನ್ 403, 409 ಅಡಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು: ಮುಜರಾಯಿ ಇಲಾಖೆಯ 25.50 ಲಕ್ಷ ರೂಪಾಯಿ ದುರುಪಯೋಗ (Fund Misappropriation) ಆರೋಪದ ಮೇರೆಗೆ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟರಮಣಪ್ಪಎಂಬಾತನನ್ನು (Muzrai Department Asst commissioner) ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಆಯುಕ್ತರು ಅನುಮತಿ ಇಲ್ಲದೆಯೇ ಇಲಾಖೆಯ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಇಲಾಖೆಯ ಮತ್ತೋರ್ವ ಅಧಿಕಾರಿ ಅರವಿಂದ ಬಾಬು ವಿಧಾನಸೌಧ ಪೊಲೀಸ್ ಠಾಣೆಗೆ (Vidhana Soudha Police) ದೂರು ನೀಡಿದ್ದರು. ವಿಧಾನಸೌಧ ಠಾಣೆಯಲ್ಲಿ ಸೆಕ್ಷನ್ 403, 409 ಅಡಿ ಪ್ರಕರಣ ದಾಖಲಾಗಿತ್ತು.
ಮಗು ದೇಗುಲ ಪ್ರವೇಶಿಸಿದ್ದಕ್ಕೆ ತಂದೆಗೆ ದಂಡ; ಮಗುವಿನ ಶಿಕ್ಷಣ ಜವಾಬ್ದಾರಿ ಮುಜರಾಯಿ ಇಲಾಖೆ ತೆಗೆದುಕೊಳ್ಳುತ್ತದೆ- ಸಚಿವ ಕೋಟ ಶ್ರೀನಿವಾಸ ಬೆಂಗಳೂರು: ಮಗು ದೇಗುಲ ಪ್ರವೇಶಿಸಿದ್ದಕ್ಕೆ ತಂದೆಗೆ ದಂಡ ಹಾಕಿದ ವಿಚಾರಕ್ಕೆ ಸಂಬಂಧಿಸಿ ಮಗುವಿನ ಸಂಪೂರ್ಣ ಜವಾಬ್ದಾರಿ ಇಲಾಖೆ ತೆಗೆದುಕೊಳ್ಳುತ್ತದೆ ಎಂದು ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಮಗು ದೇಗುಲ ಪ್ರವೇಶಿಸಿದ್ದಕ್ಕೆ ಸ್ಥಳೀಯರು ಮಗುವಿನ ತಂದೆಗೆ 25 ಸಾವಿರ ದಂಡ ಹಾಕಿದ್ರು. ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಇಲಾಖೆ ವಹಿಸಿಕೊಳ್ಳಲಿದೆ. ಆ ಮಗುವಿನ ಹೆಸರು ವಿನಯ್. ಹೀಗಾಗಿ ವಿನಯ್ ಜನಜಾಗೃತಿ ಎಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರತಿ ಗ್ರಾಮ ಮಟ್ಟದಲ್ಲೂ ಅಸ್ಪೃಶ್ಯತೆ ನಿವಾರಣೆಗೆ ಈ ಕಾರ್ಯಕ್ರಮದಡಿ ಜನ ಜಾಗೃತಿ ಮೂಡಿಸಲಾಗುತ್ತೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ರು.
ಏನಿದು ಘಟನೆ? ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೀಯಾಪುರ ಗ್ರಾಮದ ಪರಿಶಿಷ್ಟ ಜಾತಿಗಳಲ್ಲೊಂದಾದ ಚನ್ನದಾಸರ ಸಮುದಾಯದ ಚಂದ್ರಶೇಖರ್ ಹಾಗೂ ಲಲಿತಾ ದಾಸರ್ ದಂಪತಿಗಳ ಪುತ್ರ ವಿನಯ್‌ನನ್ನು ಜನ್ಮದಿನದ ಹಿನ್ನಲೆ ಆಂಜನೇಯನ ದೇವಸ್ಥಾನದ ಬಳಿ ಕರೆದೊಯ್ದಿದ್ದರು. ಆದರೆ ಮಗು ಆಕಸ್ಮಿಕವಾಗಿ ಮಗು ದೇವಸ್ಥಾನವನ್ನು ಪ್ರವೇಶಿಸಿತ್ತು. ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದೇವಸ್ಥಾನ ಮೈಲಿಗೆಯಾಗಿದ್ದು, ಅಶುದ್ಧಗೊಂಡಿದೆ ಎಂದು ವಿನಯ್‌ನ ಪಾಲಕರಿಗೆ ಗ್ರಾಮಸ್ಥರು 25 ಸಾವಿರ ರೂ. ದಂಡ ನೀಡುವಂತೆ ಒತ್ತಾಯಿಸಿದ್ದರು. ಈ ಅಸ್ಪೃಶ್ಯತೆ ಆಚರಣೆಯೂ ತಡವಾಗಿ ಬೆಳಕಿಗೆ ಬಂದಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಭಂದಿಸಿದಂತೆ ಮೀಯಾಪುರ ಗ್ರಾಮದ ಐವರನ್ನು ಬಂಧಿಸಲಾಗಿತ್ತು.
ಇದೂ ಓದಿ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ-ಅರ್ಜುನ ಅವಧೂತ ಗುರುವರ್ಯರ ಸಮಾಗಮ :ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ
Published On - 5:03 pm, Thu, 14 April 22