ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ-ಅರ್ಜುನ ಅವಧೂತ ಗುರುವರ್ಯರ ಸಮಾಗಮ :ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ

Guru Parampara: ಶ್ರೀಗಳು ಅವಧೂತ ಪರಂಪರೆಯು ಭಾರತೀಯ ಆಧ್ಯಾತ್ಮ ಪರಂಪರೆಯಲ್ಲಿ ವಿಶಿಷ್ಟವಾಗಿದ್ದು ಭಕ್ತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳ ಹಿಂದಿನಿಂದಲೂ ಉತ್ತಮವಾದಂತಹ ಸ್ಪಂದನೆ ನೀಡುತ್ತಿದೆ. ಮೈಸೂರಿನ ಅರ್ಜುನ ಅವಧೂತ ಗುರುಗಳು ಉತ್ತಮವಾದಂತಹ ಕೆಲಸ ಕಾರ್ಯಗಳ ಮೂಲಕ ಜನರಿಗೆ ಯಾವುದೆ ಜಾತಿ ಮತದ ಬೇಧವಿಲ್ಲದೆ, ಅವರ ಕಷ್ಟಗಳನ್ನು ನಿವಾರಿಸುವಲ್ಲಿ ಶ್ರಮಿಸುತ್ತಿದ್ದಾರೆ -ಸುತ್ತೂರು ಶ್ರೀಗಳ ಮಾತು

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ-ಅರ್ಜುನ ಅವಧೂತ ಗುರುವರ್ಯರ ಸಮಾಗಮ :ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ-ಅರ್ಜುನ ಅವಧೂತ ಗುರುವರ್ಯರ ಅಪರೂಪದ ಸಮಾಗಮ -ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 14, 2022 | 4:17 PM

ಮೈಸೂರಿನ ಸೋನಾರ್ ಬೀದಿ ಅಪರೂಪದ ಮಿಲನಕ್ಕೆ ಸಾಕ್ಷಿಯಾಗಿತ್ತು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Suttur Mutt Shivarathri Deshikendra Swamiji) ಹಾಗೂ ಅವಧೂತ ಪರಂಪರೆಯ ಶ್ರೀ ಅರ್ಜುನ ಅವಧೂತ (Arjuna Avadhoota) ಗುರುಗಳನ್ನು ಭೇಟಿ ಮಾಡಿ (Guru Parampara) ಲೋಕ ಕಲ್ಯಾಣ ವಿಶೇಷ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತ್ರಿವಿಧ ದಾಸೋಹದ ಮೂಲಕ ಜಗತ್ತಿನಾದ್ಯಂತ ಭಕ್ತಗಣವನ್ನು ಹೊಂದಿರುವ ಸುತ್ತೂರು ಶ್ರೀಗಳು ಮೈಸೂರಿನ ಸೋನಾರ್ ಬೀದಿಯಲ್ಲಿರುವ ಅವಧೂತ ಅರ್ಜುನ ಗುರುಗಳ ನಿವಾಸಕ್ಕೆ ಆಗಮಿಸಿದ್ದರು. ಸುತ್ತೂರು ಶ್ರೀಗಳ ಆಗಮನದಿಂದಾಗಿ ಸೋನಾರ್ ಬೀದಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಇಡೀ ಬೀದಿ ತಳಿರು ತೋರಣಗಳಿಂದ ಅಲಂಕೃತವಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತಿತ್ತು. ರಂಗೋಲಿಗಳ ಚಿತ್ತಾರ ಆಕರ್ಷಕವಾಗಿತ್ತು. ಅವಧೂತ ಅರ್ಜುನರ ನಿವಾಸಕ್ಕೆ ಆಗಮಿಸಿದ ಸುತ್ತೂರ ಶ್ರೀಗಳಿಗೆ ಮುತೈದೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಸುತ್ತೂರು ಶ್ರೀಗಳನ್ನು ಸೋನಾರ್ ಬೀದಿಯಿಂದ ಮನೆಯವರೆಗೂ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು. ಶ್ರೀಗಳು ನಡೆದು ಬರುವ ಹಾದಿಯಲ್ಲಿ ಪುಷ್ಪವರ್ಷ ಮಾಡಲಾಯಿತು. ಮನೆಗೆ ಬಂದ ಸುತ್ತೂರು ಶ್ರೀಗಳಿಗೆ ಆರತಿ ಮಾಡಿ ಮನೆಯ ಒಳಗಡೆಗೆ ಸ್ವಾಗತಿಸಲಾಯಿತು. ಮನೆಯಲ್ಲಿದ್ದ ಶ್ರೀ ಸಾಯಿಬಾಬಾ ಮೂರ್ತಿ, ವೆಂಕಟಾಚಲ ಅವಧೂತರ ಪ್ರತಿಮೆ, ದತ್ತಾತ್ರೇಯ ಸ್ವಾಮಿ ಹಾಗೂ ಚಾಮುಂಡೇಶ್ವರಿ ವಿಗ್ರಹಕ್ಕೆ ಸುತ್ತೂರು ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಇದಾದ ನಂತರ ಸುತ್ತೂರು ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಅವಧೂತ ಅರ್ಜುನ ಗುರುಗಳು ತಾವೇ ಸ್ವತಃ ಸುತ್ತೂರು ಶ್ರೀಗಳ ಪಾದಗಳಿಗೆ ಅರಿಶಿನ ಕುಂಕುಮ ಗಂಧವನ್ನು ಲೇಪಿಸಿ, ವಿವಿಧ ಪುಷ್ಪಗಳನ್ನು ಇಟ್ಟು ಪಾದಪೂಜೆ ಮಾಡಿದರು. ಫಲ ತಾಂಬೂಲಗಳನ್ನು ಅರ್ಪಿಸಿ ಗುರುಪರಂಪರೆಗೆ ಗೌರವ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.

ಸಭಾ ಕಾರ್ಯಕ್ರಮ ಪಾದಪೂಜೆ ನಂತರ ಮನೆಯ ಬಳಿಯೇ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಎಲ್ ನಾಗೇಂದ್ರ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಹಿರಿಯ ಐಪಿಎಸ್ ಅಧಿಕಾರಿ ಡಾ ಎ ಎನ್ ಪ್ರಕಾಶ್ ಗೌಡ, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಡಾ ಎಸ್ ವಿದ್ಯಾಶಂಕರ್ ಸೇರಿ ನೂರಾರು ಗುರುಬಂಧುಗಳು ಭಾಗಿಯಾಗಿದ್ದರು. ಇದೇ ವೇಳೆ ಸುತ್ತೂರು ಶ್ರೀಗಳು ಸುಮಾರು ಒಂದು ಗಂಟೆಗಳ ಕಾಲ ಆಶೀರ್ವಚನ ನೀಡಿದರು.

ಸುತ್ತೂರು ಶ್ರೀಗಳ ಮಾತು ಶ್ರೀಗಳು ಅವಧೂತ ಪರಂಪರೆಯು ಭಾರತೀಯ ಆಧ್ಯಾತ್ಮ ಪರಂಪರೆಯಲ್ಲಿ ವಿಶಿಷ್ಟವಾಗಿದ್ದು ಭಕ್ತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳ ಹಿಂದಿನಿಂದಲೂ ಉತ್ತಮವಾದಂತಹ ಸ್ಪಂದನೆ ನೀಡುತ್ತಿದೆ. ಮೈಸೂರಿನ ಅರ್ಜುನ ಅವಧೂತ ಗುರುಗಳು ಉತ್ತಮವಾದಂತಹ ಕೆಲಸ ಕಾರ್ಯಗಳ ಮೂಲಕ ಜನರಿಗೆ ಯಾವುದೆ ಜಾತಿ ಮತದ ಬೇಧವಿಲ್ಲದೆ, ಅವರ ಕಷ್ಟಗಳನ್ನು ನಿವಾರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರು ಮುಂದಿನ ದಿನಗಳಲ್ಲೂ ಸಹ ಇದೇ ರೀತಿಯ ಆಧ್ಯಾತ್ಮ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರನ್ನ ತೊಡಗಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಲಿ. ಆ ಮೂಲಕ ನೊಂದು ಬಂದ ಜನರ ಕಷ್ಟ ನಿವಾರಣೆಯಾಗಿ ಉತ್ತಮವಾದಂತಹ ಸಮಾಜ ನಿರ್ಮಾಣವಾಗಲಿ.

ಶ್ರೀ ಅರ್ಜುನ ಅವಧೂತ ಮಾತು ಸುತ್ತೂರು ಶ್ರೀಗಳು ನಮ್ಮ ಮನೆಗೆ, ಬಡಾವಣೆಗೆ ಬಂದಿದ್ದು ಶಿವನೇ ಬಂದಂತೆ ಆಗಿದೆ. ಶ್ರೀಗಳ ಸೇವೆ ಅಪಾರ. ಅವರ ಸರಿ ಸಮ ಕೂರುವಷ್ಟು ನಾನು ದೊಡ್ಡವನಲ್ಲ.‌ ನಮ್ಮ ಸಂಸ್ಕೃತಿ ಪರಂಪರೆಗೆ ಶ್ರೀಗಳ ಕೊಡುಗೆ ಅಪಾರ. ಸುತ್ತೂರು ಶ್ರೀಗಳ ಆಗಮನದ ಜೊತೆ ವರುಣನ ಆಗಮನವೂ ಆಗಿದೆ. ಪ್ರಕೃತಿಯೂ ಖುಷಿಯಾಗಿ ಅಭಿಷೇಕ ಮಾಡಿದೆ. ಮುಂದೆಯೂ ಗುರುಗಳ‌ ಮಾರ್ಗದರ್ಶನ ಕೃಪೆ ಸದಾ ನಮ್ಮ ಮೇಲಿರಲಿ.

ಲೋಕಕಲ್ಯಾಣಕ್ಕಾಗಿ ನಡೆದ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಎಲ್ಲರೂ ಈ ಇಬ್ಬರು ಗುರುಗಳ ಸಮ್ಮಿಲನ ಕಂಡು ಪುನೀತರಾದರು. ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಗಳು ಮತ್ತಷ್ಟು ನಡೆಯಲಿ ಎಂದು ಎಲ್ಲರೂ ಮನದುಂಬಿ ಹಾರೈಸಿದರು. -ರಾಮ್, ಟಿವಿ9, ಮೈಸೂರು

Published On - 4:17 pm, Thu, 14 April 22

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ