AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ದೇಗುಲ ಪ್ರವೇಶಿಸಿದ್ದಕ್ಕೆ ತಂದೆಗೆ ದಂಡ; ಮಗುವಿನ ಶಿಕ್ಷಣ ಜವಾಬ್ದಾರಿ ಮುಜರಾಯಿ ಇಲಾಖೆ ತೆಗೆದುಕೊಳ್ಳುತ್ತದೆ- ಸಚಿವ ಕೋಟ ಶ್ರೀನಿವಾಸ

ಮಗು ದೇಗುಲ ಪ್ರವೇಶಿಸಿದ್ದಕ್ಕೆ ಸ್ಥಳೀಯರು ಮಗುವಿನ ತಂದೆಗೆ 25 ಸಾವಿರ ದಂಡ ಹಾಕಿದ್ರು. ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಇಲಾಖೆ ವಹಿಸಿಕೊಳ್ಳಲಿದೆ. ಆ ಮಗುವಿನ ಹೆಸರು ವಿನಯ್. ಹೀಗಾಗಿ ವಿನಯ್ ಜನಜಾಗೃತಿ ಎಂದು ಕಾರ್ಯಕ್ರಮ ಮಾಡುತ್ತಿದ್ದೇವೆ. -ಸಚಿವ ಕೋಟ ಶ್ರೀನಿವಾಸ

ಮಗು ದೇಗುಲ ಪ್ರವೇಶಿಸಿದ್ದಕ್ಕೆ ತಂದೆಗೆ ದಂಡ; ಮಗುವಿನ ಶಿಕ್ಷಣ ಜವಾಬ್ದಾರಿ ಮುಜರಾಯಿ ಇಲಾಖೆ ತೆಗೆದುಕೊಳ್ಳುತ್ತದೆ- ಸಚಿವ ಕೋಟ ಶ್ರೀನಿವಾಸ
ಕೋಟ ಶ್ರೀನಿವಾಸ ಪೂಜಾರಿ
TV9 Web
| Edited By: |

Updated on: Apr 14, 2022 | 4:41 PM

Share

ಬೆಂಗಳೂರು: ಮಗು ದೇಗುಲ ಪ್ರವೇಶಿಸಿದ್ದಕ್ಕೆ ತಂದೆಗೆ ದಂಡ ಹಾಕಿದ ವಿಚಾರಕ್ಕೆ ಸಂಬಂಧಿಸಿ ಮಗುವಿನ ಸಂಪೂರ್ಣ ಜವಾಬ್ದಾರಿ ಇಲಾಖೆ ತೆಗೆದುಕೊಳ್ಳುತ್ತದೆ ಎಂದು ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಒಂದು ತಿಂಗಳ ಹಿಂದೆ ಮಗು ದೇಗುಲ ಪ್ರವೇಶಿಸಿದ್ದಕ್ಕೆ ಸ್ಥಳೀಯರು ಮಗುವಿನ ತಂದೆಗೆ 25 ಸಾವಿರ ದಂಡ ಹಾಕಿದ್ರು. ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಇಲಾಖೆ ವಹಿಸಿಕೊಳ್ಳಲಿದೆ. ಆ ಮಗುವಿನ ಹೆಸರು ವಿನಯ್. ಹೀಗಾಗಿ ವಿನಯ್ ಜನಜಾಗೃತಿ ಎಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರತಿ ಗ್ರಾಮ ಮಟ್ಟದಲ್ಲೂ ಅಸ್ಪೃಶ್ಯತೆ ನಿವಾರಣೆಗೆ ಈ ಕಾರ್ಯಕ್ರಮದಡಿ ಜನ ಜಾಗೃತಿ ಮೂಡಿಸಲಾಗುತ್ತೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ರು.

ಏನಿದು ಘಟನೆ? ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೀಯಾಪುರ ಗ್ರಾಮದ ಪರಿಶಿಷ್ಟ ಜಾತಿಗಳಲ್ಲೊಂದಾದ ಚನ್ನದಾಸರ ಸಮುದಾಯದ ಚಂದ್ರಶೇಖರ್ ಹಾಗೂ ಲಲಿತಾ ದಾಸರ್ ದಂಪತಿಗಳ ಪುತ್ರ ವಿನಯ್‌ನನ್ನು ಜನ್ಮದಿನದ ಹಿನ್ನಲೆ ಆಂಜನೇಯನ ದೇವಸ್ಥಾನದ ಬಳಿ ಕರೆದೊಯ್ದಿದ್ದರು. ಆದರೆ ಮಗು ಆಕಸ್ಮಿಕವಾಗಿ ಮಗು ದೇವಸ್ಥಾನವನ್ನು ಪ್ರವೇಶಿಸಿತ್ತು. ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದೇವಸ್ಥಾನ ಮೈಲಿಗೆಯಾಗಿದ್ದು, ಅಶುದ್ಧಗೊಂಡಿದೆ ಎಂದು ವಿನಯ್‌ನ ಪಾಲಕರಿಗೆ ಗ್ರಾಮಸ್ಥರು 25 ಸಾವಿರ ರೂ. ದಂಡ ನೀಡುವಂತೆ ಒತ್ತಾಯಿಸಿದ್ದರು. ಈ ಅಸ್ಪೃಶ್ಯತೆ ಆಚರಣೆಯೂ ತಡವಾಗಿ ಬೆಳಕಿಗೆ ಬಂದಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಭಂದಿಸಿದಂತೆ ಮೀಯಾಪುರ ಗ್ರಾಮದ ಐವರನ್ನು ಬಂಧಿಸಲಾಗಿತ್ತು.

ಇವರ ವಿರುದ್ಧ ಅಸ್ಪೃಶ್ಯತೆ ಅಚರಣೆ, ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಅಲ್ಲದೇ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವೂ ಈ ಘಟನೆ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಕೂಡಾ ನೀಡಿತ್ತು. ಆದ್ರೆ ಐದು ಜನ ಬಂಧಿತರು ಜಾಮೀನಿನ‌ ಮೇಲೆ ಹೊರ ಬಂದಿದ್ದಾರೆ. ಜಾಮೀನಿನ ಮೇಲೆ ಹೊರ ಬಂದ ಬಳಿಕ ಬಾಲಕನ ತಂದೆ-ತಾಯಿ‌ ಇದೀಗ ಗ್ರಾಮವನ್ನು ತೊರೆದು ಮತ್ತೊಂದು ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಬಾಲಕನ ತಂದೆ ಚಂದ್ರಶೇಖರ್ ಸದ್ಯ ಯಲಬುರ್ಗಾ ತಾಲೂಕಿನ ಕುಡುಗುಂಟಿ ಗ್ರಾಮದಲ್ಲಿ ವಾಸ ಮಾಡ್ತಿದ್ದು, ಘಟನೆ ಇಂದ ನೊಂದು ಮತ್ತೊಂದು ಕಡೆ ವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಸರ್ಕಾರ ಹೊಸ ಯೋಜನೆಗೆ ಹೆಸರಿಟ್ಟಿದ್ದು ಒಂದು ಕಡೆ ಸಂತೋಷ ಆದ್ರೆ, ಮತ್ತೊಂದು ಕಡೆ ಬಾಲಕನ ತಂದೆಗೆ ಬೇಸರವಾಗಿದೆ.

ಇದೀಗ ಸರ್ಕಾರ ಹೊಸ ಯೋಜನೆಗೆ ನನ್ನ ಮಗನ ಹೆಸರಟ್ಟಿದ್ದು, ಸಂತೋಷವೆ. ನನ್ನ ಮಗ ದೇವಸ್ಥಾನ ಪ್ರವೇಶ ಮಾಡಿದ್ದೇ ತಪ್ಪು ಎಂದು ದಂಡ ಹಾಕಿದ್ರು, ಇಂತಹ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ಮಾಡಿದ್ದೆ. ಆ ಸಮಯದಲ್ಲಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ರು, ದಂಡ ಹಾಕಿದ ಐವರು ಜೈಲು ಸೇರಿ ವಾಪಸ್ ಬಂದ ಬಳಿಕ ನಾನೇ ಗ್ರಾಮ‌ ತೊರೆದು ಬೇರೆ ಕಡೆ ವಾಸ ಮಾಡುತ್ತಿದ್ದೇನೆ. ಇದೀಗ ಮಗನ ಹೆಸರಲ್ಲಿ ಯೋಜನೆ ಜಾರಿಯಾಗಿದ್ದು, ಸಮರ್ಪಕವಾಗಿ ಜಾರಿಯಾಗಬೇಕು. ಅನಿಷ್ಟ ಪದ್ಧತಿ ತೊಲಗಬೇಕು ಎಂದು ಬಾಲಕನ ತಂದೆ ಚಂದ್ರಶೇಖರ್ ಚನ್ನದಾಸರ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ-ಅರ್ಜುನ ಅವಧೂತ ಗುರುವರ್ಯರ ಸಮಾಗಮ :ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ

ಮಹಾರಾಷ್ಟ್ರದಲ್ಲಿ ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರ ಬಂಧನ