AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ತನಿಖಾ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ -ಸಿಎಂ ಬೊಮ್ಮಾಯಿ

ಸಿಎಂ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಆರೋಪ ಮಾಡಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಗಳಿದ್ದಾಗ ಲಂಚದ ಆರೋಪಗಳು ಬಂದಿವೆ. ಬಿಡಿಎ ನಲ್ಲಿ ದೊಡ್ಡ ಹಗರಣವಾಗಿತ್ತು. ಆರೋಪಗಳು ಬಂದಿವೆ. ಅವರಿಗೆ ಯಾವ ಹಕ್ಕಿದೆ. ಏನಾದರೂ ಇದ್ದರೆ, ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಪ್ರಕರಣದ ಬಗ್ಗೆ ತಿಳಿಸಿದರೆ ತನಿಖೆ ಮಾಡುತ್ತೇವೆ ಎಂದರು.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ:  ತನಿಖಾ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ -ಸಿಎಂ ಬೊಮ್ಮಾಯಿ
ಪಿಎಂ-ಕಿಸಾನ್ ಯೋಜನೆ: ಕರ್ನಾಟಕದ 47.86 ಲಕ್ಷ ರೈತರಿಗೆ ನೇರವಾಗಿ 956.71 ಕೋಟಿ ರೂ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ
TV9 Web
| Updated By: ಸಾಧು ಶ್ರೀನಾಥ್​|

Updated on:Apr 14, 2022 | 5:43 PM

Share

ಬೆಂಗಳೂರು, ಏಪ್ರಿಲ್ 14: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ (Contractor Santosh Suicide) ಸಂಪೂರ್ಣವಾಗಿ ತನಿಖೆಯಾಗಲಿದ್ದು (investigation report) ಸತ್ಯ ಹೊರಬರಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು (Basavaraj Bommai). ಅವರು ಇಂದು ತಮ್ಮ ಆರ್.ಟಿ. ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಗೆ ನೈತಿಕ ಹಕ್ಕಿಲ್ಲ ತಮ್ಮ ಕಾಲದಲ್ಲಿ ಹಲವಾರು ಕೊಲೆಗಳಾಗಿ, ಆ ಕೊಲೆ ಮಾಡಿದ ಸಂಘಟನೆಗಳ ಮೇಲಿನ ಪ್ರಕರಣಗಳನ್ನೂ ಹಿಂಪಡೆದು, ರಾಜ್ಯದಲ್ಲಿ ಅರಾಜಕತೆ ಇದ್ದದ್ದರಿಂದಲೇ ಜನ ಕಾಂಗ್ರೆಸ್ ನ್ನು ತಿರಸ್ಕರಿಸಿದರು. ಅವರಿಗೆ ಈಗ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಸಿಎಂ ಬೊಮ್ಮಾಯಿ ವ್ಯಾಖ್ಯಾನಿಸಿದರು. ಆಧಾರರಹಿತ ಆರೋಪಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಆಧಾರಗಳಿದ್ದರೆ ಅದನ್ನ ಕೊಡಲಿ, ತನಿಖೆ ಮಾಡಿಸುತ್ತೇವೆ. ಸದ್ಯಕ್ಕೆ ಪ್ರಾಥಮಿಕ ತನಿಖೆಯಾಗಲಿದೆ. ಅದರ ಆಧಾರದ ಮೇಲೆ ಏನಾಗಲಿದೆ ಎಂದು ನೋಡೋಣ ಎಂದು ತಿಳಿಸಿದರು.

ತನಿಖೆಯ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜಿನಾಮೆ ಬಗ್ಗೆ ತನಿಖೆಯ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ. ಇದರಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಏನಿಲ್ಲ. ವರಿಷ್ಠರು ಮಾಹಿತಿಯನ್ನು ಪಡೆದಿದ್ದಾರೆ. ಹೈಕಮಾಂಡ್ ನವರ ಪಾತ್ರ ಇದರಲ್ಲಿ ಇಲ್ಲ. ನಿನ್ನೆ ರಾತ್ರಿ ಸಂತೋಷ್ ಶವ ಪರೀಕ್ಷೆಯಾಗಿದೆ. ಪ್ರಾಥಮಿಕ ತನಿಖೆಯಾಗಲಿ. ತನಿಖೆಯ ಆಧಾರದ ಮೇಲೆ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಸಿಎಂ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಆರೋಪ ಮಾಡಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಗಳಿದ್ದಾಗ ಲಂಚದ ಆರೋಪಗಳು ಬಂದಿವೆ. ಬಿಡಿಎ ನಲ್ಲಿ ದೊಡ್ಡ ಹಗರಣವಾಗಿತ್ತು. ಆರೋಪಗಳು ಬಂದಿವೆ. ಅವರಿಗೆ ಯಾವ ಹಕ್ಕಿದೆ. ಏನಾದರೂ ಇದ್ದರೆ, ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಪ್ರಕರಣದ ಬಗ್ಗೆ ತಿಳಿಸಿದರೆ ತನಿಖೆ ಮಾಡುತ್ತೇವೆ ಎಂದರು.

ಗೋವಿಂದ ಕಾರಜೋಳ ಹಾಗೂ ಸುಧಾಕರ್ ಅವರ ವಿರುದ್ಧವೂ ಆರೋಪಗಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಯಾರೇ ಇರಲಿ. ಯಾವುದೇ ಕಚೇರಿ ಇರಲಿ.. ನಿರ್ದಿಷ್ಟ ಆರೋಪಗಳಿದ್ದರೆ ಅದಕ್ಕೆ ಉತ್ತರ, ಪ್ರತಿಕ್ರಿಯೆ ನೀಡಬಹುದು ಎಂದರು.

ಗುತ್ತಿಗೆದಾರರ ಸಂಘ ಪ್ರತಿಭಟನೆ ಮಾಡುವ ಬಗ್ಗೆ ಉತ್ತರಿಸಿ, ಹಲವಾರು ಗುತ್ತಿಗೆದಾರರ ಸಂಘಗಳಿವೆ. ಅವರ ತೀರ್ಮಾನಗಳೇನು ಎಂದು ಗೊತ್ತಿಲ್ಲ. ಏನಾದರೂ ನಿರ್ದಿಷ್ಟ ಪ್ರಕರಣಗಳಿದ್ದರೆ ಕೊಡಲಿ, ತನಿಖೆ ಮಾಡಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Published On - 5:39 pm, Thu, 14 April 22