AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡವಾಳ ಇಲ್ಲದೆ ಸಿಲಿಂಡರ್ ಬಿಸಿನೆಸ್​ಗೆ ಇಳಿದ ಖದೀಮರು; ಬಾಡಿಗೆ ಪಡೆದ 100 ಸಿಲಿಂಡರ್ಗಳನ್ನ ಮಾರಾಟ ಮಾಡಲು ಹೋಗಿ ಲಾಕ್ ಆದ್ರು

ಸಣ್ಣ ಪುಟ್ಟ ಗ್ಯಾಸ್ ಏಜೆನ್ಸಿಗಳಲ್ಲಿ ಕೆಲಸ ಮಾಡ್ತಿದ್ದ ಸುಹೇಲ್, ಸೈಯದ್, ಗಣೇಶ್ ಅನ್ನೋ ಇವ್ರಿಗೆ ಮೈ ಬಗ್ಗಿಸಿ ದುಡಿಯೋದು ಅಂದ್ರೆ ಆಗ್ತಿರ್ಲಿಲ್ಲ. ಕಟ್ ರೂಟ್ನಲ್ಲಿ ಬೇಗ ಹಣ ಮಾಡ್ಬೇಕು ಅನ್ಕೊಂಡಿದ್ದ ಖದೀಮರು, ಸಿಲಿಂಡರ್ ಕಳ್ಳತನದ ಪ್ಲ್ಯಾನ್ ಮಾಡಿದ್ರು.

ಬಂಡವಾಳ ಇಲ್ಲದೆ ಸಿಲಿಂಡರ್ ಬಿಸಿನೆಸ್​ಗೆ ಇಳಿದ ಖದೀಮರು; ಬಾಡಿಗೆ ಪಡೆದ 100 ಸಿಲಿಂಡರ್ಗಳನ್ನ ಮಾರಾಟ ಮಾಡಲು ಹೋಗಿ ಲಾಕ್ ಆದ್ರು
ಬಂಡವಾಳ ಇಲ್ಲದೆ ಸಿಲಿಂಡರ್ ಬುಸಿನೆಸ್​ಗೆ ಇಳಿದ ಖದೀಮರು; ಬಾಡಿಗೆ ಪಡೆದ 100 ಸಿಲಿಂಡರ್ಗಳನ್ನ ಮಾರಾಟ ಮಾಡಲು ಹೋಗಿ ಲಾಕ್ ಆದ್ರು
TV9 Web
| Edited By: |

Updated on:Apr 14, 2022 | 8:07 PM

Share

ಬೆಂಗಳೂರು: ಈಸಿಯಾಗಿ ದುಡ್ ಮಾಡ್ಬೇಕು. ಶ್ರಮ ಇಲ್ಲದೆ ಹಣ ಗಳಿಸಬೇಕು ಅಂತ ಕಳ್ಳದಾರಿ ಹಿಡಿದಿದ್ದ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಡವಾಳ ಇಲ್ಲದೆ ಸಿಲಿಂಡರ್ ಬಿಸಿನೆಸ್ಗೆ ಇಳಿದ ಮೂರು ಖದೀಮರು ಬಾಡಿಗೆ ಪಡೆದ ಸಿಲಿಂಡರ್ಗಳನ್ನ ಮಾರಾಟ ಮಾಡಲು ಹೋಗಿ ಪೊಲೀಸರ ಅತಿಥಿ ಆಗಿದ್ದಾರೆ.  ಬಿಸಿನೆಸ್ ಮಾಡ್ಬೇಕಂದ್ರೆ ಸ್ವಲ್ಪ ಬಂಡವಾಳನಾದ್ರೂ ಇರ್ಬೇಕು. ಇಲ್ಲಾ ಶ್ರಮನಾದ್ರೂ ಹಾಕ್ಬೇಕು. ಆದ್ರೆ ಈ ಖದೀಮರು ಹಣ ಇಲ್ಲದೆ ಶ್ರಮ ಪಡದೆ ಬಿಸಿನೆಸ್ ಮಾಡೋ ಕಳ್ಳ ದಾರಿ ಹುಡುಕಿಕೊಂಡಿದ್ರು. ಗ್ಯಾಸ್ ಏಜೆನ್ಸಿಗೆ ಕಾಲ್ ಮಾಡಿ ಬಳಿಕ ಯಾಮಾರಿಸಿ ಲಕ್ಷ ಲಕ್ಷ ಸಂಪಾದಿಸೋಕೆ ಹೋಗಿ ಭವಿಷ್ಯದ ದಾರಿಗೆ ಕಲ್ಲು ಹಾಕ್ಕೊಂಡಿದ್ದಾರೆ.

ಸಣ್ಣ ಪುಟ್ಟ ಗ್ಯಾಸ್ ಏಜೆನ್ಸಿಗಳಲ್ಲಿ ಕೆಲಸ ಮಾಡ್ತಿದ್ದ ಸುಹೇಲ್, ಸೈಯದ್, ಗಣೇಶ್ ಅನ್ನೋ ಇವ್ರಿಗೆ ಮೈ ಬಗ್ಗಿಸಿ ದುಡಿಯೋದು ಅಂದ್ರೆ ಆಗ್ತಿರ್ಲಿಲ್ಲ. ಕಟ್ ರೂಟ್ನಲ್ಲಿ ಬೇಗ ಹಣ ಮಾಡ್ಬೇಕು ಅನ್ಕೊಂಡಿದ್ದ ಖದೀಮರು, ಸಿಲಿಂಡರ್ ಕಳ್ಳತನದ ಪ್ಲ್ಯಾನ್ ಮಾಡಿದ್ರು. ಆದ್ರೆ ಕಳ್ಳತನ ರಿಸ್ಕ್ ಜಾಸ್ತಿ ಅಂತಾ ಬಂಡವಾಳ ಇಲ್ಲದೆ ಏಕಾಏಕಿ ನೂರು ಸಿಲಿಂಡರ್ ಬಾಡಿಗೆಗೆ ಪಡೆದು ಮಾರಾಟಕ್ಕೆ ಇಳಿದು ಹಣ ಮಾಡಲು ಮುಂದಾಗಿದ್ರು. ಏಪ್ರಿಲ್ ಐದರಂದು ಬಾಣಸವಾಡಿಯ ಪ್ರತೀಕ್ ಗ್ಯಾಸ್ ಏಜೆನ್ಸಿಗೆ ಆರೋಪಿಗಳು ಕರೆ ಮಾಡಿದ್ರು. ನೂರು ಲೋಡೆಡ್ ಸಿಲಿಂಡರ್ ಬೇಕು ಅಂತಾ ಕೇಳಿದ್ರು.

ದೊಡ್ಡ ಕಸ್ಟಮರ್ ಸಿಕ್ರು ಅಂತಾ ಹಿಂದು ಮುಂದು ನೋಡದ ಏಜೆನ್ಸಿ ಮಾಲೀಕ ರಘು, ಹೆಬ್ಬಾಳದ ಕಾಫಿ ಬೋರ್ಡ್ ಬಳಿ 100 ಸಿಲಿಂಡರ್ ಡೆಲಿವರಿ ಕೊಟ್ಟಿದ್ರು. ಆದ್ರೆ ಸಿಲಿಂಡರ್ ಪಡೆದಿದ್ದ ಆರೋಪಿಗಳು ಹಣ ಆಮೇಲೆ ಕೊಡೋದಾಗಿ ಹೇಳಿ ಎಸ್ಕೇಪ್ ಆಗಿದ್ರು. ಬಳಿಕ ಪರಿಚಯಸ್ಥ ಗ್ರಾಹಕರಿಗೆ ಸಿಲಿಂಡರ್ ಮಾರಿ ಹಣ ಸಂಪಾದಿಸ್ತಿದ್ರು. ಆದ್ರೆ ಹಣ, ಖಾಲಿ ಸಿಲಿಂಡರ್ ಸಿಗದೆ ಕಂಗಲಾದ ಗ್ಯಾಸ್ ಏಜೆನ್ಸಿ ಮಾಲೀಕ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನ ಲಾಕ್ ಮಾಡಿದ್ದಾರೆ.

ಕೃತ್ಯಕ್ಕೆ ಬಳಸಿದ್ದ 3 ವಾಹನ ಸೇರಿ ಲೋಡೆಡ್ ಸಿಲಿಂಡರ್ಗಳನ್ನ ಪೊಲೀಸರು ರಿಕವರಿ ಮಾಡಿದ್ದಾರೆ. ಏನೇ ಇರ್ಲಿ. ಮೈ ಬಗ್ಗಿಸಿ ಕೆಲಸ ಮಾಡೋದ್ ಬಿಟ್ಟು ಶಾರ್ಟ್ ಟೈಮಲ್ಲಿ ಹಣ ಮಾಡೋಕೆ ಹೋಗಿ ಜೈಲು ಸೇರಿದ್ದು ಮೂವರ ಭವಿಷ್ಯಕ್ಕೆ ಕಪ್ಪು ಚುಕ್ಕೆ ಆಗಿದೆ.

ವರದಿ: ಪ್ರಜ್ವಲ್, ಟಿವಿ9, ಬೆಂಗಳೂರು

ಇದನ್ನೂ ಓದಿ: ಬಿಜೆಪಿ ಬಗ್ಗೆ ರಾಜ್ ಠಾಕ್ರೆ ಏಕೆ ಮೌನವಾಗಿದ್ದಾರೆ ಎಂಬುದು ಜನರಿಗೆ ಗೊತ್ತು: ಶರದ್ ಪವಾರ್

ಬಾಗಲಕೋಟೆಯಲ್ಲಿ 1 ಲಕ್ಷ 50 ಸಾವಿರ ರೂ ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರಹಾಕಿ ಸಚಿವ S.R.ಪಾಟೀಲ್​ಗೆ ಸ್ವಾಗತ

Published On - 8:02 pm, Thu, 14 April 22