ಬಾಗಲಕೋಟೆಯಲ್ಲಿ 1 ಲಕ್ಷ 50 ಸಾವಿರ ರೂ ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರಹಾಕಿ ಸಚಿವ S.R.ಪಾಟೀಲ್​ಗೆ ಸ್ವಾಗತ

ಬಾಗಲಕೋಟೆಯಲ್ಲಿ 1 ಲಕ್ಷ 50 ಸಾವಿರ ರೂ ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರಹಾಕಿ ಸಚಿವ S.R.ಪಾಟೀಲ್​ಗೆ ಸ್ವಾಗತ
ಬಾಗಲಕೋಟೆಯಲ್ಲಿ 1 ಲಕ್ಷ 50 ಸಾವಿರ ರೂ ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರಹಾಕಿ ಸಚಿವ S.R.ಪಾಟೀಲ್​ಗೆ ಸ್ವಾಗತ

ಸೇಬು ಹಾರದ ಮೂಲಕ S.R.ಪಾಟೀಲ್ರಿಗೆ ಭರ್ಜರಿ ಸ್ವಾಗತ ಮಾಡಲಾಗಿದೆ. ಕಳೆದ ಎರಡು ದಿನದಿಂದ ನಡೆಯುತ್ತಿರುವ ಸಂಕಲ್ಪ ಯಾತ್ರೆ ಇಂದು ಬಾಗಲಕೋಟೆಯಲ್ಲಿ ನಡೆಯುತ್ತಿದೆ. 1 ಲಕ್ಷ 50 ಸಾವಿರ ರೂ ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರಹಾಕಿ ಅಭಿಮಾನಿಗಳು S.R.ಪಾಟೀಲ್ರಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

TV9kannada Web Team

| Edited By: Ayesha Banu

Apr 14, 2022 | 6:41 PM

ಬಾಗಲಕೋಟೆ: ಕೃಷ್ಣಾ, ಮಹದಾಯಿ ಹಾಗೂ ನವಲಿ ಸಂಕಲ್ಪ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಾಜಿ ಸಚಿವ S.R.ಪಾಟೀಲ್(SR Patil) ನೇತೃತ್ವದ ಟ್ರ್ಯಾಕ್ಟರ್ ಱಲಿ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ದೇವಿ ದರ್ಶನ ಪಡೆದು ಶಿವಯೋಗಮಂದಿರದಿಂದ ರ್ಯಾಲಿ ಆರಂಭವಾಗಿದೆ. ಜೆಸಿಬಿ ಮೂಲಕ S.R.ಪಾಟೀಲ್ ಅಭಿಮಾನಿಗಳು ಹೂ ಮಳೆ ಸುರಿಸಿದ್ದಾರೆ. ಬೃಹತ್ ಸೇಬು ಹಾರ(Apple Garland) ಹಾಕಿ ಭರ್ಜರಿ ಸ್ವಾಗತ ಮಾಡಿದ್ದಾರೆ.

ಸೇಬು ಹಾರದ ಮೂಲಕ S.R.ಪಾಟೀಲ್ರಿಗೆ ಭರ್ಜರಿ ಸ್ವಾಗತ ಮಾಡಲಾಗಿದೆ. ಕಳೆದ ಎರಡು ದಿನದಿಂದ ನಡೆಯುತ್ತಿರುವ ಸಂಕಲ್ಪ ಯಾತ್ರೆ ಇಂದು ಬಾಗಲಕೋಟೆಯಲ್ಲಿ ನಡೆಯುತ್ತಿದೆ. 1 ಲಕ್ಷ 50 ಸಾವಿರ ರೂ ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರಹಾಕಿ ಅಭಿಮಾನಿಗಳು S.R.ಪಾಟೀಲ್ರಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ಎಸ್ಆರ್ ಪಾಟೀಲ್ ಅವರ ಕಟ್ಟಾ ಅಭಿಮಾನಿ, ಕಾಂಗ್ರೆಸ್ ಮುಖಂಡ ಪೀರಪ್ಪ ಮ್ಯಾಗೇರಿ ಬೃಹತ್ ಸೇಬಿನ ಹಾರ ಹಾಕಿಸಿದ್ದಾರೆ. ನೆಚ್ಚಿನ‌ ನಾಯಕರಿಗೆ ಸೇಬಿನ ಹಾರ ಹಾಕಿ ಅಭಿಮಾನ ವ್ಯಕ್ತಪಡಿಸಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿ ಬಾಗಲಕೋಟೆ ಬಸವೇಶ್ವರ ಸರ್ಕಲ್ಗೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಜನ ಸಂಭ್ರಮಿಸಿದ್ದಾರೆ.

ಇನ್ನು ಬೃಹತ್ ಸೇಬಿನ ಹಾರದ ಸೇಬು ಕೀಳಲು ಬಾಲಕರು, ಯುವಕರು ಮುಗಿಬಿದ್ದಿದ್ದು ಸೇಬಿನ ಹಣ್ಣು ಕೀಳಲು ಹೋಗಿ ಬಾಲಕ ಹಾರದಲ್ಲಿ ಸಿಲುಕಿ ಹಾಕಿಕೊಂಡ ಘಟನೆ ನಡೆಯಿತು. ಸದ್ಯ ಬಾಲಕನನ್ನು ನಿಧಾನವಾಗಿ ಯುವಕರು ಕೆಳಗಿಳಿಸಿದ್ದಾರೆ. ಸೇಬು ಹಣ್ಣು ಕಿತ್ತುಕೊಳ್ಳಲು ನೂಕು ನುಗ್ಗಲಾಗಿದೆ. ಟ್ರ್ಯಾಕ್ಟರ್ ಮೇಲೆ ನಿಂತು ಸೇಬು ಕೀಳಲು ಯುವಕರು ಯತ್ನಿಸಿದ್ದಾರೆ.

apple garland 1

ಕೃಷ್ಣಾ, ಮಹದಾಯಿ ಹಾಗೂ ನವಲಿ ಸಂಕಲ್ಪ ಯಾತ್ರೆ

ಇದನ್ನೂ ಓದಿ: ಪಾಕ್ ಆಟಗಾರನ ಜೊತೆ ಪಾದಾರ್ಪಣೆ ಮಾಡಿದ ಚೇತೇಶ್ವರ ಪೂಜಾರ

KS Eshwarappa Press Meet: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಸಂಬಂಧ ದಿಢೀರ್ ಸುದ್ದಿಗೋಷ್ಠಿ ಕರೆದ ಕೆ.ಎಸ್.ಈಶ್ವರಪ್ಪ

Follow us on

Related Stories

Most Read Stories

Click on your DTH Provider to Add TV9 Kannada