Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

Thalapathy Vijay: ಕಾಲಿವುಡ್​ ನಟ ದಳಪತಿ ವಿಜಯ್​ ಪುತ್ರ ಸಂಜಯ್​ ಅವರಿಗೆ ಈಗಾಗಲೇ ಬೇಡಿಕೆ ಬಂದಿದೆ. ಆ ಕುರಿತು ವಿಜಯ್​ ಮಾತನಾಡಿದ್ದಾರೆ.

‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು
ದಳಪತಿ ವಿಜಯ್
Follow us
TV9 Web
| Updated By: ಮದನ್​ ಕುಮಾರ್​

Updated on:Apr 15, 2022 | 9:59 AM

ತಮಿಳಿನ ಖ್ಯಾತ​ ನಟ ದಳಪತಿ ವಿಜಯ್​ (Thalapathy Vijay) ಅವರು ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಸಿನಿಮಾ ಕ್ಷೇತ್ರದ ಆಗುಹೋಗುಗಳ ಬಗ್ಗೆ ಅವರಿಗೆ ಸ್ಪಷ್ಟ ಅರಿವು ಇದೆ. ಗಲ್ಲಾಪೆಟ್ಟಿಗೆ ವ್ಯವಹಾರದ ಬಗ್ಗೆ ವಿಜಯ್​ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹಾಗಿದ್ದರೂ ಕೂಡ ‘ಬೀಸ್ಟ್​’ ಸಿನಿಮಾ (Beast Movie) ಬಿಡುಗಡೆ ವಿಚಾರದಲ್ಲಿ ಅವರು ಎಡವಿದ್ದಾರೆ ಎಂಬುದು ಸ್ಪಷ್ಟ. ಬಹುನಿರೀಕ್ಷಿತ ‘ಕೆಜಿಎಫ್​: ಚಾಪ್ಟರ್ 2’ ಸಿನಿಮಾದ ಎದುರಿನಲ್ಲಿ ‘ಬೀಸ್ಟ್​’ ರಿಲೀಸ್​ ಆಗುತ್ತದೆ ಎಂಬುದು ಗೊತ್ತಾದಾಗಲೇ ಜನರು ಬುದ್ಧಿಮಾತು ಹೇಳಿದ್ದರು. ‘ಬೀಸ್ಟ್​’ ಬಿಡುಗಡೆಯನ್ನು ಮುಂದೂಡುವುದೇ ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ ಆ ಬಗ್ಗೆ ಚಿತ್ರತಂಡದವರು ತಲೆ ಕೆಡಿಸಿಕೊಳ್ಳಲಿಲ್ಲ. ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಆ ಚಿತ್ರದ ಬಗ್ಗೆ ನೆಗೆಟಿವ್​ ವಿಮರ್ಶೆ ಕೇಳಿಬಂದಿದೆ. ಇತ್ತ, ‘ಕೆಜಿಎಫ್​: ಚಾಪ್ಟರ್​ 2’ ಎಲ್ಲ ಕಡೆಗಳಲ್ಲೂ ಅಬ್ಬರಿಸುತ್ತಿದೆ. ಇದರಿಂದ ಸಹಜವಾಗಿಯೇ ‘ಬೀಸ್ಟ್​’ ಚಿತ್ರಕ್ಕೆ ಹಿನ್ನಡೆ ಆಗಿದೆ. ಈ ನಡುವೆ ದಳಪತಿ ವಿಜಯ್​ ಪುತ್ರನ (Thalapathy Vijay son Sanjay) ಸಿನಿಮಾ ಎಂಟ್ರಿ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಸ್ಟಾರ್​ ನಟರ ಮಕ್ಕಳು ಚಿತ್ರರಂಗಕ್ಕೆ ಕಾಲಿಡುವುದು ವಾಡಿಕೆ. ಹಾಗಾಗಿ ದಳಪತಿ ವಿಜಯ್​ ಪುತ್ರ ಸಂಜಯ್​ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಆ ಕುರಿತು ಇತ್ತೀಚೆಗೆ ವಿಜಯ್​ ಮಾತನಾಡಿದ್ದಾರೆ. ಕಳೆದ 10 ವರ್ಷಗಳಿಂದ ವಿಜಯ್​ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿರಲಿಲ್ಲ. ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗುತ್ತದೆ ಎಂಬ ಕಾರಣ ಅವರು ಈ ನಿಲುವು ತಾಳಿದ್ದರು. ಆದರೆ ‘ಬೀಸ್ಟ್​’ ಬಿಡುಗಡೆ ಹೊಸ್ತಿಲಿನಲ್ಲಿ ಅವರು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು ಅಚ್ಚರಿ ಮೂಡಿಸಿದೆ. ಈ ವೇಳೆ ಮಗನ ಸಿನಿಮಾ ಪ್ರವೇಶದ ಬಗ್ಗೆ ಅವರು ಮಾತನಾಡಿದರು.

ವಿಜಯ್ ಪುತ್ರನ ಹೆಸರು ಸಂಜಯ್​. ಅವರು ಶೀಘ್ರದಲ್ಲೇ ಹೀರೋ ಆಗಿ ಪಾದಾರ್ಪಣೆ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ. ‘ನನ್ನ ಮಗ ಸಂಜಯ್​ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. ಆತನಿಗೆ ನಾನು ಒತ್ತಾಯ ಮಾಡುವುದಿಲ್ಲ. ಎಲ್ಲವೂ ಅವನ ಆಸಕ್ತಿಗೆ ಬಿಟ್ಟಿದ್ದು. ನನ್ನ ಅಗತ್ಯ ಅವನಿಗೆ ಇದೆ ಎಂದಾದರೆ ನಾನು ಸಪೋರ್ಟ್​ ಮಾಡುತ್ತೇನೆ. ಆತ ನಟನೆ ಮಾಡುತ್ತಾನಾ ಎಂಬ ಬಗ್ಗೆ ಕೆಲವರು ಈಗಾಗಲೇ ನನ್ನ ಬಳಿ ಕೇಳಿದ್ದಾರೆ. ‘ಪ್ರೇಮಂ’ ನಿರ್ದೇಶಕ ಅಲ್ಫಾನ್ಸ್​ ಪುತ್ರನ್​ ಅವರು ಬಂದು ಒಂದು ಕಥೆ ಹೇಳಿದ್ದರು. ಅದು ತುಂಬ ಚೆನ್ನಾಗಿತ್ತು’ ಎಂದು ವಿಜಯ್​ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ಕೆಲವು ವಿವಾದಾತ್ಮಕ ವಿಚಾರಗಳ ಬಗ್ಗೆಯೂ ವಿಜಯ್​ ಮಾತನಾಡಿದರು. ಧರ್ಮದ ಕಾರಣಕ್ಕಾಗಿ ವಿಜಯ್​ ಕೆಲವೊಮ್ಮೆ ಟ್ರೋಲ್ ಆಗುವುದುಂಟು. ಆ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ತಾಯಿ ಹಿಂದೂ, ನನ್ನ ತಂದೆ ಕ್ರಿಶ್ಚಿಯನ್​. ನಾನು ದೇವರಲ್ಲಿ ನಂಬಿಕೆ ಇಟ್ಟವನು. ದೇವಸ್ಥಾನ, ಚರ್ಚ್​, ದರ್ಗಾ ಎಲ್ಲದಕ್ಕೂ ನಾನು ಹೋಗುತ್ತೇನೆ. ಇಲ್ಲೇ ಹೋಗಬೇಕು, ಅಲ್ಲೇ ಹೋಗಬೇಕು ಅಂತ ಪೋಷಕರು ನನಗೆ ಒತ್ತಾಯ ಮಾಡಿಲ್ಲ. ನನ್ನ ಮಕ್ಕಳಿಗೂ ನಾನು ಒತ್ತಾಯ ಮಾಡಲ್ಲ’ ಎಂದು ವಿಜಯ್​ ಹೇಳಿದ್ದಾರೆ.

ರಾಜಕೀಯದ ವಿಚಾರದಲ್ಲಿ ವಿಜಯ್​ ಅವರು ತಂದೆ ಎಸ್​ಎ ಚಂದ್ರಶೇಖರ್​ ಜೊತೆ ಮನಸ್ತಾಪ ಮಾಡಿಕೊಂಡಿದ್ದರು. ಆದರೆ ಸಂದರ್ಶನದಲ್ಲಿ ಅವರು ತಂದೆ ಬಗ್ಗೆ ಗೌರವದ ಮಾತುಗಳನ್ನು ಆಡಿದ್ದಾರೆ. ತಂದೆ ದೇವರಿಗೆ ಸಮಾನ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

Beast Twitter Review: ‘ಬೀಸ್ಟ್’​ ನೋಡಿ ಡಿಸಾಸ್ಟರ್​ ಎಂದ ಪ್ರೇಕ್ಷಕರು; ದಳಪತಿ ವಿಜಯ್​ ಸಿನಿಮಾ ಹೇಗಿದೆ?

‘ಬೀಸ್ಟ್​’ ಚೆನ್ನಾಗಿಲ್ಲ ಎಂಬ ಹತಾಶೆಯಿಂದ​ ಥಿಯೇಟರ್​ ಪರದೆಗೆ ಬೆಂಕಿ ಹಚ್ಚಿದ ವಿಜಯ್​ ಫ್ಯಾನ್ಸ್​? ವಿಡಿಯೋ ವೈರಲ್​

Published On - 9:55 am, Fri, 15 April 22

ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು