Beast Twitter Review: ‘ಬೀಸ್ಟ್’​ ನೋಡಿ ಡಿಸಾಸ್ಟರ್​ ಎಂದ ಪ್ರೇಕ್ಷಕರು; ದಳಪತಿ ವಿಜಯ್​ ಸಿನಿಮಾ ಹೇಗಿದೆ?

Beast Movie: ‘ಬೀಸ್ಟ್​’ ಚಿತ್ರದ ಫಸ್ಟ್​ ಹಾಫ್​ ನೋಡಿ ಜನರು ಎಂಜಾಯ್​ ಮಾಡಿದ್ದಾರೆ. ಆದರೆ ಅದೇ ಪ್ರಮಾಣದ ಮನರಂಜನೆಯನ್ನು ಸೆಕೆಂಡ್​ ಹಾಫ್​ನಲ್ಲಿ ನೀಡಲು ದಳಪತಿ ವಿಜಯ್​ ಚಿತ್ರ ವಿಫಲವಾಗಿದೆ.

Beast Twitter Review: ‘ಬೀಸ್ಟ್’​ ನೋಡಿ ಡಿಸಾಸ್ಟರ್​ ಎಂದ ಪ್ರೇಕ್ಷಕರು; ದಳಪತಿ ವಿಜಯ್​ ಸಿನಿಮಾ ಹೇಗಿದೆ?
ದಳಪತಿ ವಿಜಯ್
Follow us
TV9 Web
| Updated By: ಮದನ್​ ಕುಮಾರ್​

Updated on: Apr 13, 2022 | 8:08 AM

ಭಾರಿ ನಿರೀಕ್ಷೆ ಸೃಷ್ಟಿ ಮಾಡಿದ್ದ ‘ಬೀಸ್ಟ್​’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ದಳಪತಿ ವಿಜಯ್ (Thalapathy Vijay)​ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಈಗಾಗಲೇ ಅನೇಕ ಕಡೆಗಳಲ್ಲಿ ಫಸ್ಟ್​ ಡೇ ಫಸ್ಟ್​ ಶೋ ಪ್ರದರ್ಶನ ಕಂಡಿದೆ. ಕೆಲವು ಚಿತ್ರಮಂದಿರದಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭ ಆಗಿತ್ತು. ಸಿನಿಮಾ ನೋಡಿ ಬಂದಿರುವ ಪ್ರೇಕ್ಷಕರು ಹಲವು ಬಗೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ‘ಬೀಸ್ಟ್​’ ಚಿತ್ರದ ಟ್ವಿಟರ್​ ವಿಮರ್ಶೆ (Beast Twitter Review) ನೋಡಿ ಎಲ್ಲರಿಗೂ ಶಾಕ್​ ಆಗುತ್ತಿದೆ. ಕೆಲವರಿಗೆ ಈ ಸಿನಿಮಾ ಕಿಂಚಿತ್ತೂ ಇಷ್ಟ ಆಗಿಲ್ಲ. ಹಾಗಾಗಿ #BeastDisaster ಎಂಬ ಹ್ಯಾಷ್​ಟ್ಯಾಗ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಪ್ಪಟ ವಿಜಯ್​ ಅಭಿಮಾನಿಗಳು ಮಾತ್ರ ಬೀಸ್ಟ್​’ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಎದುರು ಪೈಪೋಟಿ ನೀಡಲು ಬಂದಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ #BeastDisaster ಎಂಬ ರೀತಿಯಲ್ಲಿ ವಿಮರ್ಶೆ (Beast Review) ಸಿಕ್ಕಿರುವುದರಿಂದ ಗಲ್ಲಾ ಪೆಟ್ಟಿಗೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಿದೆ. ಒಟ್ಟಾರೆ ಜನರು ಈ ಸಿನಿಮಾ ಬಗ್ಗೆ ಏನೆಲ್ಲ ಟ್ವೀಟ್​ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ..

‘ಬೀಸ್ಟ್​’ ಚಿತ್ರದ ಕಥೆ ಏನು ಎಂಬುದನ್ನು ಟ್ರೇಲರ್​ ಮೂಲಕ ತಿಳಿಸಲಾಗಿತ್ತು. ಆ ನಿರೀಕ್ಷೆಯಲ್ಲಿಯೇ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಖುಷಿ ಆಗಿದೆ. ದಳಪತಿ ವಿಜಯ್​ ಅವರ ಭರ್ಜರಿ ಆ್ಯಕ್ಷನ್​ ದೃಶ್ಯಗಳನ್ನು ಕಂಡು ಜನರು ಖುಷಿ ಆಗಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಮೂಡಿಬಂದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಬೀಸ್ಟ್​’ ಸಿನಿಮಾದ ಫಸ್ಟ್​ ಹಾಫ್​ ಕಂಡು ಅಭಿಮಾನಿಗಳು ಎಂಜಾಯ್​ ಮಾಡಿದ್ದಾರೆ. ಮುಂದೇನಾಗುತ್ತದೆ ಎಂಬ ಕೌತುಕದೊಂದಿಗೆ ಕಣ್ಣರಳಿಸಿದ್ದಾರೆ. ಆದರೆ ಅದೇ ಪ್ರಮಾಣದ ಮನರಂಜನೆಯನ್ನು ಸೆಕೆಂಡ್​ ಹಾಫ್​ನಲ್ಲಿ ನೀಡಲು ‘ಬೀಸ್ಟ್​’ ವಿಫಲವಾಗಿದೆ. ಆದ್ದರಿಂದ ಪ್ರೇಕ್ಷಕರು ಮುಲಾಜಿಲ್ಲದೇ ಟ್ವೀಟ್​ ಮಾಡಿದ್ದಾರೆ. ಚಿತ್ರದ ದ್ವಿತೀಯಾರ್ಧ ಬೋರಿಂಗ್​ ಆಗಿದೆ. ಕಾಮಿಡಿ ಕೂಡ ರುಚಿಸುವುದಿಲ್ಲ. ಕ್ಲೈಮ್ಯಾಕ್ಸ್​ ಸಹ ಚೆನ್ನಾಗಿಲ್ಲ ಎಂಬ ವಿಮರ್ಶೆಯನ್ನು ಜನರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಹಲವು ವಿಚಾರಗಳಲ್ಲಿ ‘ಬೀಸ್ಟ್​’ ಸಿನಿಮಾ ಎಡವಿದೆ. ಸೂಕ್ತ ರೀತಿಯಲ್ಲಿ ಈ ಚಿತ್ರಕ್ಕೆ ಪ್ರಚಾರ ಸಿಕ್ಕಿಲ್ಲ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ದೇಶಾದ್ಯಂತ ಅದ್ದೂರಿಯಾಗಿ ಪ್ರಚಾರ ಮಾಡಿದೆ. ಅದಕ್ಕೆ ಹೋಲಿಸಿದರೆ ‘ಬೀಸ್ಟ್​’ ಪ್ರಮೋಷನ್​ ಏನೇನೂ ಅಲ್ಲ. ಹೀರೋಯಿನ್​ ಪೂಜಾ ಹೆಗ್ಡೆ ಪಾತ್ರಕ್ಕೆ ಯಾವುದೇ ರೀತಿಯ ಪ್ರಾಮುಖ್ಯತೆ ಇಲ್ಲ. ಖಡಕ್​ ಆದ ವಿಲನ್​ಗಳು ಕೂಡ ಚಿತ್ರದಲ್ಲಿ ಇಲ್ಲ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಿದೆ ಎಂದು ಜನರು ಅನಿಸಿಕೆ ತಿಳಿಸಿದ್ದಾರೆ.

‘ಬೀಸ್ಟ್​’ ಚಿತ್ರಕ್ಕೆ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಸನ್​ ಪಿಕ್ಚರ್ಸ್​ ಮೂಲಕ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ. ಆ್ಯಕ್ಷನ್​ ಜೊತೆ ಕಾಮಿಡಿ ಮೂಲಕವೂ ರಂಜಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ ಅದೇಕೋ ಪ್ರೇಕ್ಷಕರಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಈ ರೀತಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ‘ಬೀಸ್ಟ್​’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಾವ ರೀತಿ ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಇದನ್ನೂ ಓದಿ:

‘ಬೀಸ್ಟ್​ Vs ಕೆಜಿಎಫ್​ ಅನ್ನೋಕೆ ಇದು ಎಲೆಕ್ಷನ್​ ಅಲ್ಲ’: ದಳಪತಿ ವಿಜಯ್​ ಚಿತ್ರದ ಪೈಪೋಟಿ ಬಗ್ಗೆ ಯಶ್​ ಪ್ರತಿಕ್ರಿಯೆ

ದಳಪತಿ ವಿಜಯ್ ಚಿತ್ರಕ್ಕೆ ಹಿನ್ನಡೆ; ಕಲೆಕ್ಷನ್​ ವಿಚಾರದಲ್ಲಿ ‘ಕೆಜಿಎಫ್​ 2’ ಹಿಂದಿಕ್ಕಲು ಬೀಸ್ಟ್​’ಗೆ ಅಸಾಧ್ಯ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ