AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನ್ನಿ ಫ್ಯಾನ್ಸ್​ಗೆ ಭರ್ಜರಿ ಆಫರ್; ಗ್ರಾಹಕರಿಗೆ ರಿಯಾಯಿತಿ ನೀಡಿದ ಮಂಡ್ಯದ ಅಭಿಮಾನಿ- ಆದರೆ ಷರತ್ತುಗಳು ಅನ್ವಯ!

Sunny Leone | Mandya fan gives offer: ಮಂಡ್ಯದ ಸನ್ನಿ ಲಿಯೋನ್ ಅಭಿಮಾನಿಯೋರ್ವರು ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಇದನ್ನು ಪಡೆಯಲು ಗ್ರಾಹಕರಿಗೆ ಮೂರು ಷರತ್ತುಗಳಿವೆ. ಏನದು? ಇಲ್ಲಿದೆ ನೋಡಿ.

ಸನ್ನಿ ಫ್ಯಾನ್ಸ್​ಗೆ ಭರ್ಜರಿ ಆಫರ್; ಗ್ರಾಹಕರಿಗೆ ರಿಯಾಯಿತಿ ನೀಡಿದ ಮಂಡ್ಯದ ಅಭಿಮಾನಿ- ಆದರೆ ಷರತ್ತುಗಳು ಅನ್ವಯ!
ಸನ್ನಿ ಲಿಯೋನ್ ಅಭಿಮಾನಿ ಗ್ರಾಹಕರಿಗೆ ನೀಡಿರುವ ಆಫರ್ (ಎಡ ಚಿತ್ರ), ನಟಿ ಸನ್ನಿ ಲಿಯೋನ್ (ಬಲ ಚಿತ್ರ)
TV9 Web
| Edited By: |

Updated on:Apr 15, 2022 | 11:21 AM

Share

ಮಂಡ್ಯ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್​ಗೆ (Sunny Leone) ದೇಶಾದ್ಯಂತ ಅಭಿಮಾನಿ ಬಳಗವಿದೆ. ವಿಶೇಷವಾಗಿ ಕನ್ನಡ ಚಿತ್ರಪ್ರೇಮಿಗಳಿಗೆ ಸನ್ನಿ ಲಿಯೋನ್ ಅಪರಿಚಿತರೇನಲ್ಲ. ಅವರು ಸ್ಯಾಂಡಲ್​ವುಡ್​ನಲ್ಲಿ ಕಾಣಿಸಿಕೊಂಡು, ಭರ್ಜರಿ ಹೆಜ್ಜೆ ಹಾಕಿ ಪಡ್ಡೆಹುಡುಗರಿಗೆ ಕಿಚ್ಚು ಹತ್ತಿಸಿದ್ದರು. ನಟಿ ಕೇವಲ ಚಿತ್ರರಂಗದ ವಿಚಾರಕ್ಕೆ ಸುದ್ದಿಯಾಗುವುದಿಲ್ಲ. ಸಾಮಾಜಿಕ ಕಾರ್ಯಗಳು, ದೇಣಿಗೆ ಹೀಗೆ ವಿವಿಧ ಕಾರಣಗಳಿಂದ ಜನಮನ ಗೆದ್ದಿದ್ದಾರೆ. ಅವರು ಅನಾಥ ಮಕ್ಕಳಿಗೆ ನೆರವಾಗುವುದು ಕೂಡ ಸುದ್ದಿಯಾಗಿದ್ದಿದೆ. ಆದರೆ ಸನ್ನಿ ಈ ವಿಚಾರಗಳ ಬಗ್ಗೆ ಪ್ರಚಾರ ಮಾಡಲು ಹೋಗುವುದಿಲ್ಲ. ತಮ್ಮ ಪಾಡಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಮೌನವಾಗಿದ್ದಾರೆ. ಆದರೆ ಇದನ್ನೆಲ್ಲವನ್ನೂ ಅಭಿಮಾನಿಗಳು ಗಮನಿಸಿದ್ದಾರೆ. ಅವರಿಗೆ ದಿನದಿಂದ ದಿನಕ್ಕೆ ಸನ್ನಿ ಮೇಲೆ ಅಭಿಮಾನ ಹೆಚ್ಚುತ್ತಲೇ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ಮಂಡ್ಯದಲ್ಲಿ ನಟಿಯ ಅಭಿಮಾನಿಯೋರ್ವರು ತಮ್ಮ ಚಿಕನ್ ಶಾಪ್​ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಆಫರ್ ಪಡೆಯಲು ಸನ್ನಿ ಅಭಿಮಾನಿಯಾಗಿದ್ದರೆ ಸಾಕು. ಹಾಗಂತ ಸುಮ್ಮನೆ ಅಭಿಮಾನಿ ಎಂದು ಹೇಳಿಕೊಳ್ಳುವಂತಿಲ್ಲ. ಅದಕ್ಕೂ ಒಂದಷ್ಟು ಷರತ್ತುಗಳಿವೆ.

ಸನ್ನಿ ಅಭಿಮಾನಿಯಾಗಿ ಆಫರ್ ಪಡೆಯಲು ಏನೇನು ಷರತ್ತುಗಳಿವೆ?

ಬಹುತೇಕರಿಗೆ ಸನ್ನಿ ಲಿಯೋನ್ ನೆಚ್ಚಿನ ನಟಿಯಾದರೂ ಅವರ ಬಗ್ಗೆ ಬಹಿರಂಗವಾಗಿ ಮಾತನಾಡಲು ಹೋಗುವುದಿಲ್ಲ. ಆದರೆ ಈ ಆಫರ್ ಪಡೆಯಲು ನೀವು ಹಾಗಿದ್ದರೆ ಸಾಲದು! ಹೌದು, ಅದಕ್ಕೂ ಷರತ್ತುಗಳಿವೆ. ಮಂಡ್ಯದಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳಿಗೆ 10% ಡಿಸ್ಕೌಂಟ್​ನಲ್ಲಿ ಚಿಕನ್ ಸಿಗುತ್ತದೆ. ಮಂಡ್ಯದ ಡಿ.ಕೆ. ಚಿಕನ್ ಸೆಂಟರ್ ಈ ವಿನೂತನ ಆಫರ್ ನೀಡಿದ ಸಂಸ್ಥೆಯಾಗಿದ್ದು, ಮಂಡ್ಯದ ನೂರು ಅಡಿ ರಸ್ತೆಯಲ್ಲಿದೆ. ಸನ್ನಿ ಲಿಯೋನ್ ಅಭಿಮಾನಿ ಪ್ರಸಾದ್ ಮಾಲೀಕತ್ವದ ಚಿಕನ್ ಸೆಂಟರ್ ಇದಾಗಿದ್ದು, ಆಫರ್ ಪಡೆಯಲು ಗ್ರಾಹಕರಿಗೆ ಮೂರು ಷರತ್ತುಗಳನ್ನು ವಿಧಿಸಲಾಗಿದೆ.

ಷರತ್ತುಗಳಲ್ಲಿ ಮೊದಲನೆಯದು, ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್​ಸ್ಟಾಗ್ರಾಂನಲ್ಲಿ ಸನ್ನಿ ಲಿಯೋನ್ ಅವರನ್ನು ಫಾಲೋ ಮಾಡುತ್ತಿರಬೇಕು. ಎರಡು, ತಮ್ಮ ಮೊಬೈಲ್​ನಲ್ಲಿ ಕನಿಷ್ಠ 10 ಸನ್ನಿ ಲಿಯೋನ್ ಫೋಟೋಗಳನ್ನು ಸೇವ್ ಮಾಡಿಕೊಂಡಿರಬೇಕು. ಮೂರನೆಯದು, ಸನ್ನಿ ಅವರ ಚಿತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಹಾಗೂ ಕಾಮೆಂಟ್ ಮಾಡಿರಬೇಕು.

ಇಷ್ಟು ಷರತ್ತುಗಳನ್ನು ನೀವು ಪೂರೈಸಿದ್ದರೆ ಖಂಡಿತವಾಗಿ ಚಿಕನ್​ 10% ರಿಯಾಯಿತಿ ದರದಲ್ಲಿ ದೊರೆಯಲಿದೆ ಎಂದಿದ್ದಾರೆ ಅಂಗಡಿ ಮಾಲಿಕರು. ಈ ಬಗ್ಗೆ ಚಿಕನ್ ಸೆಂಟರ್​ನಲ್ಲಿ ಸ್ಪೆಷಲ್ ಆಫರ್ ಬೋರ್ಡ್ ಅನ್ನು ಹಾಕಿದ್ದಾರೆ ಮಾಲಿಕ ಪ್ರಸಾದ್. ಇದೀಗ ಈ ವಿಚಾರ ವೈರಲ್ ಆಗಿದೆ.

ವಿಡಿಯೋ ಇಲ್ಲಿದೆ:

ಇದನ್ನೂ ಓದಿ: ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​

‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

Published On - 10:26 am, Fri, 15 April 22

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ