ಥಿಯೇಟರ್​ ಹೌಸ್​ಫುಲ್​ ಆಗಿದ್ದಕ್ಕೆ ಎಕ್ಸ್​ಟ್ರಾ ಚೇರ್ ಹಾಕಿ ‘ಕೆಜಿಎಫ್​ 2’ ನೋಡಿದ ತಮಿಳು ಮಂದಿ

ರಾಕಿ ನರಾಚಿಯ ಕಿಂಗ್ ಆಗಿ ಮೆರೆಯೋ ಕಥೆಯನ್ನು ಪ್ರಶಾಂತ್ ನೀಲ್ ಹೇಳಿದ್ದಾರೆ. ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ತಮಿಳುನಾಡಿನ ಮಂದಿ ಕೂಡ ಚಿತ್ರವನ್ನು ಹೆಚ್ಚೆಚ್ಚು ಇಷ್ಟಪಡುತ್ತಿದ್ದಾರೆ.

ಥಿಯೇಟರ್​ ಹೌಸ್​ಫುಲ್​ ಆಗಿದ್ದಕ್ಕೆ ಎಕ್ಸ್​ಟ್ರಾ ಚೇರ್ ಹಾಕಿ ‘ಕೆಜಿಎಫ್​ 2’ ನೋಡಿದ ತಮಿಳು ಮಂದಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 15, 2022 | 9:51 PM

ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಸಿನಿಮಾ (KGF Chapter 2) ಅಬ್ಬರ ಜೋರಾಗುತ್ತಿದೆ. ‘ಬೀಸ್ಟ್’ ಚಿತ್ರದ (Beast Movie) ಎದುರು ಈ ಸಿನಿಮಾ ತಲೆ ಎತ್ತಿ ನಿಲ್ಲುತ್ತಿದೆ. ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ತಮಿಳು ಮಂದಿ ಮುಗಿಬೀಳುತ್ತಿದ್ದಾರೆ. ಸಿನಿಮಾ ರಿಲೀಸ್ ಆದ ದಿನ ಬೀಸ್ಟ್ ಬದಲು ಕೆಜಿಎಫ್​ ನೋಡಿ, ಕೆಜಿಎಫ್ ಚಿತ್ರವೇ ನಿಜವಾದ ಬೀಸ್ಟ್’ ಎಂದು ತಮಿಳು ಪ್ರೇಕ್ಷಕರು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ತಮಿಳುನಾಡಿನಲ್ಲಿ ನಡೆದ ಘಟನೆಯೊಂದು ಚಿತ್ರದ ಮೇಲಿನ ಕ್ರೇಜ್ ಎಷ್ಟು ಅನ್ನೋದನ್ನು ತೋರಿಸಿದೆ.

ಆ್ಯಕ್ಷನ್​ ಸಿನಿಮಾಗಳನ್ನು ಹಲವರು ಇಷ್ಟಪಡುತ್ತಾರೆ. ಅವರಿಗಾಗಿಯೇ ಹೇಳಿ ಮಾಡಿಸಿದಂತಿದೆ ‘ಕೆಜಿಎಫ್ 2’ ಸಿನಿಮಾ. ಯಶ್ ಅವರು ರಗಡ್ ರಾಕಿ ಆಗಿ ಮಿಂಚಿದರೆ, ಸಂಜಯ್ ದತ್ ಹಾಗೂ ರವೀನಾ ಟಂಡನ್ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ರಾಕಿ ನರಾಚಿಯ ಕಿಂಗ್ ಆಗಿ ಮೆರೆಯೋ ಕಥೆಯನ್ನು ಪ್ರಶಾಂತ್ ನೀಲ್ ಹೇಳಿದ್ದಾರೆ. ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ತಮಿಳುನಾಡಿನ ಮಂದಿ ಕೂಡ ಚಿತ್ರವನ್ನು ಹೆಚ್ಚೆಚ್ಚು ಇಷ್ಟಪಡುತ್ತಿದ್ದಾರೆ.

ತಮಿಳುನಾಡಿನ ಹಲವು ಥಿಯೇಟರ್​ಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತಿವೆ. ಕೆಲವು ಕಡೆಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಚಿತ್ರಮಂದಿರ ಫುಲ್ ಆದ ಕಾರಣಕ್ಕೆ ಖಾಲಿ ಇರುವ ಜಾಗದಲ್ಲಿ ಹೆಚ್ಚುವರಿ ಚೇರ್​ಗಳನ್ನು ಹಾಕಿ ಸಿನಿಮಾ ತೋರಿಸಲಾಗಿದೆ ಎಂದು ಬಾಲಿವುಡ್​ ಹಂಗಾಮ ವರದಿ ಮಾಡಿದೆ. ಇನ್ನೂ ಕೆಲವು ಕಡೆಗಳಲ್ಲಿ ಫ್ಯಾನ್ಸ್ ಥಿಯೇಟರ್​ನ ನೆಲದ ಮೇಲೆ ಕೂತು ಸಿನಿಮಾ ನೋಡಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ನಿಂತು ‘ಕೆಜಿಎಫ್ 2’ ವೀಕ್ಷಣೆ ಮಾಡಿದ್ದಾರೆ.

ಯಶ್ಅ ಬ್ಬರಕ್ಕೆ ಅಲ್ಲಿನ ಬಾಕ್ಸ್ ಆಫೀಸ್ ಉಡೀಸ್ ಆಗಿದೆ. ಈ ಚಿತ್ರ ಮೊದಲ ದಿನ ಹಿಂದಿಯಲ್ಲಿ 53.95 ಕೋಟಿ ರೂಪಾಯಿ ಗಳಿಕೆ ಮಾಡಿದೆ! ಈ ಮೂಲಕ ಬಾಲಿವುಡ್​ನಲ್ಲೇ ಸಿದ್ಧಗೊಂಡ ‘ವಾರ್​’ (51.60) ಹಾಗೂ ‘ಥಗ್ಸ್ ಆಫ್​ ಹಿಂದೂಸ್ತಾನ್​’ (50.75) ಚಿತ್ರಗಳ ಮೊದಲ ದಿನದ ಕಲೆಕ್ಷನ್​ಅನ್ನು ಹಿಂದಿಕ್ಕಿದೆ. ಹಿಂದಿಯಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಖ್ಯಾತಿ ‘ಕೆಜಿಎಫ್​ 2’ಗೆ ಸಿಕ್ಕಿದೆ.

ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್ ಅವರು ಬಾಲಿವುಡ್​ ಅಂಗಳದಲ್ಲಿ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿದ್ದರು. ದೆಹಲಿ, ಮುಂಬೈ ಮೊದಲಾದ ಕಡೆಗಳಲ್ಲಿ ತೆರಳಿ ನಿರಂತರವಾಗಿ ಪ್ರಮೋಷನ್ ಮಾಡಿದ್ದರು. ಇದು ಫಲ ನೀಡಿದೆ. ಉತ್ತರ ಭಾರತದಲ್ಲಿ ಮುಂಜಾನೆಯಿಂದಲೇ ಸಿನಿಮಾ ಪ್ರದರ್ಶನ ಕಂಡಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ, ಬಾಕ್ಸ್ ಆಫೀಸ್​ ಗಳಿಕೆ ಹೆಚ್ಚಿದೆ.

ಇದನ್ನೂ ಓದಿ: ಬಾಲಿವುಡ್ ಒಂದರಲ್ಲೇ 300 ಕೋಟಿ ರೂಪಾಯಿ ಬಾಚಲಿದೆ ‘ಕೆಜಿಎಫ್​ 2’? ಹೌದೆನ್ನುತ್ತಿದ್ದಾರೆ ಪಂಡಿತರು

 ಅಮೆರಿಕದಲ್ಲಿ ಶೂಟ್ ಆಗಲಿದೆ ‘ಕೆಜಿಎಫ್ ಚಾಪ್ಟರ್ 3’?; ಇಲ್ಲಿದೆ ಹಲವು ಅಚ್ಚರಿಯ ವಿಚಾರಗಳು

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್