ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ ಸಿಂಪಲ್ ಸುನಿ? ‘ಅವತಾರ ಪುರುಷ’ ನಿರ್ದೇಶಕ ಹೇಳಿದ್ದಿದು..
Simple Suni | Avatara Purusha Movie: ಅವತಾರಪುರುಷ ಸಿನಿಮಾವನ್ನು ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಮಾಡಲಾಗಿದ್ದು, ಶೂಟಿಂಗ್ ಸಮಯದಲ್ಲಿ ಕೇರಳದಲ್ಲಿ ನೆಗೆಟಿವ್ ಎನರ್ಜಿ ಎಕ್ಸ್ಪಿರಿಯನ್ಸ್ ಆಗಿತ್ತು ಎಂದಿದ್ದಾರೆ ಸುನಿ. 300 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ ಎಂದು ಮಾಹಿತಿ ನೀಡಿರುವ ಅವರು, ಪಾರ್ಟ್ 1ಕ್ಕಿಂತಲೂ ಪಾರ್ಟ್ 2 ಮತ್ತಷ್ಟು ಥ್ರಿಲ್ಲಿಂಗ್ ಆಗಿರಲಿದೆ ಎಂದಿದ್ದಾರೆ.
ಸಿಂಪಲ್ ಸುನಿ (Simple Suni) ನಿರ್ದೇಶನದ ‘ಅವತಾರ ಪುರುಷ’ (Avatara Purusha) ಮೇ 6ರಂದು ತೆರೆಗೆ ಬರುತ್ತಿದೆ. ಶರಣ್, ಆಶಿಕಾ ರಂಗನಾಥ್ ಮೊದಲಾದ ತಾರೆಯರು ನಟಿಸಿರುವ ಚಿತ್ರ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ಇದೀಗ ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ನಿರ್ದೇಶಕ ಸುನಿ ಟಿವಿ9 ಜತೆ ಮಾತನಾಡಿದ್ದು, ಹಲವು ಕುತೂಹಲಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ‘ಕೆಜಿಎಫ್ ಚಾಪ್ಟರ್ 2’ ಯಶಸ್ಸಿನಿಂದ ಆದ ಲಾಭಗಳ ಬಗ್ಗೆ ಮಾತನಾಡಿದ್ದಾರೆ. ‘‘ಕೆಜಿಎಫ್ 2 ಯಶಸ್ಸಿನಿಂದ ಜನರು ಚಿತ್ರಮಂದಿರಕ್ಕೆ ಬರಲು ಆಕ್ಟಿವೇಟ್ ಆಗಿದ್ದಾರೆ. ಒಳ್ಳೆಯ ಕಂಟೆಂಟ್ಗೆ ಜನರು ಖಂಡಿತವಾಗಿಯೂ ಚಿತ್ರಮಂದಿರಕ್ಕೆ ಬರುತ್ತಾರೆ’’ ಎಂದಿದ್ದಾರೆ ಸುನಿ. ಕೆಜಿಎಫ್ ಸಕ್ಸಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿರ್ದೇಶಕ, ಅವತಾರ ಪುರುಷ 1ರ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ಹೋದಾಗ ಕನ್ನಡ ಅಂದರೆ ‘ಕೆಜಿಎಫ್’ ಎಂದು ಗುರುತಿಸುತ್ತಿದ್ದರು. ಈಗ ‘ಕೆಜಿಎಫ್ 2’ 1,000 ಕೋಟಿ ರೂ ಗಳಿಸಿರೋದು ಕನ್ನಡ ಚಿತ್ರರಂಗದ ಯಶಸ್ಸು. ಈ ಬಗ್ಗೆ ಖುಷಿ ಇದೆ ಎಂದಿದ್ದಾರೆ.
ನಿಮ್ಮಿಂದಲೂ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುನಿ, ‘‘ಕಂಟೆಂಟ್ ದೊಡ್ಡದಾಗಿದ್ದು, ಅಂತಹ ಸ್ಟಾರ್ಗಳು ಸಿಕ್ಕಿದರೆ ಖಂಡಿತವಾಗಿಯೂ ಮಾಡಬಹುದು’’ ಎಂದಿದ್ದಾರೆ.
ಅವತಾರಪುರುಷ ಸಿನಿಮಾವನ್ನು ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಮಾಡಲಾಗಿದ್ದು, ಶೂಟಿಂಗ್ ಸಮಯದಲ್ಲಿ ಕೇರಳದಲ್ಲಿ ನೆಗೆಟಿವ್ ಎನರ್ಜಿ ಎಕ್ಸ್ಪಿರಿಯನ್ಸ್ ಆಗಿತ್ತು ಎಂದಿದ್ದಾರೆ ಸುನಿ. 300 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ ಎಂದು ಮಾಹಿತಿ ನೀಡಿರುವ ಅವರು, ಪಾರ್ಟ್ 1ಕ್ಕಿಂತಲೂ ಪಾರ್ಟ್ 2 ಮತ್ತಷ್ಟು ಥ್ರಿಲ್ಲಿಂಗ್ ಆಗಿರಲಿದೆ ಎಂದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ