Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಬ್ಬಲಿ ಕುರಿಮರಿಯನ್ನು ಮಗುವಿನಂತೆ ಸಾಕಿದ ಕುಟುಂಬ ಅದರ ಮೊದಲ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿತು

ತಬ್ಬಲಿ ಕುರಿಮರಿಯನ್ನು ಮಗುವಿನಂತೆ ಸಾಕಿದ ಕುಟುಂಬ ಅದರ ಮೊದಲ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿತು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 04, 2022 | 11:47 PM

ಅದರೆ ಕೃಷ್ಣಮೂರ್ತಿ ಅವರ ಕುಟುಂಬ ಕುರಿಮರಿಯನ್ನು ತಮ್ಮ ಕುಟುಂಬದಲ್ಲಿ ಹುಟ್ಟಿದ ಮಗುವಂತೆ ಸಾಕಿದ್ದಾರೆ. ಅದಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ.

Chitradurga:  ಯಾರಿಗುಂಟು ಯಾರಿಗಿಲ್ಲ ಮಾರಾಯ್ರೇ ಈ ಭಾಗ್ಯ. ಶ್ವಾನಪ್ರಿಯರು ತಮ್ಮ ಪೆಟ್ ಗಳ ಬರ್ತ್ ಡೇ (Birthday) ಅಚರಿಸುವ ಮತ್ತು ಪೋಟೋಗಳನ್ನು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ (social media) ನಾವು ನೋಡಿತ್ತಿರುತ್ತೇವೆ. ಅದರೆ ಇಲ್ಲೊಬ್ಬರು ತಮ್ಮ ಕುರಿಮರಿಯ (lamb) ಹುಟ್ಟುಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಿದ್ದಾರೆ. ಸ್ಥಿರಚಿತ್ರಗಳನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ. ಅಂದಹಾಗೆ, ತಮ್ಮ ಮುದ್ದಿನ ಕುರಿಮರಿಯ ಹುಟ್ಟು ಹಬ್ಬ ಆಚರಿಸಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಟಿ ಬಿ ಗೊಲ್ಲರಹಟ್ಟಿಯಲ್ಲಿ ವಾಸವಾಗಿರುವ ಕುರಿ ವ್ಯಾಪಾರಿ ಕೃಷ್ಣಮೂರ್ತಿ ಅವರ ಕುಟುಂಬ. ಕೃಷ್ಣಮೂರ್ತಿ ಅವರು ಕಳೆದ 15 ವರ್ಷಗಳಿಂದ ಕುರಿ ವ್ಯಾಪಾರ ಮಾಡುತ್ತಿದ್ದಾರೆ. ಕಳೆದ ವರ್ಷ ಮೇ 4 ರಂದು ಅವರು ಮಾರಾಟ ಮಾಡಲೆಂದು ತಂದಿದ್ದ ಒಂದ ಕುರಿ ಮರಿ ಹಾಕುವಾಗ ಅಸು ನೀಗಿತ್ತು. ಹಾಗಾಗಿ, ಫೋಟೋನಲ್ಲಿ ಕಾಣುವ ಕುರಿಮರಿ ಹುಟ್ಟುವಾಗಲೇ ತಬ್ಬಲಿ.

ಅದರೆ ಕೃಷ್ಣಮೂರ್ತಿ ಅವರ ಕುಟುಂಬ ಕುರಿಮರಿಯನ್ನು ತಮ್ಮ ಕುಟುಂಬದಲ್ಲಿ ಹುಟ್ಟಿದ ಮಗುವಂತೆ ಸಾಕಿದ್ದಾರೆ. ಅದಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ಅವರ ಕುಟುಂಬದ ವಾತ್ಸಲ್ಯಭರಿತ ಲಾಲನೆ ಪೋಷಣೆಯಲ್ಲ್ಲಿ ಕುರಿಮರಿ ಒಂದು ವರ್ಷ ದಾಟಿ ಮೊದಲ ಹುಟ್ಟುಹಬ್ಬವನ್ನು ಅಚರಿಸಿಕೊಳ್ಳುತ್ತಿದೆ.

ಕುರಿಮರಿಯ ಹುಟ್ಟುಹಬ್ಬಕ್ಕೆ ಕೃಷ್ಣಮೂರ್ತಿ ಅವರು ತಮ್ಮ ನೆರೆಹೊರೆಯವರನ್ನೆಲ್ಲ ಕರೆದಿದ್ದಾರೆ. ಮೊದಲ ವರ್ಷದ ಹುಟ್ಟುಹಬ್ಬಕ್ಕೆ 5 ಕೇಜಿಯ ಕೇಕ್ ಮಾಡಿಸಿದ್ದಾರೆ. ಎಲ್ಲರಿಗೂ ಕೇಕ್ ಮತ್ತು ಸಿಹಿತಿಂಡಿಗಳನ್ನು ಹಂಚಿದ್ದಾರೆ. ತಮ್ಮ ಮಗುವಿನ ಹಾಗೆ ಸಾಕಿ ಬೆಳೆಸುತ್ತಿರುವ ಕುರುಮರಿಯನ್ನು ಕೃಷ್ಣಮೂರ್ತಿ ಪ್ರಾಯಶಃ ಯಾವತ್ತೂ ಮಾರಾಟ ಮಾಡಲಾರರು.

ಇದನ್ನೂ ಓದಿ:   ಎಲ್ಲರ ಎದುರು ಸಲ್ಮಾನ್​ ಖಾನ್​ಗೆ ಕಿಸ್​ ಮಾಡಿದ ಸಿದ್ದಾರ್ಥ್​ ಶುಕ್ಲಾ ಪ್ರೇಯಸಿ ಶೆಹನಾಜ್ ಗಿಲ್​; ವಿಡಿಯೋ ವೈರಲ್​