ಬಸವ ಜಯಂತಿ ಆಚರಣೆ ಸಂದರ್ಭದಲ್ಲಿ ಕುಡಿದು ಕುಣಿದು ಕುಪ್ಪಳಿಸಿದವ ಕಲ್ಲುಗಳಿಂದ ಪೊಲೀಸ ಜೀಪಿಗೆ ಅಪ್ಪಳಿಸಿದ!

ಬಸವ ಜಯಂತಿ ಆಚರಣೆ ಸಂದರ್ಭದಲ್ಲಿ ಕುಡಿದು ಕುಣಿದು ಕುಪ್ಪಳಿಸಿದವ ಕಲ್ಲುಗಳಿಂದ ಪೊಲೀಸ ಜೀಪಿಗೆ ಅಪ್ಪಳಿಸಿದ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:May 05, 2022 | 1:55 AM

ಡಿವೈ ಎಸ್ ಪಿ ಬಸವರಾಜ ಅವರು ಅಷ್ಟಕ್ಕೆ ಸುಮ್ಮನಾಗಿಲ್ಲ. ಬಸವ ಜಯಂತಿ ಅಚರಣೆಯಲ್ಲಿ ಡಿಜೆ ಕಾರ್ಯಕ್ರಮ ಆಯೋಜಿಸಿ ಪಾನಮತ್ತ ಯುವಕರಿಗೆ ಕುಣಿದು ಕುಪ್ಪಳಿಸಲು ಅವಕಾಶ ನೀಡಿದ ಆಯೋಜಕರಿಗೂ ಚಳಿ ಬಿಡಿಸಿದ್ದಾರೆ.

ಬೆಳಗಾವಿ: ಅಣ್ಣ ಬಸವಣ್ಣನ (Basvanna) ಜಯಂತಿಯನ್ನು ನಮ್ಮ ನಾಡಿನಲ್ಲಿ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಮಹಾಪುರುಷರ ಜಯಂತಿಗಳು ಮಹತ್ವಪೂರ್ಣವಾಗಿವೆ ಮತ್ತು ಅವುಗಳನ್ನು ಗಾಂಭೀರ್ಯತೆಯಿಂದ ಆಚರಿಸಲಾಗುತ್ತದೆ. ಆದರೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ (Hirekodi) ಗ್ರಾಮದಲ್ಲಿಯೂ ಮಂಗಳವಾರದಂದು ಬಸವ ಜಯಂತಿ ಆಚರಿಸಲಾಯಿತು. ಶೇಷ ಕರ್ನಾಟಕದಲ್ಲಿ (Karnataka) ಬಸವ ಜಯಂತಿಯನ್ನ (Basava Jayanti) ಭಕ್ತಿಭಾವದಿಂದ ಆಚರಿಸಿದರೆ ಹಿರೇಕೋಡಿಯಲ್ಲಿ ಅದಕ್ಕೆ ತದ್ವಿರುದ್ಧವಾದ ಭಾವದಲ್ಲಿ ಆಚರಿಸಲಾಯಿತು. ಅದರ ಒಂದು ನಿದರ್ಶನ ನಿಮಗೆ ವಿಡಿಯೋನಲ್ಲಿ ಕಾಣುತ್ತದೆ. ಕಂಠಮಟ್ಟ ಕುಡಿದು ಆಚರಣೆಯಲ್ಲಿ ಭಾಗವಹಿಸಿದ್ದ ಯುವಕನೊಬ್ಬ ರಸ್ತೆ ಮೇಲೆ ನಿಂತಿದ್ದ ಪೊಲೀಸ್ ಜೀಪಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ.

ಕುಡಿತದ ಅಮಲಿನಲ್ಲಿ ತಾನು ದಾಂಧಲೆ ನಡೆಸುತ್ತಿರೋದು ಪೊಲೀಸ ಜೀಪಿನ ಮೇಲೆ ಅನ್ನೋದು ಸಹ ಮುಟ್ಠಾಳನಿಗೆ ಗೊತ್ತಾಗಿಲ್ಲ ಮಾರಾಯ್ರೇ. ಅದರೆ ಅದು ಗೊತ್ತಾದಾಗ ಬಹಳ ತಡುವಾಗಿಬಿಟ್ಟಿತ್ತು. ಡಿವೈ ಎಸ್ ಪಿ ನೇತೃತ್ವದ ಪೊಲೀಸ್ ತಂಡ ಅವನ ವಿರುದ್ಧ ಕೇಸ್ ದಾಖಲಿಸಿಕೊಂಡಿದೆ.

ಡಿವೈ ಎಸ್ ಪಿ ಬಸವರಾಜ ಅವರು ಅಷ್ಟಕ್ಕೆ ಸುಮ್ಮನಾಗಿಲ್ಲ. ಬಸವ ಜಯಂತಿ ಅಚರಣೆಯಲ್ಲಿ ಡಿಜೆ ಕಾರ್ಯಕ್ರಮ ಆಯೋಜಿಸಿ ಪಾನಮತ್ತ ಯುವಕರಿಗೆ ಕುಣಿದು ಕುಪ್ಪಳಿಸಲು ಅವಕಾಶ ನೀಡಿದ ಆಯೋಜಕರಿಗೂ ಚಳಿ ಬಿಡಿಸಿದ್ದಾರೆ. ಈ ವಿಡಿಯೋನಲ್ಲಿ ನಿಮಗೆ ಅದು ಕಾಣುತ್ತದೆ ಮಾರಾಯ್ರೇ. ಜನ ಕುಡಿದು ಬಂದು ಕುಣಿಯಲಾರಂಭಿಸಿದರೆ ನಾವೇನು ಮಾಡಲಾಗುತ್ತೆ ಅಂತ ಅಯೋಜಕರು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಅದಕ್ಕೆ ಪೊಲೀಸ್ ಅಧಿಕಾರಿ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸುವಾಗ ಹೊಣೆಗಾರಿಕೆ ಪ್ರದರ್ಶಿಸಬೇಕಾಗುತ್ತದೆ. ನಮ್ಮದೇನು ತಪ್ಪು ಅಂತ ಹೇಳಿದರೆ ಅಲ್ಲಿಗೆ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಒಂದು ಪವಿತ್ರ ಕಾರ್ಯಕ್ರಮ ನಡೆಸುವಾಗ ಕಾರ್ಯಕ್ರಮ ನಡೆಯುವ ಅವರಣವನ್ನು ಅಪವಿತ್ರಗೊಳ್ಳದಂತೆ ನೋಡಿಕೊಳ್ಳುವುದು ಅಯೋಜಕರ ಕರ್ತವ್ಯವಾಗಿರುತ್ತದೆ ಅಂತ ಅವರು ಹೇಳಿದ್ದಾರೆ.

ಇದನ್ನೂ ಓದಿ:   ಸರ್ಕಾರದ ವತಿಯಿಂದ ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ; ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವೇನು?

Published on: May 05, 2022 01:46 AM