US Fed: ಅಮೆರಿಕದಲ್ಲಿ ಹಣದುಬ್ಬರದ ಬಿಸಿ, ಕೇಂದ್ರೀಯ ಬ್ಯಾಂಕ್​ನಿಂದ ಬಡ್ಡಿದರ ಹೆಚ್ಚಳ

ಹಣದುಬ್ಬರದ ಸುಳಿಗೆ ಸಿಲುಕಿರುವ ಅಮೆರಿಕದಲ್ಲಿ ಕಳೆದ 20 ವರ್ಷಗಳಲ್ಲಿ ಅಲ್ಲಿನ ಕೇಂದ್ರೀಯ ಬ್ಯಾಂಕ್ ಕೈಗೊಂಡ ಅತ್ಯಂತ ಕಠಿಣ ನಿರ್ಧಾರ ಇದು.

US Fed: ಅಮೆರಿಕದಲ್ಲಿ ಹಣದುಬ್ಬರದ ಬಿಸಿ, ಕೇಂದ್ರೀಯ ಬ್ಯಾಂಕ್​ನಿಂದ ಬಡ್ಡಿದರ ಹೆಚ್ಚಳ
ಅಮೆರಿಕದ ಫೆಡರಲ್ ರಿಸರ್ವ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 05, 2022 | 9:19 AM

ವಾಷಿಂಗ್​ಟನ್: ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್​ ಬುಧವಾರ ಅಲ್ಪಾವಧಿ ಬಡ್ಡಿದರವನ್ನು ಶೇ 0.5ರಷ್ಟು (50 ಬೇಸಿಸ್ ಪಾಯಿಂಟ್ಸ್) ಹೆಚ್ಚಿಸಿದೆ. ಹಣದುಬ್ಬರದ ಸುಳಿಗೆ ಸಿಲುಕಿರುವ ಅಮೆರಿಕದಲ್ಲಿ ಕಳೆದ 20 ವರ್ಷಗಳಲ್ಲಿ ಅಲ್ಲಿನ ಕೇಂದ್ರೀಯ ಬ್ಯಾಂಕ್ ಕೈಗೊಂಡ ಅತ್ಯಂತ ಕಠಿಣ ನಿರ್ಧಾರ ಇದು. ಅಮೆರಿಕದಲ್ಲಿ ಹಣದುಬ್ಬರ ಪ್ರಮಾಣವು ಕಳೆದ 50 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದು, ಆರ್ಥಿಕತೆ ಕಳಾಹೀನವಾಗಿದೆ. ಈ ಹಿನ್ನೆಲೆಯಲ್ಲಿ ಏರುತ್ತಿರುವ ಬೆಲೆಗಳಿಗೆ ಕಡಿವಾಣ ಹಾಕಲು ಅಮೆರಿಕ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಮೂಲ ಬಡ್ಡಿದರವನ್ನು ಶೇ 0.75ರಿಂದ 1ರಷ್ಟು ಹೆಚ್ಚಿಸಲಾಗಿದೆ. ಅಮೆರಿಕದಲ್ಲಿ ಕೊರೊನಾ ಕಾಣಿಸಿಕೊಂಡ ಕಳೆದ 2 ವರ್ಷಗಳಲ್ಲಿಯೇ ಇದು ಗರಿಷ್ಠ ಪ್ರಮಾಣದ್ದಾಗಿದೆ. ಮುಂದಿನ ದಿನಗಳಲ್ಲಿ ಫೆಡರಲ್ ರಿಸರ್ವ್ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ವಿಶ್ಲೇಷಣೆಗಳಿಗೆ ಇದು ಕಾರಣವಾಗಿದೆ. ಅಮೆರಿಕದ ಡಾಲರ್​ಗೆ ಇಡೀ ಜಗತ್ತಿನ ಕರೆನ್ಸಿ ಎನ್ನುವ ಮಾನ್ಯತೆ ಇರುವ ಕಾರಣ ಅಮೆರಿಕದ ಫೆಡರಲ್ ರಿಸರ್ವ್​ನ ಈ ಘೋಷಣೆ ವಿಶ್ವದ ಹಲವು ದೇಶಗಳ ಮೇಲೆ ಪರಿಣಾಮ ಬೀರಲಿದೆ.

ಬಡ್ಡಿದರದಲ್ಲಿ ಬದಲಾವಣೆ ಜೊತೆಗೆ 9 ಶತಕೋಟಿ ಡಾಲರ್ ಮೊತ್ತದ ಬ್ಯಾಲೆನ್ಸ್​ ಶೀಟ್​ನಲ್ಲಿ ಅಗತ್ಯ ಬದಲಾವಣೆ ಮಾಡುವ ಬಗ್ಗೆಯೂ ಫೆಡರಲ್ ರಿಸರ್ವ್ ಮಾತಾಡಿದೆ. ಮುಂದಿನ ದಿನಗಳಲ್ಲಿ ಅಮೆರಿಕದಿಂದ ಖಜಾನೆ ಮತ್ತು ಅಡಮಾನ ಬಾಂಡ್​ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಬರಬಹುದು ಎನ್ನುವ ಮುನ್ಸೂಚನೆಯನ್ನು ಇದು ನೀಡಿದೆ. ಕೊರೊನಾ ಸಂಕಷ್ಟದ ಹಣದ ಲಭ್ಯತೆ ಕಾಪಾಡುವ ಉದ್ದೇಸದಿಂದ ಬಾಂಡ್​ಗಳ ಸಂಗ್ರಹವನ್ನು ಫೆಡರಲ್ ರಿಸರ್ವ್ ಹೆಚ್ಚಿಸಿತ್ತು. ದೀರ್ಘಾವಧಿ ಸಾಲದ ದರವೂ ಮಿತಿಯಲ್ಲಿರಬೇಕು ಎನ್ನುವ ಕಾರಣ ಸಾಕಷ್ಟು ಕ್ರಮಗಳನ್ನು ಫೆಡರಲ್ ರಿಸರ್ವ್ ತೆಗೆದುಕೊಂಡಿತ್ತು.

ಹಣದ ಹರಿವಿನ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಫೆಡರಲ್ ರಿಸರ್ವ್​ ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ವೈಯಕ್ತಿಕ, ಗೃಹ, ಅಡಮಾನ, ಕ್ರೆಡಿಟ್ ಕಾರ್ಡ್, ವಾಹನ ಮತ್ತು ಉದ್ದಿಮೆ ಸಾಲಗಳ ಮೇಲಿನ ಬಡ್ಡಿದರಗಳು ಹೆಚ್ಚಾಗುವ ಸಾಧ್ಯತೆಯಿದೆ. ಆಹಾರ ಮತ್ತು ದಿನಬಳಕೆ ವಸ್ತುಗಳ ದರಗಳು ಹೆಚ್ಚಾಗುತ್ತಿರುವುದರಿಂದ ಹಣದುಬ್ಬರ ಪ್ರಮಾಣವನ್ನು ಕ್ಷಿಪ್ರವಾಗಿ ಕಡಿಮೆಗೊಳಿಸಲು ಫೆಡರಲ್ ರಿಸರ್ವ್ ಮುಂದಾಗಿದೆ. ಬಡ್ಡಿದರ ಹೆಚ್ಚು ಮಾಡಿದರೆ ಜನರು ಖರ್ಚು ಮಾಡುವುದು ಕಡಿಮೆಯಾಗಿ, ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ ಎನ್ನುವುದು ಫೆಡರಲ್ ರಿಸರ್ವ್​ನ ನಿರೀಕ್ಷೆಯಾಗಿದೆ.

ಹಣಕಾಸು ನಿಯಂತ್ರಣ ವಿಚಾರದಲ್ಲಿ ಫೆಡರಲ್ ರಿಸರ್ವ್ ಸಕಾಲಿಕ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದೀಗ ತೆಗೆದುಕೊಂಡಿರುವ ಕ್ರಮದಿಂದ ಆರ್ಥಿಕ ಹಿಂಜರಿತಕ್ಕೆ ತಡೆಯೊಡ್ಡಬಹುದು ಎನ್ನುವ ಬಗ್ಗೆಯೂ ಅರ್ಥಶಾಸ್ತ್ರಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಪ್ರಸ್ತುತ ಹಣದುಬ್ಬರ ಪ್ರಮಾಣ ಶೇ 6.6 ಇದೆ. ರಷ್ಯಾ-ಉಕ್ರೇನ್ ಯುದ್ಧದ ನಂತರ ಇಂಧನ ಬೆಲೆಯಲ್ಲಿ ಗಮನಾರ್ಹ ಪ್ರಮಾಣದ ಏರಿಕೆಯಾಗುವ ಜೊತೆಗೆ ಆಮದು-ರಫ್ತು ವಹಿವಾಟಿಗೆ ಹೊಡೆತ ಬಿದ್ದಿತ್ತು.

ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಹಣದುಬ್ಬರ ದೊಡ್ಡ ಸಮಸ್ಯೆಯಾಗಿದೆ. ಸಂಭವನೀಯ ಆರ್ಥಿಕ ಬಿಕ್ಕಟ್ಟು ತಪ್ಪಿಸಲು ಭಾರತೀಯ ರಿಸರ್ವ್​ ಬ್ಯಾಂಕ್ ಸೇರಿದಂತೆ ವಿಶ್ವದ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್​ಗಳು ಬಡ್ಡಿದರ ಹೆಚ್ಚಿಸಲು ಮುಂದಾಗಿವೆ. ವಿಶ್ವದ ಬಲಾಢ್ಯ ಆರ್ಥಿಕತೆ ಎನಿಸಿರುವ ಇಂಗ್ಲೆಂಡ್​ ಸಹ ಇಂಥದ್ದೇ ಕ್ರಮಕ್ಕೆ ಮುಂದಾಗುವ ನಿರೀಕ್ಷೆಯಿದೆ. ಇಂದು (ಮೇ 5) ಇಂಗ್ಲೆಂಡ್ ಕೇಂದ್ರೀಯ ಬ್ಯಾಂಕ್ ತನ್ನ ನಿರ್ಧಾರ ಪ್ರಕಟಿಸಲಿದೆ. ಆಸ್ಟ್ರೇಲಿಯಾ ಸಹ ಕಳೆದ ಮಂಗಳವಾರ ಕಳೆದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಡ್ಡಿದರ ಹೆಚ್ಚಿಸಿತ್ತು. ಐರೋಪ್ಯ ಒಕ್ಕೂಟಗಳು ರೂಪಿಸಿಕೊಂಡಿರುವ ಕೇಂದ್ರೀಯ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರ ಹೆಚ್ಚಳ ಹೊರತುಪಡಿಸಿದ ಬೇರೆ ಮಾರ್ಗಗಳನ್ನು ಅವಲೋಕಿಸುತ್ತಿದ್ದು, ಜುಲೈ ತಿಂಗಳಲ್ಲಿ ಬಡ್ಡಿ ದರ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Repo Rate: ಆರ್​ಬಿಐ ರೆಪೋ ದರ ಶೇ 4 ಹಾಗೂ ರಿವರ್ಸ್ ರೆಪೋ ದರ ಶೇ 3.35ರಲ್ಲಿ ಮುಂದುವರಿಕೆ

ಇದನ್ನೂ ಓದಿ: RBI Repo Rate: ಆರ್‌ಬಿಐನಿಂದ ರೆಪೋ ದರ ಹೆಚ್ಚಳ: 900 ಅಂಕಗಳಿಗಿಂತ ಹೆಚ್ಚು ಕುಸಿದ ಸೆನ್ಸೆಕ್ಸ್

Published On - 9:19 am, Thu, 5 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ