AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Repo Rate: ಆರ್​ಬಿಐ ರೆಪೋ ದರ ಶೇ 4 ಹಾಗೂ ರಿವರ್ಸ್ ರೆಪೋ ದರ ಶೇ 3.35ರಲ್ಲಿ ಮುಂದುವರಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ರೆಪೋ ದರ ಶೇ 4ರಲ್ಲಿ ಹಾಗೂ ರಿವರ್ಸ್ ರೆಪೋ ದರ ಶೇ 3.35ರಲ್ಲೇ ಮುಂದುವರಿಸಲಾಗಿದೆ. ಆರ್​ಬಿಐನ ದ್ವೈಮಾಸಿಕ ಹಣಕಾಸು ನೀತಿಯ ಪ್ರಮುಖಾಂಶಗಳೇನು ಎಂಬ ಬಗ್ಗೆ ವಿವರ ಇಲ್ಲಿದೆ.

Repo Rate: ಆರ್​ಬಿಐ ರೆಪೋ ದರ ಶೇ 4 ಹಾಗೂ ರಿವರ್ಸ್ ರೆಪೋ ದರ ಶೇ 3.35ರಲ್ಲಿ ಮುಂದುವರಿಕೆ
ಆರ್​ಬಿಐ ಗವರ್ನರ್ ಶಕ್ತಿಕಾಂತ್​ ದಾಸ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on:Aug 06, 2021 | 10:47 AM

Share

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank Of India) ಗವರ್ನರ್ ಆದ ಶಕ್ತಿಕಾಂತ ದಾಸ್ (Shaktikanta Das) ಶುಕ್ರವಾರ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೋದರವನ್ನು ಶೇ 4ರಲ್ಲಿ ಹಾಗೂ ರಿವರ್ಸ್​ ರೆಪೋ ದರವನ್ನು ಶೇ 3.35ರಲ್ಲಿ ಮತ್ತು ಬ್ಯಾಂಕ್​ ದರವನ್ನು ಶೇ 4.25ರಲ್ಲಿ ಮುಂದುವರಿಸಲು ನಿರ್ಧಾರ ಮಾಡಿದ್ದಾರೆ. ಆರ್​ಬಿಐನಿಂದ ವಾಣಿಜ್ಯ ಬ್ಯಾಂಕ್​ಗಳಿಗೆ ನೀಡುವ ಸಾಲದ ಮೇಲೆ ಪಡೆಯುವಂಥ ಬಡ್ಡಿ ದರವನ್ನು ರೆಪೋದರ ಎನ್ನಲಾಗುತ್ತದೆ. ಇನ್ನು ವಾಣಿಜ್ಯ ಬ್ಯಾಂಕ್​ಗಳು ಆರ್​ಬಿಐ ಬಳಿ ಇಡುವ ಹಣಕ್ಕೆ ನೀಡುವ ಬಡ್ಡಿಗೆ ರಿವರ್ಸ್​ ರೆಪೋ ದರ ಎನ್ನಲಾಗುತ್ತದೆ. ಈಗ ಇವೆರಡರಲ್ಲೂ ಯಾವುದೇ ಬದಲಾವಣಣೆ ಮಾಡದೆ ಹಾಗೇ ಉಳಿಸಿಕೊಂಡಿರುವುದರಿಂದ ಭವಿಷ್ಯದಲ್ಲಿ ಆರ್ಥಿಕ ಸ್ಥಿತಿ ನೋಡಿಕೊಂಡು ಏರಿಕೆಯನ್ನೋ ಇಳಿಕೆಯನ್ನೋ ಮಾಡುವುದಕ್ಕೆ ಅವಕಾಶ ಇರುತ್ತದೆ. ಅದನ್ನು “Accomdative Stance” ಎನ್ನಲಾಗುತ್ತದೆ. ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬ ನಿರೀಕ್ಷೆಯೇ ವ್ಯಾಪಕವಾಗಿತ್ತು. ಈಗ ಅದಕ್ಕೆ ಪೂರಕವಾಗಿಯೇ ಪ್ರಕಟಣೆ ಬಂದಿದೆ.

ಕೊವಿಡ್-19 ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಗೆ ಬೆಂಬಲ ನೀಡುವ ಸಲುವ Accomdative Stance ಮುಂದುವರಿಸುವುದಾಗಿ ಹಣಕಾಸು ನೀತಿ ಸಮಿತಿ (Monetary Policy Committee)ಯಿಂದ ತಿಳಿಸಲಾಗಿದೆ. ಇನ್ನು ಆರ್​ಬಿಐನಿಂದ ಸರ್ಕಾರಿ ಸೆಕ್ಯೂರಿಟಿಗಳ ಮಾರಾಟ GSAP ಆಗಸ್ಟ್​ 12 ಮತ್ತು 28ರಂದು ಆಯೋಜಿಸಲಾಗುವುದು. ಇದು ಯಶಸ್ವಿ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ. 2021-22ರ ಹಣಕಾಸು ವರ್ಷಕ್ಕೆ ಗ್ರಾಹಕ ದರ ಹಣದುಬ್ಬರವನ್ನು ಶೇ 5.7ಕ್ಕೆ ಅಂದಾಜು ಮಾಡಲಾಗಿದೆ. ಇನ್ನು ಜಿಡಿಪಿಯನ್ನು ಶೇ 9.5ಕ್ಕೆ ಅಂದಾಜಿಸಲಾಗಿದೆ.

ರಿಸರ್ವ್ ಬ್ಯಾಂಕ್ ಗವರ್ನರ್​ ತಿಳಿಸಿದಂತೆ, ನಿರೀಕ್ಷೆಯಂತೆಯೇ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆ ಕಾಣಿಸಿಕೊಂಡಿದೆ. ಮೇ ತಿಂಗಳಲ್ಲಿ ಅಚ್ಚರಿ ರೀತಿಯಲ್ಲಿ ಗ್ರಾಹಕ ದರ ಸೂಚ್ಯಂಕವು ಮೇಲ್ಮಟ್ಟದಲ್ಲಿತ್ತು. ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಕಂಡಿದ್ದರಿಂದ ಜುಲೈನಲ್ಲಿ ಖಾದ್ಯ ತೈಲ, ಬೇಳೆಕಾಳುಗಳಲ್ಲಿ ಬದಲಾವಣೆಗೆ ಕಾರಣ ಆಗಿದೆ. ಸರಾಸರಿ ಬೇಡಿಕೆ ಬಾಹ್ಯವಾಗಿ ನೋಡಿದಾಗ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಹಲವು ವಲಯಗಳಲ್ಲಿ ಪೂರೈಕೆ ಮತ್ತ ಬೇಡಿಕೆ ಮತ್ತೆ ಯಥಾ ಸ್ಥಿತಿಗೆ ಬರಲು ಇನ್ನೂ ಹೆಚ್ಚಿನದನ್ನು ಮಾಡಬೇಕು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇದನ್ನೂ ಓದಿ: Unclaimed Deposits: ಬ್ಯಾಂಕ್​ಗಳು, ಇನ್ಷೂರೆನ್ಸ್​ ಕಂಪೆನಿಗಳಲ್ಲಿ ಇರುವ ಜನರ ಅನ್​ಕ್ಲೇಮ್ಡ್​ ಮೊತ್ತ 49 ಸಾವಿರ ಕೋಟಿ ರೂಪಾಯಿ

(RBI Keep Repo Rate At 4 Percent And Reverse Repo Rate At 3.35 Percent Unchanged)

Published On - 10:23 am, Fri, 6 August 21

ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್