AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kisan Credit Card: ಎಸ್​ಬಿಐನ ರೈತ ಗ್ರಾಹಕರು ಕೆಸಿಸಿ ಪರಿಶೀಲನೆ YONO ಮೂಲಕ ಆನ್​ಲೈನ್​ನಲ್ಲಿ ಮಾಡೋದು ಹೇಗೆ?

ಎಸ್​ಬಿಐನ ರೈತ ಗ್ರಾಹಕರು ಕಿಸಾನ್​ ಕ್ರೆಡಿಟ್ ಕಾರ್ಡ್ ಪರಿಶೀಲನೆಗೆ YONOದಲ್ಲಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ.

Kisan Credit Card: ಎಸ್​ಬಿಐನ ರೈತ ಗ್ರಾಹಕರು ಕೆಸಿಸಿ ಪರಿಶೀಲನೆ YONO ಮೂಲಕ ಆನ್​ಲೈನ್​ನಲ್ಲಿ ಮಾಡೋದು ಹೇಗೆ?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 06, 2021 | 1:20 PM

Share

ದೇಶದ ಅತಿ ದೊಡ್ದ ಬ್ಯಾಂಕ್​ ಆದ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ (State Bank Of India)ದಿಂದ ಶುಕ್ರವಾರ ಘೋಷಣೆ ಮಾಡಿದಂತೆ, ರೈತ ಗ್ರಾಹಕರಿಗೆ ಎಸ್​ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಇದ್ದು, ಅಂಥವರು ತಮ್ಮ ಹತ್ತಿರದ ಬ್ಯಾಂಕ್​ ಶಾಖೆಗೆ ಭೇಟಿ ನೀಡದೆಯೂ ಪರಿಶೀಲನೆ ಮಾಡಬಹುದು. ಬ್ಯಾಂಕ್​ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿರುವಂತೆ, “ನೀವು ಇರುವ ಸ್ಥಳದ ಆರಾಮಕ್ಕೆ ತಕ್ಕಂತೆ ಕೆಸಿಸಿ ಪರಿಶೀಲನೆ. ಎಸ್​ಬಿಐನ ರೈತ ಗ್ರಾಹಕರು ಶಾಖೆಗೆ ಭೇಟಿ ನೀಡದೆಯೂ ಈಗ ಕೆಸಿಸಿ ಪರಿಶೀಲನೆಗೆ ಅಪ್ಲೈ ಮಾಡಬಹುದು.” ಇನ್ನೂ ಮುಂದುವರಿದು ಬ್ಯಾಂಕ್ ಹೇಳಿದ್ದು, “ಎಸ್​ಬಿಐ ಬಳಿ ಇರುವ ನಿಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್​ ಖಾತೆಯನ್ನು ಯಾವುದೇ ಶಾಖೆಗೆ ಭೇಟಿ ನೀಡುವ ಅಗತ್ಯ ಇಲ್ಲದೆ ಆನ್​ಲೈನ್ YONO ಮೂಲಕ ಪರಿಶೀಲಿಸಬಹುದು,” ಎನ್ನಲಾಗಿದೆ.

YONO ಪರಿಶೀಲನೆಯ ಅನುಕೂಲಗಳೇನು? ಎಸ್​ಬಿಐ ವೆಬ್​ಸೈಟ್ ಪ್ರಕಾರವಾಗಿ ಕ್ರಮವಗಳ ಪ್ರಮುಖ ಲಕ್ಷಣಗಳಿವು: – YONO ಆ್ಯಪ್ ಅಥವಾ YONO ಬ್ರ್ಯಾಂಚ್ ಮೂಲಕ ಯಾವುದೇ ತಡೆ ಇಲ್ಲದ ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಶೀಲನೆ. – ಕಾಂಟ್ಯಾಕ್ಟ್​ಲೆಸ್ ಅಥವಾ ಕಾಗದರಹಿತ ಪಯಣಕ್ಕೆ YONO ಆ್ಯಪ್ ಮೂಲಕ ಅರ್ಜಿ – YONO ಬ್ರ್ಯಾಂಚ್ ಪೋರ್ಟಲ್​ನಲ್ಲಿ E2E ಪ್ರಕ್ರಿಯೆ – ಕೆಸಿಸಿ ಪರಿಶೀಲನೆ ಪ್ರಕ್ರಿಯೆ ಸ್ಟ್ಯಾಂಡರ್ಡೈಸೇಷನ್ – ರೈತರು ಮತ್ತು ಶಾಖೆಯಿಂದ ಕನಿಷ್ಠ ಪ್ರಮಾಣದ ಡೇಟಾ ಎಂಟ್ರಿ

ಅರ್ಜಿ ಸಲ್ಲಿಕೆ ಹಂತಗಳು – ಮೊಬೈಲ್​ ಫೋನ್​ನಲ್ಲಿ YONO ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಬೇಕು ಮತ್ತು ಅಗತ್ಯ ಕ್ರೆಡೆನ್ಷಿಯಲ್ ಜತೆಗೆ ಖಾತೆಗೆ ಸೈನ್ ಇನ್ ಆಗಬೇಕು. – YONO Krishi ವಿಭಾಗಕ್ಕೆ ತೆರಳಿ, Khata ಮೇಲೆ ಒತ್ತಬೇಕು. – KCC Review ಮೇಲೆ ಒತ್ತಬೇಕು ಹಾಗೂ ನಂತರ Apply ಎಂಬುದರ ಮೇಲೆ ಒತ್ತಬೇಕು.

ಏನಿದು ಎಸ್​ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ರೈತರ ಅನುಕೂಲಕ್ಕಾಗಿ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಕಿಸಾನ್ ಕ್ರೆಡಿಟ್ ಅಕೌಂಟ್​ ನೀಡಲಾಗುತ್ತದೆ. 5 ವರ್ಷದ ಅವಧಿಗೆ ಮತ್ತು ವಾರ್ಷಿಕವಾಗಿ ಶೇ 10ರ ದರದಲ್ಲಿ ಕ್ರೆಡಿಟ್​ ಮೊತ್ತ ಏರಿಕೆ ಆಗುತ್ತಾ ಸಾಗುತ್ತದೆ. ಅದೂ ವಾರ್ಷಿಕ ಪರಿಶೀಲನೆ ಆಧಾರದಲ್ಲಿ ಆಗುತ್ತದೆ. ಬ್ಯಾಂಕ್​ನ ಮಾಹಿತಿಯಂತೆ, ಸಮಯಕ್ಕೆ ಸರಿಯಾಗಿ ಹಣ ಹಿಂತಿರುಗಿಸುವವರಿಗೆ 3 ಲಕ್ಷ ರೂಪಾಯಿ ತನಕದ ಮೊತ್ತಕ್ಕೆ ಶೇ 3ರಷ್ಟು ಬಡ್ಡಿ ಸಬ್ಸಿಡಿ ಒಳಗೊಂಡಿರುತ್ತದೆ. ಖಾತೆ ಮರುಪಾವತಿ ಅವಧಿ ಬೆಳೆಯ ಅವಧಿ ಮೇಲೆ (ಅಲ್ಪ ಮತ್ತು ದೀರ್ಘ) ಹಾಗೂ ಬೆಳೆ ಮಾರ್ಕೆಟಿಂಗ್ ಮೇಲೆ ಬದಲಾಗುತ್ತದೆ. 70 ವರ್ಷದೊಳಗಿನ ಕಿಸಾನ್ ಕ್ರೆಡಿಟ್ ಕಾರ್ಡ್​ ಸಾಲಗಾರರಿಗೆ ವಯಕ್ತಿಕ ಅಪಘಾತ ವಿಮೆ (PAS) ದೊರೆಯುತ್ತದೆ. ಅರ್ಹ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನಾ (PMFBY) ಕವರ್ ಆಗುತ್ತದೆ. ಎಸ್​ಬಿಐ ಕಿಸಾನ್ ಕ್ರೆಡಿಟ್ ಕಾರ್ಡ್​ ಖಾತೆಯು 3 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ ಶೇ 7ರ ಬಡ್ಡಿ ದೊರೆಯುತ್ತದೆ. ಕೆಸಿಸಿಯ ಎಲ್ಲ ಖಾತೆದಾರರಿಗೆ ರುಪೇ ಕಾರ್ಡ್ ಸಿಗುತ್ತದೆ. ಆ ಕಾರ್ಡ್​ ಅನ್ನು 45 ದಿನಗಳಿಗೆ ಒಮ್ಮೆ ಬಳಸಿದರೆ 1 ಲಕ್ಷ ರೂಪಾಯಿ ಅಪಘಾತ ವಿಮೆ ದೊರೆಯುತ್ತದೆ.

ಇದನ್ನೂ ಓದಿ: SBI Customer Alert: ಎಸ್​ಬಿಐ ಡಿಜಿಟಲ್ ಸೇವೆಗಳಲ್ಲಿ ಆಗಸ್ಟ್ 6-7ರಂದು ಈ ಅವಧಿಯಲ್ಲಿ ವ್ಯತ್ಯಯ

(How SBI Farmer Customers Can Apply For Review Kisan Credit Card Online On YONO Here Is The Details)

Follow Us
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್