AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ಮಾಡಿ ತೀರಿಸಲು ಕಷ್ಟ ಪಡ್ತಾ ಇದ್ರೆ ಇಲ್ಲಿವೆ ಸಿಂಪಲ್ ಟ್ರಿಕ್ಸ್‌

ಸಾಲ ಮಾಡಿ ತುಪ್ಪ ತಿನ್ನೋ ಅನ್ನೋ ಮಾತಿದೆ. ಆದರೆ ಸಾಲ ಮಾಡಿದ ಮೇಲೆ ಅದನ್ನು ತೀರಿಸೋದು ದೊಡ್ಡ ತಲೆ ನೋವು. ಹೀಗಾಗಿ ಮಾಡಿದ ಸಾಲವನ್ನು ಅದಷ್ಟು ಬೇಗ ಕ್ಲಿಯರ್ ಮಾಡೋದು ಉತ್ತಮ. ನೀವು ನಿಮ್ಮ ತಿಂಗಳ ಸಂಬಳ, ಇಎಂಐ ಮೊತ್ತ, ಬಡ್ಡಿದರ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಸಾಲ ಮರುಪಾವತಿ ಮಾಡಿದ್ರೆ ಆರ್ಥಿಕ ಹೊರೆಯಿಂದ ಮುಕ್ತರಾಗುವುದು ಖಂಡಿತ.

ಸಾಲ ಮಾಡಿ ತೀರಿಸಲು ಕಷ್ಟ ಪಡ್ತಾ ಇದ್ರೆ ಇಲ್ಲಿವೆ ಸಿಂಪಲ್ ಟ್ರಿಕ್ಸ್‌
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jul 29, 2026 | 5:07 PM

Share

ಮುಖ್ಯಾಂಶಗಳು

  • ಆರ್ಥಿಕ ಪರಿಸ್ಥಿತಿ ಎದುರಾದಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ
  • ಸಾಲದ ಪಡೆಯುವಾಗ ಮುನ್ನ ಸಾಲದ ಮೇಲಿನ ಬಡ್ಡಿದರದ ಬಗ್ಗೆ ತಿಳಿದಿರಲಿ
  • ಸಾಲದಿಂದ ಮುಕ್ತರಾಗಲು ಈ ಕೆಲವು ಟ್ರಿಕ್ಸ್ ಬಳಸುವುದು ಉತ್ತಮ.

ಹಣಕಾಸು ಸಮಸ್ಯೆ (financial problem), ಆರ್ಥಿಕ ಸ್ಥಿತಿ ಹದಗೆಟ್ಟಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ. ಸಾಲ ಪಡೆಯುವಾಗ ಇರುವ ಖುಷಿ ಮರುಪಾವತಿಸುವಾಗ ಇರಲ್ಲ.  ಹೌದು, ಪಡೆದ ಸಾಲಕ್ಕಿಂತ, ಅದರ ಮೇಲಿನ ಬಡ್ಡಿಯೇ ಹೆಚ್ಚಾಗಿರುತ್ತದೆ. ಸಾಲ ಪಡೆದು ತೀರಿಸಲಾಗದೇ ಒದ್ದಾಡ್ತಾ ಇರಬಹುದು. ನೀವು ಈ ಸಾಲದಿಂದ (loan) ಮುಕ್ತರಾಗಲು ಈ ಕೆಲವು ಟ್ರಿಕ್ಸ್ ಬಳಸುವುದು ಉತ್ತಮ. ಕಡಿಮೆ ಬಡ್ಡಿದರದಲ್ಲಿ ಇರುವ ಸಾಲ ಪಡೆಯುವುದು, ಇಎಂಐ ಮೊತ್ತದಲ್ಲಿ ಹೆಚ್ಚಳ ಈ ಕೆಲವು ಅಂಶಗಳ ಮೇಲೆ ಗಮನ ಹರಿಸುವುದು ಸಾಲದಿಂದ ಬಹುಬೇಗನೇ ಮುಕ್ತರಾಗಲು ದಾರಿ ಮಾಡಿಕೊಡುತ್ತದೆ.

ಸಾಲದಿಂದ ಮುಕ್ತರಾಗುವುದು ಹೇಗೆ?

  • ಸಾಲವನ್ನು ಬೇಗ ತೀರಿಸಲು ಬಜೆಟ್ ರೂಪಿಸುವುದು ಬಹಳ ಮುಖ್ಯ.
  • ನಿಮ್ಮ ಸಂಪೂರ್ಣ ಖರ್ಚುಗಳನ್ನು ಬರೆದಿಟ್ಟು,  ಅನಗತ್ಯ ಖರ್ಚಿಗೆ ಲಗಾಮು ಹಾಕಿ ಸಾಲ ತೀರಿಸುವತ್ತ ಗಮನ ಕೊಡಿ.
  •  ತಿಂಗಳ ಆದಾಯದಲ್ಲಿ ಕನಿಷ್ಠ ಭಾಗವನ್ನು ಉಳಿಸಿ, ಅದನ್ನು ಸಾಲ ಮರುಪಾವತಿಗೆ ಬಳಸಿಕೊಳ್ಳಿ.
  •  ನೀವು ಪಡೆದ ಸಾಲದ ಬಡ್ಡಿದರ ತಿಳಿದುಕೊಳ್ಳಿ. ಮೊದಲು ಯಾವ ಸಾಲಕ್ಕೆ ಹೆಚ್ಚು ಬಡ್ಡಿ ಇದೆಯೋ ಅದನ್ನು ಮೊದಲು ತೀರಿಸಿ.
  • ಸಣ್ಣಪುಟ್ಟ ಸಾಲಗಳನ್ನು ಒಂದೊಂದಾಗಿ ಬೇಗ ಮುಗಿಸಿದ್ರೆ ಸಾಲದ ಹೊರೆ ಸ್ವಲ್ಪ ಕಡಿಮೆಯಾಗುತ್ತದೆ.
  • ಕೇವಲ ಕನಿಷ್ಠ ಇಎಂಐ ಕಟ್ಟದೆ, ಪ್ರತಿ ತಿಂಗಳು ಹೆಚ್ಚಿನ ಹಣವನ್ನು ಅಸಲಿಗೆ ಪಾವತಿಸಿ.
  • ಬೋನಸ್ ಅಥವಾ ಅನಿರೀಕ್ಷಿತ ಹಣ ಬಂದರೆ, ಆ ಹಣವನ್ನು ಸಾಲದ ಮುಂಗಡ ಪಾವತಿಗೆ ಬಳಸಿಕೊಳ್ಳಿ.
  • ಸಾಲ ಪಡೆಯುವ ಮುನ್ನ ನೂರು ಬಾರಿ ಯೋಚಿಸಿ, ಈಗಾಗಲೇ ಸಾಲದಲ್ಲಿ ಮುಳುಗಿ ಹೋಗಿದ್ದರೆ ಮತ್ತೆ ಸಾಲ ತೆಗೆಯುವ ಪ್ರಯತ್ನ ಬೇಡ.
  •  ಕಡಿಮೆ ಬಡ್ಡಿದರ ನೀಡುವ ಬೇರೆ ಬ್ಯಾಂಕಿಗೆ ನಿಮ್ಮ ಸಾಲವನ್ನು ವರ್ಗಾಯಿಸಿ. ಇದರಿಂದ ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಸಾಲದ ಹೊರೆ ಹೆಚ್ಚಾಗಲು ಕಾರಣವೇನು?

ಉತ್ತರ: ಅಸಲಿಗಿಂತ ಬಡ್ಡಿದರವೇ ಹೆಚ್ಚಾದರೆ ಸಾಲದ ಹೊರೆ ಹೆಚ್ಚಾಗುತ್ತದೆ.

ಪ್ರಶ್ನೆ: ಬ್ಯಾಂಕ್ ನಿಂದ ಸಾಲ ಪಡೆಯುವಾಗ ಯಾವ ಅಂಶವನ್ನು ಗಮನಿಸಬೇಕು?

ಉತ್ತರ: ಸಾಲದ ಪಡೆಯುವಾಗ ಮೊದಲು ಬಡ್ಡಿದರದ ಬಗ್ಗೆ ಗಮನವಿರಲಿ.

ಪ್ರಶ್ನೆ: ಸಾಲದಿಂದ ಮುಕ್ತರಾಗುವುದು ಹೇಗೆ?

ಉತ್ತರ: ಸಾಲದಿಂದ ಮುಕ್ತರಾಗಲು ಅನಗತ್ಯ ಖರ್ಚು ವೆಚ್ಚ ಕಡಿಮೆಯಿರಲಿ, ಇಎಂಐ ಪಾವತಿಯಲ್ಲಿ ಹೆಚ್ಚಿಸಿ, ಕಡಿಮೆ ಬಡ್ಡಿದರ ಇರುವ ಬ್ಯಾಂಕ್‌ಗೆ ಸಾಲ ವರ್ಗಾಯಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ