ಸರ್ಕಾರದ ವತಿಯಿಂದ ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ; ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವೇನು?
ಬಸವ ಜನ್ಮಭೂಮಿಯಲ್ಲಿ ಬಸವ ಜಯಂತಿಯನ್ನು ಆಚರಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಮೂರು ದಿನಗಳ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಸಿತ್ತು.
ವಿಜಯಪುರ: ಸರ್ಕಾರದ (Government) ವತಿಯಿಂದ ಇದೇ ಮೊದಲ ಬಾರಿಗೆ ಇಂದು ಬಸವ ಜನ್ಮ ಭೂಮಿಯಲ್ಲಿ ಬಸವ ಜಯಂತಿ (Basava Yayanti) ಆಚರಣೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಗಿದೆ. ಆದರೆ ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಗೈರಾಗಿದ್ದರು. ಜಿಲ್ಲೆಯ ಬಹುತೇಕ ಶಾಸಕರು ಹಾಗೂ ಸಂಸದರು ಕೂಡಾ ಹಾಜರಿಲಿಲ್ಲ. ಹೀಗಾಗಿ ಹೆಸರಿಗೆ ಮಾತ್ರ ಸರ್ಕಾರ ಬಸವ ಜಯಂತಿ ಆಚರಣೆಗೆ ಮುಂದಾಯಿತಾ ಎಂದು ಬಸವಾದಿ ಶರಣ ಭಕ್ತರು ಅಸಮಾಧಾನಗೊಂಡಿದ್ದಾರೆ.
ಬಸವ ಜನ್ಮಭೂಮಿಯಲ್ಲಿ ಬಸವ ಜಯಂತಿಯನ್ನು ಆಚರಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಮೂರು ದಿನಗಳ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಸಿತ್ತು. ಆದೇಶಕ್ಕೆ ಮಾತ್ರ ಬಸವ ಜಯಂತಿ ಸೀಮಿತವಾಯಿತಾ ಎಂದು ಜನಸಾಮಾನ್ಯರು ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಒಂದೂವರೆ ದಶಕದಿಂದ ಜಿಲ್ಲೆಯ ಜನಪ್ರತಿನಿಧಿಗಳು, ಮಠಾಧೀಶರು ಬಸವಾದಿ ಶರಣ ಭಕ್ತರು ಒತ್ತಾಯಿಸಿ ಹೋರಾಟ ಮಾಡಿದ್ದರು. ಇಂದು ಇದೇ ಮೊದಲ ಬಾರಿಗೆ ಬಸವನಬಾಗೇವಾಡಿಯಲ್ಲಿ ಸರ್ಕಾರದಿಂದ ಬಸವ ಜಯಂತಿ ಆಚರಣೆ ಮಾಡಲಾಗಿದೆ. ಬಸವೇಶ್ವರ ದೇವಾಲಯದ ಅಂತರರಾಷ್ಟ್ರೀಯ ಶಾಲಾ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಬಸವ ಜಯಂತಿ ಸಂಭ್ರಮ ಜೋರು: ಬಾಗಲಕೋಟೆ: ಬನಹಟ್ಟಿಯಲ್ಲಿ ಬಸವ ಜಯಂತಿ ಸಂಭ್ರಮ ಜೋರಾಗಿತ್ತು. ವಚನ ಗ್ರಂಥ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದ್ದರು. ಬಸವ ಸಮಿತಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಬನಹಟ್ಟಿ ನಗರದ ಈಶ್ವರಲಿಂಗ ಮೈದಾನದಿಂದ ಚಾಲನೆ ಸಿಕ್ಕು ಮೆರವಣಿಗೆ ಆರಂಭವಾಗಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.
ಇದನ್ನೂ ಓದಿ
ಬೆಂಗಳೂರಿನಲ್ಲಿ ಅಮಿತ್ ಶಾ: ಸ್ಮಾರ್ಟ್ ಪೊಲೀಸ್ E BEATಗೆ ಚಾಲನೆ, ನೃಪತುಂಗ ವಿವಿ ಉದ್ಘಾಟನೆ
ಬರ್ಲಿನ್ನಲ್ಲಿ ಭಾಷಣ ಮಾಡಿ, ಕಾಂಗ್ರೆಸ್ನ್ನು ಟೀಕಿಸಿದ ಪ್ರಧಾನಿ ಮೋದಿ; 1 ರೂಪಾಯಿ, 15 ಪೈಸೆ ಹೇಳಿಕೆ ಬಗ್ಗೆ ಟೀಕೆ
Published On - 12:55 pm, Tue, 3 May 22