Basava Jayanti 2022: ಇಂದು ಬಸವ ಜಯಂತಿ; ಕಾಯಕವೇ ಕೈಲಾಸ ಎನ್ನುತ್ತ ಸಕಲರಿಗೂ ಮಾದರಿಯಾಗಿದ್ದ ಬಸವಣ್ಣ

ಬಸವಣ್ಣನವರು ಹಲವು ಸಾಮಾಜಿಕ ಸುಧಾರಣಾ ಕಾರ್ಯಗಳಿಂದಲೇ ಪ್ರಸಿದ್ಧಿಯಾದವರು. ಸಮಾಜ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು. ಸಮಾನತೆ ಇರಬೇಕು ಎಂದು ಬಯಸಿದ್ದ ಅವರು, ಅದಕ್ಕಾಗಿಯೇ ಶ್ರಮಿಸಿದರು. 

Basava Jayanti 2022: ಇಂದು ಬಸವ ಜಯಂತಿ; ಕಾಯಕವೇ ಕೈಲಾಸ ಎನ್ನುತ್ತ ಸಕಲರಿಗೂ ಮಾದರಿಯಾಗಿದ್ದ ಬಸವಣ್ಣ
ಬಸವ ಜಯಂತಿ
Follow us
TV9 Web
| Updated By: Lakshmi Hegde

Updated on:May 03, 2022 | 10:12 AM

ಇಂದು  ಜಗಜ್ಯೋತಿ ಬಸವಣ್ಣನ ಜಯಂತಿ. ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ದಿನ ಬಸವಜಯಂತಿಯನ್ನು ಹಿಂದೂಗಳು ಆಚರಣೆ ಮಾಡುತ್ತಾರೆ. ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ್​ ಪ್ರಕಾರ ಬಸವ ಜಯಂತಿ, ಏಪ್ರಿಲ್​ ಅಥವಾ ಮೇ ತಿಂಗಳಲ್ಲಿಯೇ ಬರುತ್ತದೆ. ಬಸವಣ್ಣನವರು 12ನೇ ಶತಮಾನದ ಸಮಾಜ ಸುಧಾರಕರು. ಒಬ್ಬ ಕವಿ ಮತ್ತು ತತ್ವಜ್ಞಾನಿ. ಇವರ ಕಾಯಕವೇ ಕೈಲಾಸ ಎಂಬ ತತ್ವ ಇಂದಿಗೂ ಪ್ರಚಲಿತ. ಹಾಗೇ, ಬಸವಣ್ಣನವರ ಅನುಭವ ಮಂಟಪವೆಂಬ ಅದ್ಭುತ ಪರಿಕಲ್ಪನೆ ಇಂದಿಗೂ ಮಾದರಿ. ಎಲ್ಲ ವರ್ಗದವರನ್ನೂ ಒಂದೆಡೆ ತರುವ ಪ್ರಯತ್ನದ ಭಾಗವಾಗಿ ಈ ಅನುಭವ ಮಂಟಪವನ್ನು ಬಸವಣ್ಣ ಪ್ರಾರಂಭಿಸಿದ್ದರು. ಈ ಮೂಳಕ ಸಮಾಜದಲ್ಲಿ ಬೇರೂರಿದ್ದ ಅಂದಶ್ರದ್ಧತೆ, ತಾರತಮ್ಯವನ್ನು ದೂರ ಮಾಡಿದ್ದರು. 

ಬಸವಣ್ಣನವರು ಹಲವು ಸಾಮಾಜಿಕ ಸುಧಾರಣಾ ಕಾರ್ಯಗಳಿಂದಲೇ ಪ್ರಸಿದ್ಧಿಯಾದವರು. ಸಮಾಜ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು. ಸಮಾನತೆ ಇರಬೇಕು ಎಂದು ಬಯಸಿದ್ದ ಅವರು, ಅದಕ್ಕಾಗಿಯೇ ಶ್ರಮಿಸಿದರು.   ಬಸವಜಯಂತಿಯನ್ನು ಕರ್ನಾಟಕದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಬಸವಣ್ಣನವರು ಲಿಂಗಾಯತ ಅಥವಾ ವೀರಶೈವ ಮತವನ್ನು ಪುನರುಜ್ಜೀವನ ಗೊಳಿಸಿದರು ಎಂಬ ಪ್ರತೀತಿಯಿದ್ದು, ಈ ಜನಾಂಗದವರಿಗೆ ಬಸವ ಜಯಂತಿ ದೊಡ್ಡ ಹಬ್ಬವೇ ಆಗಿದೆ. ಬಸವಣ್ಣ ಶಿವಲಿಂಗ ಆರಾಧಕರು. ವೀರಶೈವರೂ ಕೂಡ ಶಿವನನ್ನು ಪೂಜಿಸುತ್ತಾರೆ. ಇವರಿಗೆ ವೇದ, ಪುರಾಣದಲ್ಲಿ ಅಷ್ಟೊಂದು ನಂಬಿಕೆಯಿಲ್ಲ. ಅದರ ಬದಲು ಬಸವಣ್ಣನ ವಚನಗಳಲ್ಲಿ ನಂಬಿಕೆ ಇಟ್ಟಿದ್ದಾರೆ. ಭಗವಾನ್ ಶಿವನ ಪ್ರತೀಕವಾದ ಇಷ್ಟಲಿಂಗ ಧರಿಸುವುದನ್ನು ಬಸವಣ್ಣನವರೇ ಪ್ರಚಿಸಲಿತಗೊಳಿಸಿದ್ದಾರೆ. ಅದನ್ನು ಇಂದಿಗೂ ಅನೇಕರು ಪಾಲಿಸುತ್ತಿದ್ದಾರೆ.   ಹಾಗೇ, ಬಸವಣ್ಣ ಲಿಂಗ ತಾರತಮ್ಯಕ್ಕೆ ಕೊನೆ ಹಾಡಿ, ಹೆಣ್ಣುಮಕ್ಕಳಿಗೂ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದ್ದರು.

ಈ ದಿನದಂದು ಜನರು ಪರಸ್ಪರ ಶುಭಾಶಯ ಕೋರುತ್ತಾರೆ. ಅಂದಹಾಗೇ, ಸಂದೇಶಗಳು ಬಸವಣ್ಣನ ವಚನ ರೂಪದಲ್ಲಿದ್ದು, ಜೀವನ ಮೌಲ್ಯ ಸಾರುವಂತೆ ಇರುತ್ತದೆ ಎಂಬುದು ವಿಶೇಷ. ಆ ಮೂಲಕ ಅವರ ಬೋಧನೆಗಳು ಮತ್ತು ವಚನಗಳನ್ನು ಪಠಿಸುತ್ತಾರೆ ಮತ್ತು ಬಸವಣ್ಣನವರನ್ನು ಸ್ಮರಿಸುತ್ತಾರೆ. ‘ವಸದೈವ ಕುಟುಂಬಕಂ’ (ಸಾರ್ವತ್ರಿಕ ಭ್ರಾತೃತ್ವ) ಸಂದೇಶವನ್ನು ರವಾನಿಸುವುದು ಬಸವ ಜಯಂತಿಯ ಉದ್ದೇಶ. ದೇವರು ಮತ್ತು ಜೀವನವನ್ನು ನೋಡುವ ಹೊಸ ಮಾರ್ಗವನ್ನು ವ್ಯಾಖ್ಯಾನಿಸುವ ಬಸವಣ್ಣನವರ ವಚನಗಳು ಇಂದಿಗೂ ಅಭಿವ್ಯಕ್ತಿಯನ್ನು ಕಂಡುಕೊಂಡಿದೆ.

ಇದನ್ನೂ ಓದಿ: Akshaya Tritiya 2022: ಅಕ್ಷಯ ತೃತೀಯದ ಪೂಜಾ ಸಮಯ, ಚಿನ್ನ ಖರೀದಿಗೆ ಶುಭ ಮುಹೂರ್ತದ ಕುರಿತು ಮಾಹಿತಿ ಇಲ್ಲಿದೆ

Published On - 9:04 am, Tue, 3 May 22