Akshaya Tritiya 2022: ಅಕ್ಷಯ ತೃತೀಯದ ಪೂಜಾ ಸಮಯ, ಚಿನ್ನ ಖರೀದಿಗೆ ಶುಭ ಮುಹೂರ್ತದ ಕುರಿತು ಮಾಹಿತಿ ಇಲ್ಲಿದೆ

Akshaya Tritiya History in Kannada: ವೈಶಾಖದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 3ರ ಮಂಗಳವಾರ ಆಚರಿಸುವ ಅಕ್ಷಯ ತೃತೀಯ ಆಚರಣೆಯ ಹಿನ್ನೆಲೆ ಏನು? ಅಂದು ಚಿನ್ನ ಕೊಳ್ಳಲು ಯಾವ ಸಮಯ ಶುಭವಾಗಿದೆ? ಈ ಕುರಿತ ಮಾಹಿತಿ ಇಲ್ಲಿದೆ.

Akshaya Tritiya 2022: ಅಕ್ಷಯ ತೃತೀಯದ ಪೂಜಾ ಸಮಯ, ಚಿನ್ನ ಖರೀದಿಗೆ ಶುಭ ಮುಹೂರ್ತದ ಕುರಿತು ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 02, 2022 | 6:45 AM

ಅಕ್ಷಯ ತೃತೀಯ (Akshaya Tritiya 2022) ಆಚರಣೆಯನ್ನು ಮೇ 3ರ ಮಂಗಳವಾರ ಅಂದರೆ ನಾಳೆ ಆಚರಿಸಲಾಗುತ್ತಿದೆ. ಈ ದಿನ ಹಿಂದೂಗಳ ಪಾಲಿಗೆ ಮಹತ್ವದ ದಿನವೆಂಬ ನಂಬಿಕೆ ಇದೆ. ಹೊಸ ಕೆಲಸಗಳು, ಹೊಸ ವ್ಯವಹಾರಕ್ಕೆ ಮೊದಲ ಹೆಜ್ಜೆ ಇಡಲು ಈ ದಿನ ಪ್ರಶಸ್ತವಾಗಿದೆ. ಜೊತೆಗೆ ಚಿನ್ನಾಭರಣಗಳನ್ನು ಖರೀದಿ ಮಾಡುವುದರಿಂದ ಜೀವನದುದ್ದಕ್ಕೂ ಸುಖ, ಸಮೃದ್ಧಿ ದೊರೆಯುತ್ತದೆ ಎಂಬುದು ಹಿಂದಿನಿಂದ ಬಂದ ನಂಬಿಕೆ. ಈ ದಿನ ಜನರು ದಾನ-ಧರ್ಮಾದಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಕ್ಷಯ ತೃತೀಯ ಎಂಬ ಪದವು ಸಂಸ್ಕೃತ ಭಾಷೆಯಿಂದ ಬಂದಿದ್ದು, ‘ಅಕ್ಷಯ’ ಎಂದರೆ ಎಂದಿಗೂ ಕಡಿಮೆಯಾಗದ ಯಶಸ್ಸು ಅಥವಾ ಸಂತೋಷ ಎಂದರ್ಥ. ‘ತೃತೀಯಾ’ ಎಂದರೆ ಮಾಸದ ಮೂರನೇ ದಿನವನ್ನು ಸೂಚಿಸುತ್ತದೆ. ವೈಶಾಖದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಆಚರಣೆಯ ಹಿನ್ನೆಲೆ ಏನು? ಅಂದು ಚಿನ್ನ ಕೊಳ್ಳಲು ಯಾವ ಸಮಯ ಶುಭವಾಗಿದೆ? ಈ ಕುರಿತ ಮಾಹಿತಿ ಇಲ್ಲಿದೆ.

ಅಕ್ಷಯ ತೃತೀಯದ ಹಿನ್ನೆಲೆ:

ಹಿಂದೂ ಪುರಾಣಗಳ ಪ್ರಕಾರ ತ್ರೇತಾಯುಗ ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ವೈಶಾಖ ಮಾಸದ (ಏಪ್ರಿಲ್​-ಮೇ ಆಸುಪಾಸಿನಲ್ಲಿ) ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಕ್ಷಯ ತದಿಗೆಯನ್ನು ಆಚರಿಸಲಾಗುತ್ತದೆ. ಸಂಸ್ಕೃತದಲ್ಲಿ ವೈಶಾಖ ಎಂದರೆ ಮಂಥನದ ಕೋಲು ಎಂಬ ಅರ್ಥವಿದೆ. ಎಲ್ಲವನ್ನೂ ಮಥಿಸಿ ಅತ್ಯಂತ ಶುಭದ ದಿನ ಹಾಗೂ ಶುಭ ವಿಚಾರಗಳನ್ನು ಕೊಡುವ ದಿನ ಎಂಬ ನಂಬಿಕೆ. ಪರಶುರಾಮನ ಜಯಂತಿಯನ್ನೂ ಇದೇ ದಿನ ಆಚರಿಸಲಾಗುತ್ತದೆ. ವಿಷ್ಣುವಿನ ಆರನೇ ಅವತಾರ ಪರಶುರಾಮ ಎಂದು ಪರಿಗಣಿಸಲಾಗಿದ್ದು, ಭೂಮಿ ದೇವಿಯ ಮೇಲೆ ಕ್ರೂರ ದೌರ್ಜನ್ಯಗಳು ನಡೆಯುತ್ತಿರುವಾಗ ಇವುಗಳನ್ನೆಲ್ಲಾ ತಡೆಯಲು ಭಗವಾನ್​ ವಿಷ್ಣುವು ಪರಶುರಾಮನ ಅವತಾರದಲ್ಲಿ ಬಂದ ಎಂಬುದನ್ನು ಪುರಾಣಗಳು ಹೇಳುತ್ತವೆ.

ಭಗೀರಥನ ಪೂರ್ವಜನ ಆತ್ಮಗಳನ್ನು ಶುದ್ಧೀಕರಿಸುವಂತೆ ಶಿವನು ಗಂಗೆಗೆ ಹೇಳುವ ದಿನ ಕೂಡಾ ಇದೇ ದಿನವಾದ್ದರಿಂದ ಗಂಗಾ ಸಪ್ತಮಿಯ ಆಚರಣೆಯನ್ನೂ ಇದೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಒಳ್ಳೆಯ ಕಾರ್ಯ ಮಾಡಿದರೆ ಜೀವನದುದ್ದಕ್ಕೂ ಸಂತೋಷ, ನೆಮ್ಮದಿ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಭವಿಷ್ಯದಲ್ಲಿ ಹೆಚ್ಚಿನ ಸಂಪತ್ತು ಮತ್ತು ಏಳಿಗೆ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ.

ಅಕ್ಷಯ ತೃತೀಯದ ಪೂಜಾ ಸಮಯ ಮತ್ತು ಶುಭ ಮುಹೂರ್ತ:

ಅಕ್ಷಯ ತೃತೀಯದ ಸಂಪೂರ್ಣ ದಿನವೂ ಕೂಡಾ ಶುಭ ಸಮಯವೇ ಆಗಿದೆ. ಅದಾಗ್ಯೂ ಅಂದು ಅಂದರೆ ಮೇ 3ರ ಬೆಳಗ್ಗೆ 5.39 ರಿಂದ ಮಧ್ಯಾಹ್ನ 12.18 ರವರೆಗೆ ಶುಭ ಮುಹೂರ್ತವಾಗಿದೆ. ಈ ಸಮಯದಲ್ಲಿ ಜನರು ಹೆಚ್ಚಾಗಿ ವಿಷ್ಣುವಿನ ಪ್ರಾರ್ಥನೆಯಲ್ಲಿ ಮತ್ತು ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುವುದರಲ್ಲಿ ತೊಡಗಿಸಿಕೊಳ್ಳಬಹುದು. ಜೀವನದಲ್ಲಿ ಸುಖ, ನೆಮ್ಮದಿ ಜೊತೆಗೆ ಸಂಪತ್ತು ವೃದ್ಧಿಸಲಿ ಎಂದು ಕೇಳಿಕೊಂಡು, ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳಲಬಹುದು.

ಅಕ್ಷಯ ತೃತೀಯ ಪೂಜೆಯ ಶುಭ ಸಮಯವು ಬೆಳಿಗ್ಗೆ 5.39 ರಿಂದ ಮಧ್ಯಾಹ್ನ 12.18 ರವರೆಗೆ (ಅವಧಿ: 6 ಗಂಟೆ 39 ನಿಮಿಷಗಳು).

ತೃತೀಯ ತಿಥಿಯು 2022ರ ಮೇ 3ರಂದು ಬೆಳಿಗ್ಗೆ 5.18 ಕ್ಕೆ ಪ್ರಾರಂಭವಾಗುತ್ತದೆ

ತೃತೀಯ ತಿಥಿಯು 2022ರ ಮೇ 4ರಂದು ಬೆಳಿಗ್ಗೆ 7.32 ಕ್ಕೆ ಕೊನೆಗೊಳ್ಳುತ್ತದೆ

ಚಿನ್ನ ಖರೀದಿಸಲು ಉತ್ತಮ ಸಮಯ ಯಾವುದು?

ಸಂಪತ್ತು ವೃದ್ಧಿಸಲಿ ಎಂಬ ಕಾರಣಕ್ಕೆ ಈ ದಿನ ವಿಶೇಷವಾಗಿ ಚಿನ್ನ ಖರೀದಿಸುವುದು ಹಿಂದೂ ಸಂಪ್ರದಾಯದಲ್ಲಿ ಮೊದಲಿನಿಂದಲೂ ಬಂದ ನಂಬಿಕೆ. ಚಿನ್ನ ಖರೀದಿಸಲು ಉತ್ತಮ ಸಮಯ ನೋಡಿ, ಅದೇ ಸಮಯಕ್ಕೆ ಚಿನ್ನ ಕೊಳ್ಳುವುದರಿಂದ ಜೀವನದಲ್ಲಿ ಸಂಪತ್ತು ವೃದ್ಧಿಸುತ್ತದೆ ಎಂಬ ವಿಶ್ವಾಸ ಜನರಲ್ಲಿದೆ. ಅಕ್ಷಯ ತೃತೀಯವು ಚಿನ್ನ ಕೊಳ್ಳಲು ಪ್ರಶಸ್ತವಾದ ದಿನ. ಅದರಲ್ಲೂ ಅಂದು ಬೆಳಿಗ್ಗೆ 5.39 ರಿಂದ ಮಧ್ಯಾಹ್ನ 12.18 ರವರೆಗೆ ಆಭರಣಗಳನ್ನು ಖರೀದಿಸಲು ಉತ್ತಮವಾಗಿದೆ.

ಇದನ್ನೂ ಓದಿ: Akshaya Tritiya 2022 Date: ಅಕ್ಷಯ ತೃತೀಯದ ದಿನಾಂಕ, ಸಮಯ, ಮಹತ್ವ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ

Akshaya Tritiya 2022: ಅಕ್ಷಯ ತೃತೀಯದಂದು ಯಾವ ರಾಶಿಯವರು ಯಾವ ಲೋಹ ಖರೀದಿಸಬೇಕು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್