Akshaya Tritiya 2022: ಅಕ್ಷಯ ತೃತೀಯದಂದು ಯಾವ ರಾಶಿಯವರು ಯಾವ ಲೋಹ ಖರೀದಿಸಬೇಕು?

ಇದೇ ಮೇ 3ನೇ ತಾರೀಕಿನಂದು ಅಕ್ಷಯ ತೃತೀಯ ಇದೆ. ಇದರ ಪ್ರಯುಕ್ತ ಯಾವ ರಾಶಿಯವರು ಏನನ್ನು ಖರೀದಿಸಿದರೆ ಶುಭ ಎಂಬ ಮಾಹಿತಿ ನಿಮಗೆ ಇಲ್ಲಿ ದೊರೆಯುತ್ತದೆ.

Akshaya Tritiya 2022: ಅಕ್ಷಯ ತೃತೀಯದಂದು ಯಾವ ರಾಶಿಯವರು ಯಾವ ಲೋಹ ಖರೀದಿಸಬೇಕು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 30, 2022 | 2:10 PM

ಅಕ್ಷಯ ತೃತೀಯದ (Akshaya Tritiya) ದಿನದಂದು ಚಿನ್ನ, ಬೆಳ್ಳಿಯಂತಹ ದುಬಾರಿ ಲೋಹಗಳನ್ನು ಖರೀದಿಸುವ ಸಂಪ್ರದಾಯವಿದೆ. ಅಕ್ಷಯ ತೃತೀಯದಂದು ಲೋಹದ ರೂಪದಲ್ಲಿ ತಮ್ಮ ಮನೆಗಳಿಗೆ ಲಕ್ಷ್ಮಿ ದೇವಿಯನ್ನು ಆಹ್ವಾನಿಸಲಾಗುತ್ತದೆ. ಇದರಿಂದ ಈ ದಿನದಂದು ಪಡೆದ ಸಂಪತ್ತು, ದಾನದ ಫಲ ನಾಶ ಆಗುವುದಿಲ್ಲ. ಈ ವರ್ಷ ಅಕ್ಷಯ ತೃತೀಯವನ್ನು ಮೇ 3ರ ಮಂಗಳವಾರದಂದು ಆಚರಿಸಲಾಗುತ್ತದೆ. ಈ ದಿನ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಚಿನ್ನ, ಬೆಳ್ಳಿ ಅಥವಾ ಇತರ ಲೋಹ- ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಆದರೆ ಅಕ್ಷಯ ತೃತೀಯ ಸಂದರ್ಭದಲ್ಲಿ ನಿಮ್ಮ ರಾಶಿಚಕ್ರದ ಚಿಹ್ನೆಯ ಪ್ರಕಾರ ಯಾವ ಲೋಹವನ್ನು ಖರೀದಿಸಬೇಕು, ಅದರಿಂದ ನಿಮ್ಮ ಪ್ರಗತಿಗೆ ಸಹಕಾರಿಯಾಗುತ್ತದೆಯೇ ಎಂಬುದನ್ನು ಇಲ್ಲಿ ತಿಳಿಸಲಾಗುತ್ತಿದೆ. ರಾಶಿಚಕ್ರದ ಪ್ರಕಾರ ಯಾವ ಲೋಹವನ್ನು ಖರೀದಿಸಲು ಲಾಭದಾಯಕ ಎಂಬ ವಿವರಣೆ ಇಲ್ಲಿದೆ.

  1. ಮೇಷ : ಮೇಷ ರಾಶಿಯ ಜನರು ಅಕ್ಷಯ ತೃತೀಯದಂದು ತಾಮ್ರ ಅಥವಾ ಚಿನ್ನವನ್ನು ಖರೀದಿಸುವುದು ಶುಭಪ್ರದ. ನಿಮ್ಮ ರಾಶಿಯ ಅಧಿಪತಿ ಮಂಗಳ ಗ್ರಹಕ್ಕೆ ಮಂಗಳಕರ ಲೋಹ ತಾಮ್ರವಾಗಿದೆ.
  2. ವೃಷಭ: ನಿಮ್ಮ ರಾಶಿಯ ಅಧಿಪತಿ ಶುಕ್ರ. ಅಕ್ಷಯ ತೃತೀಯದಲ್ಲಿ ಬೆಳ್ಳಿಯನ್ನು ಖರೀದಿಸುವುದು ನಿಮಗೆ ಶುಭಕರ. ವಜ್ರವನ್ನು ಶುಕ್ರನ ಮುಖ್ಯ ರತ್ನವೆಂದು ಪರಿಗಣಿಸಲಾಗಿದೆ.
  3. ಮಿಥುನ: ಮಿಥುನ ರಾಶಿಯ ಜನರ ಅಧಿಪತಿ ಬುಧ. ಈ ಕಾರಣದಿಂದಾಗಿ ಮಿಥುನ ರಾಶಿಯ ಜನರು ಅಕ್ಷಯ ತೃತೀಯದಂದು ಕಂಚಿನ ಪಾತ್ರೆಗಳನ್ನು ಅಥವಾ ಆಭರಣಗಳನ್ನು ಖರೀದಿಸಬಹುದು.
  4. ಕರ್ಕಾಟಕ: ಕರ್ಕಾಟಕ ರಾಶಿಯವರು ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದು. ಈ ರಾಶ್ಯಾಧಿಪತಿ ಚಂದ್ರ, ಆದ್ದರಿಂದ ಬೆಳ್ಳಿಯು ಮಂಗಳಕರವಾಗಿರುತ್ತದೆ.
  5. ಸಿಂಹ: ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯ ಜನರು ಅಕ್ಷಯ ತೃತೀಯ ದಿನದಂದು ತಾಮ್ರ ಅಥವಾ ಚಿನ್ನವನ್ನು ಖರೀದಿಸಬೇಕು.
  6. ಕನ್ಯಾ: ಕನ್ಯಾರಾಶಿಯ ಅಧಿಪತಿ ಗ್ರಹ ಬುಧ. ಈ ರಾಶಿಯ ಜನರು ಅಕ್ಷಯ ತೃತೀಯದಂದು ಕಂಚನ್ನು ಖರೀದಿಸುವುದು ಮಂಗಳಕರ.
  7. ತುಲಾ: ತುಲಾ ರಾಶಿಯ ಜನರು ಅಕ್ಷಯ ತೃತೀಯ ದಿನದಂದು ಬೆಳ್ಳಿಯನ್ನು ಖರೀದಿಸಬೇಕು. ಈ ರಾಶಿಯ ಅಧಿಪತಿ ಶುಕ್ರ.
  8. ವೃಶ್ಚಿಕ: ಅಕ್ಷಯ ತೃತೀಯದಂದು ವೃಶ್ಚಿಕ ರಾಶಿಯವರಿಗೆ ತಾಮ್ರವನ್ನು ಖರೀದಿಸುವುದು ಒಳ್ಳೆಯದು. ಈ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದ್ದು, ಮಂಗಳಕರ ಲೋಹ ತಾಮ್ರವಾಗಿದೆ.
  9. ಧನು: ಧನು ರಾಶಿಯ ಅಧಿಪತಿ ಗುರು. ಅಕ್ಷಯ ತೃತೀಯ ದಿನದಂದು ನಿಮ್ಮ ರಾಶಿಯ ಜನರು ಹಿತ್ತಾಳೆ ಅಥವಾ ಚಿನ್ನವನ್ನು ಖರೀದಿಸುವುದು ಉತ್ತಮ.
  10. ಮಕರ: ಅಕ್ಷಯ ತೃತೀಯದಂದು ಮಕರ ರಾಶಿಯವರು ಸ್ಟೀಲ್ ಅಥವಾ ಕಬ್ಬಿಣ ಖರೀದಿಸುವುದು ಒಳ್ಳೆಯದು. ಏಕೆಂದರೆ ಈ ರಾಶಿಯ ಅಧಿಪತಿ ಶನೈಶ್ಚರ.
  11. ಕುಂಭ: ಈ ರಾಶಿಯ ಜನರು ಮಕರ ರಾಶಿಯಂತೆಯೇ ಸ್ಟೀಲ್ ಅಥವಾ ಕಬ್ಬಿಣ ಖರೀದಿಸಬೇಕು. ಈ ರಾಶಿಯ ಅಧಿಪತಿಯೂ ಶನಿಯೇ.
  12. ಮೀನ: ಈ ರಾಶಿಯ ಅಧಿಪತಿ ಗುರು. ಮೀನ ರಾಶಿಯವರಿಗೆ ಅಕ್ಷಯ ತೃತೀಯ ಸಂದರ್ಭದಲ್ಲಿ ಹಿತ್ತಾಳೆಯನ್ನು ಖರೀದಿಸುವುದು ಶುಭಕರ. ಅವರು ಬಯಸಿದರೆ ಚಿನ್ನವನ್ನೂ ಖರೀದಿಸಬಹುದು.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Akshaya Trutheeya: ಅನ್ನಪೂರ್ಣೇಶ್ವರಿ ಜನಿಸಿದ ದಿನ -ಅನಂತ ಶುಭವನ್ನು ತರುವ ಅಕ್ಷಯ ತದಿಗೆ ದಿನದ ನಾನಾ ಮಹತ್ವ, ವಿವರ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್