Akshaya Trutheeya: ಅನ್ನಪೂರ್ಣೇಶ್ವರಿ ಜನಿಸಿದ ದಿನ -ಅನಂತ ಶುಭವನ್ನು ತರುವ ಅಕ್ಷಯ ತದಿಗೆ ದಿನದ ನಾನಾ ಮಹತ್ವ, ವಿವರ
ಇನ್ನೊಂದು ಪುರಾಣ ಕತೆಯ ಮೂಲಕ ಯೋಚನೆ ಮಾಡೋದಾದರೆ ಚಂದ್ರನಿಗೆ 27 ಜನ ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಇದು. ಈ 27 ಹೆಂಡತಿಯರಲ್ಲಿ ರೋಹಿಣಿ, ಚಂದ್ರನಿಗೆ ಪ್ರಿಯವಾದ ಹೆಂಡತಿ ಅಂತೆ. ಹಾಗಾಗಿ ಕೆಲ ಕತೆಗಳು ರೋಹಿಣಿ ನಕ್ಷತ್ರದ ದಿನ ಬಂದ ಅಕ್ಷಯ ತೃತೀಯ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ಹೊಂದಿದ್ದಾರೆ.
ಆಡುಮಾತಿನಲ್ಲಿ ಅಕ್ಷತದಿಗೆ ಎಂದು ಕರೆಸಿಕೊಳ್ಳುವ ಅಕ್ಷಯ ತೃತೀಯದ ದಿನ ಪುರಾತನ ಕಾಲದಿಂದಲೂ ವಿಶೇಷತೆ ಪಡೆಯುತ್ತಾ ಬಂದಿದೆ. ಅಕ್ಷಯ ತೃತೀಯವು ದೇಶಾದ್ಯಂತ ಹಿಂದೂಗಳು ಆಚರಿಸುವ ಅತ್ಯಂತ ಪವಿತ್ರ ಮತ್ತು ಶುಭ ದಿನಗಳಲ್ಲಿ ಒಂದಾಗಿದೆ. ಈ ದಿನದಂದು ಪ್ರಾರಂಭ ಮಾಡುವ ಯಾವುದೂ ಯಾವಾಗಲೂ ವಿಜಯಶಾಲಿಯಾಗಿ ಹೊರಹೊಮ್ಮುತ್ತದೆ ಎಂದು ನಂಬಲಾಗಿದೆ. ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭಗಳ ಸಂಕೇತವಾಗಿದೆ.
ಆಧ್ಯಾತ್ಮಿಕೆಯಲ್ಲಿ ಅಕ್ಷಯ ತೃತೀಯ ಎಂದರೆ ಸಂಸ್ಕೃತ ಶಬ್ದ ಅಕ್ಷಯದಲ್ಲಿ ‘ಅ’ ಎಂದರೆ ಇಲ್ಲ ಎಂದೂ ಹಾಗೂ ‘ಕ್ಷಯ’ ಎಂದರೆ ಸವೆತ ಎಂದರ್ಥ. ಅಂದರೆ ಸವೆಯದ್ದು ಅಥವಾ ಮುಗಿಯದ ಎಂದರ್ಥ. ಸುಲಭಾರ್ಥದಲ್ಲಿ ಮತ್ತೆ ಮತ್ತೆ ಪುನರುತ್ಪತ್ತಿ ಆಗುವಂತದ್ದು ಎಂದರ್ಥ. ಸಂಸ್ಕೃತ ದಲ್ಲಿ ಅಕ್ಷಯ ಎಂದರೆ ಅ (ಇಲ್ಲ) ಹಾಗೂ ಕ್ಷಯ( ಸವೆತ) ಎಂದರ್ಥ. ಅಂದರೆ ಮುಗಿಯದ ಅಥವಾ ಪುನರುತ್ಪತ್ತಿ ಆಗುವಂತದ್ದು ಎಂದರ್ಥವಾಗಿದೆ. ಹಾಗಾಗಿ ಈ ದಿನದಲ್ಲಿ ಕೈಗೊಂಡ ಯಾವು಼ದೇ ಕಾರ್ಯಗಳೂ ಎಂದಿಗೂ ಕೆಡದು ಬದಲಾಗಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.
ಪುರಾಣಗಳ ಪ್ರಕಾರ ಎರಡು ಮುಖ್ಯವಾದ ಚಟುವಟಿಕೆಗಳಿವೆ. ಒಂದು ಮನುಷ್ಯನ ದೇಹ (ದೈಹಿಕ) ಮತ್ತು ಆತನ ಆತ್ಮಕ್ಕೆ (ಆಧ್ಯಾತ್ಮಿಕ) ಸಂಬಂಧಿಸಿವೆ. ಇಲ್ಲಿ ದೇಹವು ಶಾಶ್ವತವಲ್ಲ. ಬದಲಿಗೆ ವ್ಯಕ್ತಿಯ ಆತ್ಮವು ಎಂದೆಂದಿಗೂ ಶಾಶ್ವತ ಹಾಗೂ ಅದಕ್ಕೆ ಅಂತ್ಯವಿಲ್ಲ. ಹೀಗಾಗಿ ಈ ದಿನದಂದು ಜಪ, ತಪ, ಪೂಜೆ ಪುನಸ್ಕಾರ, ಪಿತೃ ತರ್ಪಣ ದಂತಹ ಅತ್ಯಮೂಲ್ಯವಾದ ಕಾರ್ಯಗಳನ್ಮು ನೆರವೇರಿಸುವುದರಿಂದ ಅದು ನಮ್ಮ ಆತ್ಮವನ್ನು ಸಂತೃಪ್ತಗೊಳಿಸುತ್ತದೆ. ಹೀಗಾಗಿ ಈ ದಿನದಂದು ಶುಭಕಾರ್ಯಗಳನ್ನು ಮಾಡಿದರೆ ಒಳ್ಳೆಯದು.
ಅಕ್ಷಯ ತೃತೀಯವನ್ನು ಯಾವಾಗ ಆಚರಿಸಲಾಗುತ್ತದೆ: ಅಕ್ಷಯ ತೃತೀಯವನ್ನು ಭಾರತದ ಮಾಸಿಕ ವೈಶಾಖ ಶುಕ್ಲ ಪಕ್ಷದ ಮೂರನೇ ದಿನ ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಇದು ಏಪ್ರಿಲ್-ಮೇ ತಿಂಗಳಲ್ಲಿ ಬರುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಎರಡೂ ತಮ್ಮ ಗ್ರಹಗಳ ಅತ್ಯುತ್ತಮವೆಂದು ಹೇಳಲಾಗುತ್ತದೆ. ಈ ದಿನವನ್ನು ‘ಅಖಾ ತೀಜ್’ ಎಂದೂ ಕರೆಯುತ್ತಾರೆ. ಈ ಬಾರಿ 2022ರಲ್ಲಿ ಮಂಗಳವಾರ, ಮೇ 3 ರಂದು ಅಕ್ಷಯ ತೃತೀಯ ದಿನಾಚರಣೆ ಮಾಡಬಹುದು.
ಪಂಚಾಂಗದಲ್ಲಿ ಅಕ್ಷಯ ತೃತೀಯ ಅಕ್ಷಯ ತೃತೀಯದಂದು ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತಸ್ಥಾನ – ಉಚ್ಚರಾಶಿಯಲ್ಲಿ (ಸೂರ್ಯ – ಮೇಷರಾಶಿಯಲ್ಲಿ ಮತ್ತು ಚಂದ್ರ – ವೃಶಭಾ ರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು ಮನಸ್ಸುಮತ್ತು ಬುದ್ಧಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳುವರು.
ಅಕ್ಷಯ ತೃತೀಯ ಹಬ್ಬದ ದಿನವನ್ನ ಹೇಗೆ ಲೆಕ್ಕ ಹಾಕುತ್ತಾರೆ: ಈ ಹಬ್ಬವನ್ನ ಚಂದ್ರ ಮತ್ತು ಸೂರ್ಯ ಇಬ್ಬರೂ ತಮ್ಮ ತಮ್ಮ ಉಚ್ಚ ರಾಶಿಯಲ್ಲಿ ಇರುವ ದಿನದಂದು ಆಚರಿಸುತ್ತಾರೆ. ಸೂರ್ಯನು ತನ್ನ ಉನ್ನತ ಸ್ಥಾನವಾದ ಮೇಶ ರಾಶಿಯಲ್ಲಿ – ಅಂದರೆ ಸೌರಮಾನ ಲೆಕ್ಕದ ಮೇಷ ಮಾಸದಲ್ಲಿ – ಪೂರ್ತಿ 30 ದಿನಗಳು ಇರುತ್ತಾನೆ. ಸೂರ್ಯ ತಿಂಗಳಿಗೊಮ್ಮೆ ರಾಶಿ ಬದಲಾಯಿಸಿದರೆ ಚಂದ್ರ ದಿನಕ್ಕೊಮ್ಮೆ ನಕ್ಷತ್ರ ಬದಲಾಯಿಸುತ್ತಾನೆ (ಅಂದಾಜು ಎರಡೂವರೆ ದಿನಕ್ಕೊಂದು ರಾಶಿ). ಹಾಗಾಗಿ ಈ ಮೇಷ ಮಾಸದ ಯಾವ ದಿನದಂದು ಚಂದ್ರ ತನ್ನ ಉಚ್ಚ ಸ್ಥಾನದಲ್ಲಿ ಇರುತ್ತಾನೋ ಅಂದೇ ಈ ಅಕ್ಷಯ ತೃತೀಯ. ಚಾಂದ್ರಮಾನ ಲೆಕ್ಕದ ಮೂಲಕ ನೋಡಿದರೆ ಈ ದಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನ ಆಗಿರುತ್ತದೆ.
ವೇದದಲ್ಲಿ ದಾನ ಧರ್ಮಗಳನ್ನು ಮಾಡಿದರೆ ಒಳ್ಳೆಯದು: ವೇದ ಶಾಸ್ತ್ರ ಗಳ ಪ್ರಕಾರ ಯಾವುದೇ ಒಂದು ಶುಭ ದಿನವನ್ನು ನಾವು ಆಧ್ಯಾತ್ಮಿಕ ಶಕ್ತಿಯನ್ನು ವೃದ್ದಿಸಿಕೊಳ್ಳಲು ಕಡ್ಡಾಯವಾಗಿ ಬಳಸಿಕೊಳ್ಳಬೇಕೆಂದು ಹೇಳುತ್ತದೆ. ಇದನ್ನು ತಮ್ಮ ತಮ್ಮ ಮನೆಗಳಲ್ಲಿ ಗ್ರಂಥ ಪಾರಾಯಣ ಮಾಡುವ ಮೂಲಕ, ಹೋಮ ಹವನಾದಿಗಳನ್ನು ಮಾಡುವ ಮೂಲಕ, ಮನೆಯ ಇಷ್ಟ ದೇವರನ್ನು ಪೂಜಿಸುವ ಮೂಲಕ ಅಥವಾ ವಿಶೇಷವಾದ ಪೂಜೆಗಳನ್ನು ನೆರವೇರಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಬಹುದು.
ಇಷ್ಟೇ ಅಲ್ಲದೆ ನಮ್ಮ ಪೂರ್ವಜರಿಗೆ ಗೌರವ ನೀಡುವುದು, ಬ್ರಾಹ್ಮಣರಿಗೆ ದಾನ ಮಾಡುವುದು, ಗಿಡ ಮರಗಳಿಗೆ ನೀರು ಉಣಿಸುವುದು, ಬಡವರಿಗೆ ದಾನ ನೀಡುವುದು, ವಿದ್ಯಾದಾನ ಮಾಡುವುದು ಇತ್ಯಾದಿ ಶುಭ ಕಾರ್ಯಗಳನ್ನು ಈ ಅಕ್ಷಯ ತೃತೀಯದಂದು ಮಾಡಿದರೆ ಬಹಳ ಒಳ್ಳೆಯದು. ಈ ರೀತಿಯ ಶುಭಕಾರ್ಯಗಳನ್ನು ಅಕ್ಷಯ ತೃತೀಯದಂದು ನೆರವೇರಿಸಿದರೆ ನಮಗೆ ಇನ್ನಷ್ಟು ಇಂತಹ ಕಾರ್ಯಗಳನ್ನು ನೆರವೇರಿಸಲು ಆಧ್ಯಾತ್ಮಿಕ ಶಕ್ತಿ ಸಿಗುತ್ತದೆ. ಹೀಗೆ ನಿರಂತರವಾಗಿ ಈ ಪ್ರಕ್ರಿಯೆಯನ್ನು ಮಾಡುವ ಮೂಲಕ ನಮಗೆ ಕ್ರಮೇಣ ಆಧ್ಯಾತ್ಮಿಕ ಹಾಗೂ ಸಂಪತ್ತು, ಹಾಗೂ ವಸ್ತು ಸಮೃದ್ಧಿಯೂ ತುಂಬಹುದು
ಅಕ್ಷಯ ತೃತೀಯ ಇತಿಹಾಸ: ಪುರಾಣ ಮತ್ತು ಪ್ರಾಚೀನ ಇತಿಹಾಸದ ಪ್ರಕಾರ ಈ ದಿನವು ಬಹಳಷ್ಟು ಪ್ರಮುಖ ಘಟನೆಗಳನ್ನು ಗುರುತಿಸುತ್ತದೆ
1. ಕೃತಯುಗ (ಸತ್ಯ ಯುಗ) ಶುರುವಾದ ದಿನ ಎಂದು ಹೇಳಲಾಗುತ್ತದೆ. 2. ಗಣೇಶ ಮತ್ತು ವೇದ ವ್ಯಾಸರು ಮಹಾಭಾರತ ಮಹಾಕಾವ್ಯವನ್ನು ಈ ದಿನದಂದು ಬರೆಯುತ್ತಿದ್ದರು. 3. ಈ ದಿನವನ್ನು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಜನ್ಮದಿನವೂ ಆಚರಿಸಲಾಗುತ್ತದೆ. 4. ಈ ದಿನ ಅನ್ನಪೂರ್ಣ ದೇವಿಯು ಜನಿಸಿದಳು. 5. ಈ ದಿನ, ಶ್ರೀಕೃಷ್ಣನು ಸಹಾಯಕ್ಕಾಗಿ ತನ್ನ ರಕ್ಷಣೆಗೆ ಬಂದಿದ್ದ ತನ್ನ ಬಡ ಸ್ನೇಹಿತ ಸುದಾಮನಿಗೆ ( ಕುಚೇಲನಿಗೆ ) ಸಂಪತ್ತು ಮತ್ತು ನೀಡಿದ ಅಕ್ಷಯವಾದಂತಹ ಐಶ್ವರ್ಯ ಪ್ರಾಪ್ತಿಗಳು.. ವಿತ್ತೀಯ ಲಾಭಗಳನ್ನು ದಯಪಾಲಿಸಿದನು. 6. ಮಹಾಭಾರತದ ಪ್ರಕಾರ ಈ ದಿನ ಶ್ರೀಕೃಷ್ಣರು ದೇಶಭ್ರಷ್ಟರಾಗಿದ್ದಾಗ ಪಾಂಡವರಿಗೆ ‘ಅಕ್ಷಯ ಪತ್ರ’ ವನ್ನು ಅರ್ಪಿಸಿದರು. ಅವರು ಈ ಬಟ್ಟಲಿನಿಂದ ಆಶೀರ್ವದಿಸಿದರು. ಅದು ಅನಿಯಮಿತ ಪ್ರಮಾಣದ ಆಹಾರವನ್ನು ಉತ್ಪಾದಿಸುವುದನ್ನು ಮುಂದುವರಿಸುತ್ತದೆ, ಅದು ಅವರಿಗೆ ಎಂದಿಗೂ ಹಸಿವಾಗುವು಼ದಿಲ್ಲ. 7. ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ಸಂಯೋಜಿಸಲಾರಂಭಿಸಿದ್ದು. 8. ಕಾಯಕ ಯೋಗಿ ಬಸವಣ್ಣನವರು ಜನಿಸಿದ್ದು. 9. ಬಲರಾಮ ಜಯಂತಿ ಅನ್ನೂ ಇಂದು ಆಚರಿಸಲಾಗುತ್ತದೆ. 10. ಈ ದಿನ, ಗಂಗಾ ನದಿ ಭೂಮಿಯ ಮೇಲಿನ ಸ್ವರ್ಗದಿಂದ ಇಳಿಯಿತು. 11. ಈ ದಿನವೇ ಕುಬೇರನು ಲಕ್ಷ್ಮಿ ದೇವಿಯನ್ನು ಪೂಜಿಸಿದನು ಮತ್ತು ಹೀಗೆ ದೇವರ ಖಜಾಂಚಿಯಾಗಿ ಕೆಲಸಕ್ಕೆ ನಿಯೋಜಿಸಲ್ಪಟ್ಟನು. 12. ಜೈನ ಧರ್ಮದಲ್ಲಿ, ಅವರ ಮೊದಲ ದೇವರಾದ ಭಗವಾನ್ ಆದಿನಾಥನನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. 13. ದಾನಶೂರ ಕರ್ಣನು ಜನಿಸಿದ್ದು, 14. ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ ದಿನ. 15. ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ. 16. ಈ ದಿನ ವಿಷ್ಣು ಮತ್ತು ಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂಬ ರೂಢಿ ಬಂದಿತು ಎಂದು ಹೇಳಲಾಗುತ್ತದೆ಼. 17. ಮಾತಾಂಗಿ ಜಯಂತಿ ದೇವಿಯನ್ನು ಬೈಸಾಕ್ ತಿಂಗಳ ಶುಕ್ಲ ಪಕ್ಷ ತೃತೀಯ ದಿನದಂದು ಆಚರಿಸಲಾಗುತ್ತದೆ. 18. ಸಿಂಹಾಚಲ ಚಂದನೋತ್ಸವಂ 19. ವಿಷ್ಣುಪತಿ ಪುಣ್ಯಕಾಲ ಎಂಬುದು ಬ್ರಹ್ಮಾಂಡದ ಸಂರಕ್ಷಣಾಕಾರರಾಗಿರುವ ಶ್ರೀ ಹರಿ ವಿಷ್ಣು ಈ ಬ್ರಹ್ಮಾಂಡದ ಕಲ್ಯಾಣ ಮತ್ತು ಉಳಿವಿಗಾಗಿ ಅದ್ಭುತ ಕಾರ್ಯಗಳನ್ನು ನಿರ್ವಹಿಸುವ ಸಮಯ. 20. ವೃಷಭ ಸಂಕ್ರಾಂತಿ ಆಚರಣೆಯು ಹಿಂದೂ ಭಕ್ತರಿಗೆ ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಸಂತೋಷದ ಮತ್ತು ಸಮೃದ್ಧ ಜೀವನವನ್ನು ಆಶೀರ್ವದಿಸಲು ಜನರು ಈ ಮಹತ್ವಾಕಾಂಕ್ಷೆಯ ದಿನದಂದು ವಿಷ್ಣುವನ್ನು ಪೂಜಿಸುತ್ತಾರೆ. ಪುನರ್ಜನ್ಮದ ನಿರಂತರ ಚಕ್ರದಿಂದ ಸ್ವಾತಂತ್ರ್ಯವನ್ನು ಪಡೆಯಲು ಮತ್ತು ಮೋಕ್ಷವನ್ನು ಪಡೆಯಲು ಅವರು ಸ್ವಾಮಿಯನ್ನು ಮನವಿ ಮಾಡುತ್ತಾರೆ.
ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ. ಈ ದಿನ ಅಕ್ಷಯ ತೃತೀಯ ಆಚರಿಸಿದವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸೋಣ. ಎಲ್ಲರ ಸಂಪತ್ತು ಅಕ್ಷಯವಾಗಲಿ. ವೇದಾಂತ ಜ್ಞಾನರವರಿಂದ ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು
ಅಕ್ಷಯ ತೃತೀಯ ಸಮಯದಲ್ಲಿ ಆಚರಣೆಗಳು: 1. ವಿಷ್ಣುವಿನ ಭಕ್ತರು ಈ ದಿನ ದೇವತೆಯನ್ನು ಉಪವಾಸ ಮಾಡುವ ಮೂಲಕ ಪೂಜಿಸುತ್ತಾರೆ. ನಂತರ ಬಡವರಿಗೆ ಅಕ್ಕಿ, ಉಪ್ಪು, ತುಪ್ಪ, ತರಕಾರಿಗಳು, ಹಣ್ಣುಗಳು ಮತ್ತು ಬಟ್ಟೆಗಳನ್ನು ವಿತರಿಸುವ ಮೂಲಕ ದಾನ ಮಾಡಲಾಗುತ್ತದೆ. ವಿಷ್ಣುವಿನ ಸಂಕೇತವಾಗಿ ತುಳಸಿ ನೀರನ್ನು ಸುತ್ತಲೂ ಚಿಮುಕಿಸಲಾಗುತ್ತದೆ. 2. ಪೂರ್ವ ಭಾರತದಲ್ಲಿ, ಈ ದಿನವು ಮುಂಬರುವ ಸುಗ್ಗಿಯ ಮೊದಲ ಉಳುಮೆ ದಿನವಾಗಿ ಪ್ರಾರಂಭವಾಗುತ್ತದೆ. ಅಲ್ಲದೆ, ಉದ್ಯಮಿಗಳಿಗೆ, ಮುಂದಿನ ಹಣಕಾಸು ವರ್ಷಕ್ಕೆ ಹೊಸ ಲೆಕ್ಕಪರಿಶೋಧನಾ ಪುಸ್ತಕವನ್ನು ಪ್ರಾರಂಭಿಸುವ ಮೊದಲು ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಇದನ್ನು ‘ಹಲ್ಖಾಟಾ’ (‘halkhata’ )ಎಂದು ಕರೆಯಲಾಗುತ್ತದೆ. 3. ಈ ದಿನ, ಅನೇಕ ಜನರು ಚಿನ್ನ ಮತ್ತು ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಚಿನ್ನವು ಅದೃಷ್ಟ ಮತ್ತು ಸಂಪತ್ತಿನ ಸಂಕೇತವಾಗಿರುವುದರಿಂದ, ಇದನ್ನು ಖರೀದಿಸುವುದನ್ನು ಈ ದಿನ ಧಾರ್ಮಿಕವೆಂದು ಪರಿಗಣಿಸಲಾಗುತ್ತದೆ. 4. ಜನರು ಈ ದಿನದಂದು ಮದುವೆ ಮತ್ತು ದೀರ್ಘ ಪ್ರಯಾಣವನ್ನು ಯೋಜಿಸುತ್ತಾರೆ. 5. ಈ ದಿನ ಹೊಸ ಉದ್ಯಮಗಳು, ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ. 6. ಇತರ ಆಚರಣೆಗಳಲ್ಲಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವುದು, ಬಾರ್ಲಿಯನ್ನು ಪವಿತ್ರ ಬೆಂಕಿಯಲ್ಲಿ ಅರ್ಪಿಸುವುದು ಮತ್ತು ಈ ದಿನ ದೇಣಿಗೆ ಮತ್ತು ಅರ್ಪಣೆ ಮಾಡುವುದು ಸೇರಿವೆ. 7. ಜೈನರು ಈ ದಿನ ತಮ್ಮ ವರ್ಷಪೂರ್ತಿ ತಪಸ್ಯವನ್ನು ಪೂರ್ಣಗೊಳಿಸುತ್ತಾರೆ ಮತ್ತು ಕಬ್ಬಿನ ರಸವನ್ನು ಕುಡಿಯುವ ಮೂಲಕ ತಮ್ಮ ಪೂಜೆಯನ್ನು ಕೊನೆಗೊಳಿಸುತ್ತಾರೆ. 8. ಭವಿಷ್ಯದಲ್ಲಿ ಅದೃಷ್ಟವನ್ನು ಖಚಿತಪಡಿಸಿಕೊಳ್ಳಲು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಿರ್ವಹಿಸುವುದು, ಧ್ಯಾನ ಮಾಡುವುದು ಮತ್ತು ಪವಿತ್ರ ಮಂತ್ರಗಳನ್ನು ಪಠಿಸುವುದು ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಇನ್ನೊಂದು ಪುರಾಣ ಕತೆಯ ಮೂಲಕ ಯೋಚನೆ ಮಾಡೋದಾದರೆ ಚಂದ್ರನಿಗೆ 27 ಜನ ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಇದು. ಈ 27 ಹೆಂಡತಿಯರಲ್ಲಿ ರೋಹಿಣಿ, ಚಂದ್ರನಿಗೆ ಪ್ರಿಯವಾದ ಹೆಂಡತಿ ಅಂತೆ. ಹಾಗಾಗಿ ಕೆಲ ಕತೆಗಳು ರೋಹಿಣಿ ನಕ್ಷತ್ರದ ದಿನ ಬಂದ (ಅಂದರೆ ಚಂದ್ರ ರೋಹಿಣಿ ನಕ್ಷತ್ರದಲ್ಲಿದ್ದಾಗ) ಅಕ್ಷಯ ತೃತೀಯ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ಹೊಂದಿದ್ದಾರೆ. ಸೋಮವಾರ ಚಂದ್ರನ ವಾರವಾದ್ದರಿಂದ ಈ ಅಕ್ಷತದಿಗೆ ಹಬ್ಬ ಸೋಮವಾರದಂದು ರೋಹಿಣಿ ನಕ್ಷತ್ರವಿದ್ದ ದಿನದಲ್ಲಿ ಬಂದರೆ ಇನ್ನೂ ಹೆಚ್ಚು ಶ್ರೇಷ್ಟ ಅನ್ನುತ್ತಾರೆ.
ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ: ಸ್ತ್ರೀಯರು ಚೈತ್ರದಲ್ಲಿ ಕೂರಿಸಿದ ಚೈತ್ರ ಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ ಅರಿಶಿನ-ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ.
ಅಕ್ಷಯ ತೃತೀಯದ ಹೇಗೆ ಆಚರಿಸಬೇಕು ಹಾಗೂ ಅದರ ಫಲಗಳೇನು 1. ಸಾಲವನ್ನು ಮಾಡಿಯಾದರೂ ಚಿನ್ನವನ್ನು ತೆಗೆದುಕೊಳ್ಳಬೇಕೆಂಬ ಮನಸ್ಥಿತಿಯನ್ನು ನಾವುಗಳು ಮೊದಲು ಬಿಟ್ಟು ಅಂದು ಏನೆಲ್ಲಾ ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬುದು ತಿಳಿದುಕೊಳ್ಳಬೇಕಾಗಿದೆ. 2. ಶುಚಿರ್ಭೂತರಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬಹುದು 3. ನಾವು ಕೊಟ್ಟಷ್ಟು ನಮಗೆ ತಿರುಗಿ ಬರುತ್ತದೆ ಎಂಬುದಕ್ಕೆ ಉದಾಹರಣೆ ಅಕ್ಷಯ ತೃತೀಯ ಅಂದು ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳನ್ನು ದೇವರ ದರ್ಶನವನ್ನು ಮಾಡಿದಷ್ಟು ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. 4. ಆಧ್ಯಾತ್ಮಿಕ ಉನ್ನತಿ ಹಾಗೂ ಬಯಸಿದ ಬಯಕೆಗಳು ಈಡೇರುತ್ತದೆ.
ಅಕ್ಷಯ ತೃತೀಯ ದಿನದಂದು ಪುಣ್ಯ ಪ್ರಾಪ್ತಿಗಾಗಿ ದಾನ 1. ಮಣ್ಣಿನ ಮಡಕೆಯಲ್ಲಿ ಉದಕ (ನೀರು) ದಾನ, ಮಾಡಿದರೆ ಮೃತ್ಯು ಭಯದಿಂದ ದೂರ ಆಗಬಹುದು. 2. ಬಡವರಿಗೆ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರವಾಗುತ್ತದೆ. 3. ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ. 4. ಅಕ್ಕಿ, ಬೇಳೆ, ಗೋಧಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು. 5. ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪಕರ್ಮಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ. 6. ಬೆಳಿಗ್ಗೆ ಗೋ ಮಾತೆಗೆ ಪೂಜೆ ಪುನಸ್ಕಾರಗಳನ್ನು ಮಾಡಿ ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪಾತ್ರವಾಗುತ್ತದೆ. 7. ಪಂಚಾಂಗ, ಧಾರ್ಮಿಕ ಪುಸ್ತಕಗಳನ್ನು ಮತ್ತು ಫಲ ತಾಂಬೂಲಗಳನ್ನು ದಾನ ಮಾಡುವುದರಿಂದ ಅಧಿಕ ಪುಣ್ಯ ಪ್ರಾಪ್ತಿಯಾಗುತ್ತದೆ.
ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ: ಪೂರ್ವಜರಿಗೆ ಗತಿ ಸಿಗುವುದು ಮಹತ್ವ: ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭುವರ್ಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭುವರ್ಲೋಕದಲ್ಲಿರುವ ಬಹುತೇಕ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯನು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.
ಎಳ್ಳು ತರ್ಪಣೆ ಮಾಡುವ ಪದ್ಧತಿ: ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀವಿಷ್ಣು, ಬ್ರಹ್ಮ ಅಥವಾ ದತ್ತನ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ್ಮದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಭರಿತವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು, ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು. (ಬರಹ- ವಾಟ್ಸಪ್ ಸಂದೇಶ)