AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dream Interpretation: ಕನಸಿಗೊಂದು ಅರ್ಥ ಇದೆಯಾ? ಇವೆಲ್ಲ ಬಂದರೆ ಶುಭ ಫಲಗಳು, ದೈವಾನುಗ್ರಹ, ಹಣದ ಸುರಿಮಳೆ

ಕನಸುಗಳು ನಮಗೆ ಆಗಬಹುದಾದ ಶುಭ ಸಂಗತಿಗಳ ಸೂಚಕವೆ? ಇಂಥದ್ದೊಂದು ಪ್ರಶ್ನೆಗೆ ಈ ಲೇಖನದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ನಿಮಗೇನನ್ನಿಸುತ್ತದೆ ಎಂಬುದನ್ನು ತಿಳಿಸಿ.

Dream Interpretation: ಕನಸಿಗೊಂದು ಅರ್ಥ ಇದೆಯಾ? ಇವೆಲ್ಲ ಬಂದರೆ ಶುಭ ಫಲಗಳು, ದೈವಾನುಗ್ರಹ, ಹಣದ ಸುರಿಮಳೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Apr 30, 2022 | 12:05 PM

Share

ನಮಗೆ ಬೀಳುವ ಕನಸಿಗೆ (Dreams) ಏನು ಅರ್ಥ ಎಂದು ಹಲವರು ಚಿಂತೆ ಮಾಡುವುದುಂಟು. ತಮ್ಮ ಮನಸ್ಸಿನಲ್ಲಿ ಇರುವ ಸಂಗತಿಯೇ ಕನಸಿಗೆ ಬರುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ತಜ್ಞರು ಅಥವಾ ವಿಶ್ಲೇಷಕರ ಪ್ರಕಾರ, ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು ಸೂಚ್ಯವಾಗಿ ತಿಳಿಸುತ್ತವಂತೆ ಕನಸುಗಳು. ಇದು ನಂಬಿಕೆಯ ಸಂಗತಿ ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಕೆಲವರಿಗೆ ಇವೆಲ್ಲ ತರ್ಕಹೀನ ಎನಿಸಿರಲಿಕ್ಕೆ ಸಾಕು. ಕೆಲವರಿಗೆ ಸದ್ಯದಲ್ಲೇ ತನಗೆ ದೊಡ್ಡ ಅವಘಡ ಸಂಭವಿಸಲಿದೆ ಎಂಬ ಕನಸಾಗಬಹುದು. ಮತ್ತೆ ಕೆಲವರಿಗೆ ಆರ್ಥಿಕ ಸ್ಥಿತಿ ಸುಧಾರಣೆ ಆದಂತೆ ಸೂಚನೆ ಸಿಗಬಹುದು; ಅದು ಕನಸಿನ ಮೂಲಕ. ಇರಲಿ, ಕನಸುಗಳಲ್ಲಿ ಏನು ಬಂದರೆ ಹಣದ ಹರಿವಿನ ಸೂಚನೆ ಅನ್ನೋದನ್ನ ಒಮ್ಮೆ ಗಮನಿಸೋಣ. ಈಗಾಗಲೇ ಬಂದಿದ್ದರೆ ಅಥವಾ ಇನ್ನು ಮುಂದೆ ಕನಸಲ್ಲಿ ಇವುಗಳು ಬಂದರೆ ನಿಜವೋ ಅಲ್ಲವೋ ತಿಳಿಯುವುದಕ್ಕೆ ಸಹಾಯ ಆಗುತ್ತದೆ.

  1. ಹಣಕಾಸು ವಹಿವಾಟು: ಕನಸಲ್ಲಿ ನೀವೇ ಹಣಕಾಸು ವಹಿವಾಟು ಮಾಡುತ್ತಿರುವಂತೆ ಕಂಡುಬಂದಲ್ಲಿ ಅದು ಬಹಳ ಉತ್ತಮವಾದ, ಶುಭವಾದ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಹಾಗೊಂದು ವೇಳೆ ಕನಸು ಬಂದಲ್ಲಿ ನಿಮಗೆ ಹಣ ಬರುತ್ತದೆ ಎನ್ನುತ್ತಾರೆ ಪರಿಣತರು.
  2. ಸಂತರು, ಸನ್ಯಾಸಿಗಳು: ನಿಮ್ಮ ಕನಸಿನಲ್ಲಿ ಸಂತರು, ಸನ್ಯಾಸಿಗಳು ಕಾಣಿಸಿಕೊಂಡಲ್ಲಿ ಅದನ್ನು ಶುಭ ಸೂಚಕ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕನಸಿನ ಅರ್ಥ ಏನೆಂದರೆ, ನಿಮ್ಮ ಮೇಲೆ ದೇವರ ವಿಶೇಷ ಅನುಗ್ರಹ ಇದೆ. ಜತೆಗೆ ಭವಿಷ್ಯದಲ್ಲಿನ ಬೆಳವಣಿಗೆ ಮತ್ತು ಲಾಭವನ್ನು ಈ ಕನಸು ಸೂಚಿಸುತ್ತದೆ.
  3. ಕೆಂಪು ಬಣ್ಣ: ಕನಸಿನಲ್ಲಿ ದಾಳಿಂಬೆ ಬಣ್ಣದ ಓಕುಳಿ, ಕೆಂಪು ಹೂವು ಅಥವಾ ಕೆಂಪು ಬಣ್ಣದ ಸೀರೆ ಧರಿಸಿದ ಮಹಿಳೆಯು ಬಂದಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ ಮೇಲಿದೆ ಎಂದರ್ಥ. ಇಂಥ ಕನಸು ಸಂತೋಷ ಮತ್ತು ಶ್ರೀಮಂತಿಕೆಯನ್ನು ಸೂಚಿಸುತ್ತದೆ.
  4. ಹಾಲು ಮತ್ತು ಯೋಗರ್ಟ್: ಕನಸಿನಲ್ಲಿ ಕಳಶ ಅಥವಾ ಪಾತ್ರೆಯ ತುಂಬ ಹಾಲು ಅಥವಾ ಮೊಸರು ಕಾಣಿಸಿಕೊಂಡಲ್ಲಿ ನಿಮ್ಮ ಕೆಲಸದಲ್ಲಿ ಭಾರೀ ಯಶಸ್ಸು ಪಡೆಯಲಿದ್ದೀರಿ ಎಂದರ್ಥ.
  5. ಕನಸಲ್ಲಿ ಹಾವು: ಬಿಳಿ ಅಥವಾ ಚಿನ್ನದ ಬಣ್ಣದ ಹಾವು ಕನಸಿನಲ್ಲಿ ಬಂದರೆ ಲಕ್ಷ್ಮೀದೇವಿ ಸಂತೃಪ್ತಳಾಗಿದ್ದಾಳೆ. ಹಣಕಾಸಿನ ಅನುಕೂಲ ಒದಗಿಬರುತ್ತದೆ.
  6. ಗೂಬೆ ನೋಡುತ್ತಿರುವಂತೆ ಕನಸು ಕಂಡಲ್ಲಿ: ನಂಬಿಕೆಗಳ ಪ್ರಕಾರ, ಲಕ್ಷ್ಮೀ ದೇವಿಯ ವಾಹನ ಗೂಬೆ. ಒಂದು ವೇಳೆ ಗೂಬೆ ನೋಡುತ್ತಿರುವಂತೆ ಕನಸು ಕಂಡಲ್ಲಿ ಹಣಕಾಸಿನ ಅನುಕೂಲ ಒದಗಿ ಬರುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹದ ಸೂಚಕ ಅದು.
  7. ಹಸಿರು ಭೂಮಿ: ಕನಸಿನಲ್ಲಿ ಸುತ್ತಲೂ ಹಸಿರು ಪರಿಸರವನ್ನು ಕಂಡಲ್ಲಿ ಅಥವಾ ಕೃಷಿಕರು ಜಮೀನಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಿದಲ್ಲಿ ಹಣ ಬರುವುದನ್ನು ಸೂಚಿಸುತ್ತದೆ.

ಆಧ್ಯಾತ್ಮಿಕ ವಿಚಾರ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Saturn Transit In Aquarius: 29 ವರ್ಷಗಳ ನಂತರ ಏ.28ಕ್ಕೆ ಬಲಿಷ್ಠ ಸ್ಥಾನ ಕುಂಭಕ್ಕೆ ಶನಿ ಪ್ರವೇಶ; ಇಡೀ ಜಗತ್ತೇ ಆಗಲಿದೆ ಬದಲಾವಣೆ

ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು