ಕನಸಿನಲ್ಲಿ ಗಣಪತಿ ಬಂದರೆ ಏನು ಫಲ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ

Lord Ganesha in dreams interpretation: ಕನಸಿನಲ್ಲಿ ಗಣಪತಿ ಬಂದರೆ ಯಾವುದರ ಮುನ್ಸೂಚನೆ? ಯಾವ ಕಾರಣಕ್ಕೆ ಆ ದೇವರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಅದಕ್ಕೆ ಉತ್ತರ ಈ ಲೇಖನದಲ್ಲಿ ಇದೆ.

  • TV9 Web Team
  • Published On - 15:14 PM, 13 Apr 2021
ಕನಸಿನಲ್ಲಿ ಗಣಪತಿ ಬಂದರೆ ಏನು ಫಲ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ
ಗಣೇಶ ವಿಗ್ರಹ (ಪ್ರಾತಿನಿಧಿಕ ಚಿತ್ರ)

ಕನಸುಗಳು ಭವಿಷ್ಯವನ್ನು ಸೂಚಿಸುತ್ತದೆಯೇ? ರಾತ್ರಿ ವೇಳೆ ಬಿದ್ದ ಕನಸಿಗೂ ಹಗಲು ಹೊತ್ತಿನದ್ದಕ್ಕೂ ಏನಾದರೂ ವ್ಯತ್ಯಾಸ ಇದೆಯಾ? ಹೀಗೆ ಒಂದಾದ ಮೇಲೆ ಒಂದು ಪ್ರಶ್ನೆ ಬರುತ್ತದೆ. ತಜ್ಞರು ಹೇಳುವ ಪ್ರಕಾರ, ನಮ್ಮ ಕನಸುಗಳು ಒಂದೋ ಹಿಂದಿನ ಘಟನೆಗಳಿಗೆ ಸಂಬಂಧಿಸಿದವರಾಗಿರುತ್ತವೆ ಅಥವಾ ಭವಿಷ್ಯಕ್ಕೆ ಸಂಬಂಧಿಸಿರುತ್ತದೆ. ಈ ದಿನ ಲೇಖನದಲ್ಲಿ ತಿಳಿಸುವ ವಿಚಾರ ಗಣಪತಿಗೆ ಸಂಬಂಧಿಸಿದ್ದಾಗಿದೆ. ಕನಸಿನಲ್ಲಿ ಗಣಪತಿ ಬಂದರೆ ಏನು ಫಲ ಎಂದು ಮಾಹಿತಿ ನೀಡಲಾಗುತ್ತಿದೆ. ಕನಸಿನಲ್ಲಿ ಗಣೇಶ ಬಂದರೆ ಬಹಳ ಶುಭ ಸೂಚನೆ. ವಿಘ್ನವಿನಾಶಕ ಎಂದು ಕರೆಸಿಕೊಳ್ಳುವ ಗಣಪತಿಯು ಅಡೆತಡೆಗಳನ್ನು ನಿವಾರಣೆ ಮಾಡುತ್ತಾನೆ. ಆತ ಆ ಮಹಾಶಿವ ಹಾಗೂ ತಾಯಿ ಪಾರ್ವತಿಯ ಮಗ. ಯಾವುದೇ ಶುಭ ಕಾರ್ಯದ ಆರಂಭದಲ್ಲಿ ಅಥವಾ ಯೋಜನೆಯ ಶುರುವಿನಲ್ಲಿ ಗಣಪತಿಯ ಆರಾಧನೆ ಮಾಡಲಾಗುತ್ತದೆ.

ಯಾವ ಅಡೆತಡೆಯೂ ಇಲ್ಲದೆ ಕೈಗೊಂಡ ಹೊಸ ಕಾರ್ಯ ಅಥವಾ ಯೋಜನೆ ಪೂರ್ಣಗೊಳ್ಳಲಿ ಎಂದು ಭಕ್ತರು ಆತನನ್ನು ಆರಾಧಿಸುತ್ತಾರೆ. ಆದ್ದರಿಂದ ವಿನಾಯಕನ ಪೂಜೆಗೆ ಮಹತ್ವವೂ ಇದೆ ಹಾಗೂ ಶುಭಸೂಚಕದ ಶ್ರೇಯವೂ ಇದೆ. ಯಾವುದಾದರೂ ವ್ಯಕ್ತಿಯ ಕನಸಿನಲ್ಲಿ ಗಣಪತಿ ಬಂದರೆ ಅದರರ್ಥ, ಆ ವ್ಯಕ್ತಿಗೆ ಯಶಸ್ಸು ದೊರೆಯುತ್ತದೆ. ಮೊದಲೇ ಹೇಳಿದಂತೆ ಶುಭದಾಯಕನಾದ ಗಣಪತಿ ಕನಸಿನಲ್ಲಿ ಬಂದನೆಂದರೆ, ನಿಮ್ಮ ಮೇಲೆ ಆ ದೇವರ ಆಶೀರ್ವಾದ ಎಂದರ್ಥ.

ಇದಕ್ಕಿಂತ ಹೆಚ್ಚಾಗಿ, ಗಣಪತಿ ಎಂದರೆ ಸುಖಕರ್ತ. ಇದರರ್ಥ ಏನೆಂದರೆ, ಶುಭಫಲಗಳನ್ನು ನೀಡುವವನು ಅಥವಾ ಸಂತೋಷವನ್ನು ದಯಪಾಲಿಸುವವನು. ಭವಿಷ್ಯದಲ್ಲಿ ಸಂತೋಷವನ್ನು ನೀಡುವುದರ ದ್ಯೋತಕ ಅದು. ಕನಸಿನಲ್ಲಿ ವಿನಾಯಕ ಬಂದಿದ್ದಾನೆ ಅಂದರೆ, ಹೊಸ ಪ್ರಾಜೆಕ್ಟ್​ವೊಂದನ್ನು ಆರಂಭಿಸುತ್ತೀರಿ ಅಥವಾ ವೈಯಕ್ತಿಕ ಜೀವನದಲ್ಲಿ ಹೊಸ ಆರಂಭ ಅಗಲಿದೆ ಎಂದರ್ಥ. ಇನ್ನೂ ಕೆಲವು ಸಲ ಹರಕೆ ಹೊತ್ತುಕೊಂಡು, ಅದನ್ನು ತೀರಿಸಿಲ್ಲ ಅಂದಾಗ ಕೂಡ ಕನಸಿನಲ್ಲಿ ಗಣಪ ಬರುತ್ತಾನೆ. ಆದ್ದರಿಂದ ಕನಸಿನಲ್ಲಿ ಬಂದ ಗಣಪ ನೀವು ಹೊತ್ತ ಹರಕೆಯನ್ನು ನೆನಪಿಸಲು ಬಂದಿದ್ದಾನೆ. ಆ ಕಾರಣಕ್ಕೇ ಹರಕೆಗಳನ್ನು ತಪ್ಪಿಸಕೂಡದು.

ಕನಸಲ್ಲಿ ಬಂದ ವಿಚಾರವು ಎಷ್ಟೋ ಬಾರಿ ಒಗಟಿನಂತೆ ಇರುತ್ತದೆ. ಅದನ್ನು ಬಿಡಿಸುವುದು ಸಹ ಜ್ಞಾನ. ಈ ಲೇಖನದಲ್ಲಿ ಕನಸಿನಲ್ಲಿ ಗಣಪತಿ ಬಂದರೆ ಏನು ಎಂಬುದರ ವಿವರಣೆ ಮಾತ್ರ ನೀಡಲಾಗಿದೆ. ಇನ್ನು ಮುಂದೆ ಇತರ ಕನಸುಗಳ ಬಗ್ಗೆಯೂ ತಿಳಿಸಿಕೊಡಲಾಗುವುದು.

ಇದನ್ನೂ ಓದಿ: ಮಾಂಗಲ್ಯದೊಂದಿಗೆ ಕರಿಮಣಿ ಧರಿಸುವುದರ ಮಹತ್ವ ಏನು ಗೊತ್ತಾ?

(Why lord Ganesh comes in to dreams. What is the significance of a dream.)