AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ದಿಕ್ಕಿಗೆ ಯಾವ ಫೋಟೋಗಳನ್ನು ಹಾಕಬೇಕು? ಅದರಿಂದ ಸಿಗೋ ಫಲಗಳೇನು?

ಮನೆಯಲ್ಲಿ ದೇವರುಗಳ ಫೋಟೋ ಹಾಕಿದ್ರೆ, ಇಲ್ಲವೇ ಮೂರ್ತಿಗಳನ್ನು ಇಟ್ಟರೆ ಮನೆಯಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗಿ, ಸುಖ-ಶಾಂತಿ ನೆಲೆಸಿರುತ್ತೆ ಎನ್ನಲಾಗುತ್ತೆ. ಹಾಗಾದ್ರೆ ಯಾವ ದೇವರ ಪೋಟೋಗಳನ್ನು ಯಾವ ದಿಕ್ಕಿಗೆ ಹಾಕಬೇಕು? ಅದರಿಂದ ಸಿಗೋ ಫಲಗಳೇನು ಇಲ್ಲಿ ತಿಳಿಯಿರಿ.

ಯಾವ ದಿಕ್ಕಿಗೆ ಯಾವ ಫೋಟೋಗಳನ್ನು ಹಾಕಬೇಕು? ಅದರಿಂದ ಸಿಗೋ ಫಲಗಳೇನು?
ಯಾವ ದಿಕ್ಕಿಗೆ ಯಾವ ಫೋಟೋಗಳನ್ನು ಹಾಕಬೇಕು?
ಆಯೇಷಾ ಬಾನು
|

Updated on: Apr 14, 2021 | 6:25 AM

Share

ಪ್ರಾಚೀನ ಕಾಲದಿಂದಲೂ ವಿವಿಧ ದೇವರ ಫೋಟೋಗಳನ್ನು, ಮೂರ್ತಿಗಳನ್ನು ಮನೆಯಲ್ಲಿ ಇಡುವ ಸಂಪ್ರದಾಯವಿದೆ. ಕೆಲವರ ಮನೆಯಲ್ಲಿ ದೇವರ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು, ಮೂರ್ತಿಗಳನ್ನು ಇರಿಸಲಾಗುತ್ತೆ. ಇದು ವಾಸ್ತು ದೋಷವನ್ನು ನಿವಾರಣೆ ಮಾಡುತ್ತೆ ಎಂಬ ನಂಬಿಕೆ ಇದೆ. ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ದೇವರುಗಳ ಫೋಟೋ ಹಾಕಿದ್ರೆ, ಇಲ್ಲವೇ ಮೂರ್ತಿಗಳನ್ನು ಇಟ್ಟರೆ ಮನೆಯಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗಿ, ಸುಖ-ಶಾಂತಿ ನೆಲೆಸಿರುತ್ತೆ ಎನ್ನಲಾಗುತ್ತೆ. ಹಾಗಾದ್ರೆ ಯಾವ ದೇವರ ಪೋಟೋಗಳನ್ನು ಯಾವ ದಿಕ್ಕಿಗೆ ಹಾಕಬೇಕು? ಅದರಿಂದ ಸಿಗೋ ಫಲಗಳೇನು ಇಲ್ಲಿ ತಿಳಿಯಿರಿ.

ದೇವರ ಫೋಟೋಗಳಿಂದ ಸಿಗೋ ಫಲ -ವಿನಾಯಕನ ಫೋಟೋವನ್ನು ಮನೆಯ ಮುಂಬಾಗಿಲಿಗೆ ಹಾಕಬಹುದು. -ಆಂಜನೇಯನ ಫೋಟೋವನ್ನು ಮನೆಯ ಹಿಂಬಾಗಿಲಿನಲ್ಲಿ ಹಾಕಬೇಕು. -ಹನುಮಂತನ ಪ್ರತಿಮೆ ಹಾಗೂ ಫೋಟೋಗಳನ್ನು ಬೆಡ್ ರೂಂನಲ್ಲಿ ಇರಿಸಬೇಡಿ. -ಮನೆಯ ಪವಿತ್ರ ಜಾಗ ಅಥವಾ ದೇವರ ಕೋಣೆಯಲ್ಲಿ ಮಾತ್ರ ಹನುಮಂತನ ಫೋಟೋ ಇರಲಿ. ವಾಸ್ತುಶಾಸ್ತ್ರದ ಪ್ರಕಾರ, ಹನುಮಂತನ ಮುಖ ದಕ್ಷಿಣ ದಿಕ್ಕಿಗೆ ಬರುವಂತೆ ಇಡಿ. -ಹನುಮಂತ ತನ್ನ ಶಕ್ತಿಯನ್ನು ದಕ್ಷಿಣ ದಿಕ್ಕಿಗೆ ಪ್ರಯೋಗ ಮಾಡಿದ್ದ. ದಕ್ಷಿಣ ದಿಕ್ಕಿಗೆ ಫೋಟೋ ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಅಂಶಗಳ ಶಕ್ತಿ ಕಡಿಮೆಯಾಗುತ್ತೆ. ಸುಖ-ಶಾಂತಿ ನೆಲೆಸಿರುತ್ತದೆ. -ಪಂಚಮುಖಿ ಹನುಮ, ಪರ್ವತ ಎತ್ತಿ ಹಿಡಿದ ಹನುಮಂತ ಹಾಗೂ ರಾಮನ ಭಜನೆ ಮಾಡುತ್ತಿರುವ ಹನುಮಂತನ ಫೋಟೋವನ್ನು ಮನೆಯಲ್ಲಿ ಹಾಕುವುದು ಒಳ್ಳೆಯದು. -ಮರಣ ಹೊಂದಿದವರ ಫೋಟೋವನ್ನು ದೇವರ ಮನೆಯಲ್ಲಿ ನೇತು ಹಾಕಬಾರದು. ಇದರಿಂದ ನಕರಾತ್ಮಕ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿ ದೇವರ ಕೋಣೆ ಉತ್ತರ, ಪೂರ್ವ ದಿಕ್ಕಿನಲ್ಲಿದ್ದರೆ ಮರಣ ಹೊಂದಿದವರ ಫೋಟೋಗಳನ್ನು ಪೂರ್ವ ದಿಕ್ಕಿನಲ್ಲಿ ನೇತು ಹಾಕಬೇಕು. -ಮನೆಯ ದಕ್ಷಿಣ ಹಾಗು ಪಶ್ಚಿಮ ದಿಕ್ಕಿನಲ್ಲಿ ಮರಣ ಹೊಂದಿದವರ ಫೋಟೋಗಳನ್ನು ಹಾಕಬಾರದು. ಇದು ನಿಮ್ಮ ಮನೆಯಲ್ಲಿರುವವರ ವೃತ್ತಿ ಜೀವನದ ಏಳಿಗೆಯನ್ನು ಕುಂಠಿತಗೊಳಿಸುತ್ತೆ.

ಇದು ಮನೆಯಲ್ಲಿ ದೇವರ ಫೋಟೋಗಳು ಮತ್ತು ಮೂರ್ತಿಗಳು, ಗತಿಸಿದ ಹಿರಿಯರ ಫೋಟೋಗಳನ್ನು ಹಾಕೋಕೆ ಇರುವ ನಿಯಮ. ಈ ನಿಯಮಗಳನ್ನು ಪಾಲಿಸಿದ್ರೆ ಸುಂದರ ಬದುಕು ನಮ್ಮದಾಗುತ್ತೆ.

ಇದನ್ನೂ ಓದಿ: ಬೆಳಗೆದ್ದು ಯಾರ ಮುಖವಾ ನಾನೂ ನೋಡಲಿ… ಬೆಳಗ್ ಬೆಳಗ್ಗೆ ಏನನ್ನು ನೋಡಬೇಕು? ಏನನ್ನು ನೋಡಬಾರದು?

(Which Direction to Hang Family And God Photos for Happy House)

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!