Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗೆದ್ದು ಯಾರ ಮುಖವಾ ನಾನೂ ನೋಡಲಿ… ಬೆಳಗ್ ಬೆಳಗ್ಗೆ ಏನನ್ನು ನೋಡಬೇಕು? ಏನನ್ನು ನೋಡಬಾರದು?

ದಿನವಿಡೀ ಕೆಲಸ ಮಾಡಿ ದೇಹಕ್ಕೆ, ಮನಸ್ಸಿಗೆ ಆಯಾಸ ಆಗಿರುತ್ತೆ. ಅದಕ್ಕೆ ರಾತ್ರಿ ನಿದ್ರೆ ಮಾಡಿ ಮರುದಿನ ಬೆಳಗ್ಗೆ ಎದ್ದು ಹೊಸತನದೊಂದಿಗೆ ದಿನವನ್ನು ಆರಂಭಿಸುತ್ತೇವೆ. ಹೀಗೆ ದಿನ ಆರಂಭಿಸುವಾಗ ಧನಾತ್ಮಕ ವಸ್ತುಗಳನ್ನು ನೋಡುವುದು ಉತ್ತಮ.

ಬೆಳಗೆದ್ದು ಯಾರ ಮುಖವಾ ನಾನೂ ನೋಡಲಿ... ಬೆಳಗ್ ಬೆಳಗ್ಗೆ ಏನನ್ನು ನೋಡಬೇಕು? ಏನನ್ನು ನೋಡಬಾರದು?
ಪ್ರಾತಿನಿಧಿಕ ಚಿತ್ರ
Follow us
ಆಯೇಷಾ ಬಾನು
|

Updated on:Apr 10, 2021 | 7:38 AM

ಆರೋಗ್ಯಕರ ಜೀವನಕ್ಕೆ ನಿದ್ರೆ ಅತೀ ಮುಖ್ಯ. ವಿಜ್ಞಾನದ ಪ್ರಕಾರ, 6-8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎನ್ನಲಾಗುತ್ತೆ. ಇನ್ನು ಧರ್ಮಶಾಸ್ತ್ರದಲ್ಲಿ, ನಿದ್ರೆಯಿಂದ ಎದ್ದ ತಕ್ಷಣ ನಾವು ಏನನ್ನು ನೋಡಬೇಕು, ಏನನ್ನು ನೋಡಬಾರದು ಎಂದು ಹೇಳಲಾಗಿದೆ. ಆ ದಿನದ ಕೆಲಸ ಸರಿಯಾಗಿ ಆಗದಿದ್ದರೆ ಅಥವಾ ಹಾಕಿಕೊಂಡ ಯೋಜನೆಗಳು ನೇರವೇರದಿದ್ದರೆ ಬೆಳಗ್ಗೆ ಯಾರ ಮುಖ ನೋಡಿದೆನೋ ಎಂದು ಗೊಣಗಿಕೊಳ್ಳುವವರು ಇದ್ದಾರೆ. ಕೆಲವರು ಎದ್ದ ತಕ್ಷಣ ದೇವರ ಫೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುತ್ತಾರೆ. ದಿನವಿಡೀ ಕೆಲಸ ಮಾಡಿ ದೇಹಕ್ಕೆ, ಮನಸ್ಸಿಗೆ ಆಯಾಸ ಆಗಿರುತ್ತೆ. ಅದಕ್ಕೆ ರಾತ್ರಿ ನಿದ್ರೆ ಮಾಡಿ ಮರುದಿನ ಬೆಳಗ್ಗೆ ಎದ್ದು ಹೊಸತನದೊಂದಿಗೆ ದಿನವನ್ನು ಆರಂಭಿಸುತ್ತೇವೆ. ಹೀಗೆ ದಿನ ಆರಂಭಿಸುವಾಗ ಧನಾತ್ಮಕ ವಸ್ತುಗಳನ್ನು ನೋಡುವುದು ಉತ್ತಮ. ಇದ್ರಿಂದ ನಮ್ಮ ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಿ, ನಾವು ಮಾಡುವ ಕಾರ್ಯ ಸುಗಮವಾಗಿ ಆಗಲಿದೆ ಅನ್ನೋ ನಂಬಿಕೆ ಇದೆ. ಕೆಲವರು ಎದ್ದ ತಕ್ಷಣ ದೇವರ ಪೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುವ ಸಂಪ್ರದಾಯಗಳನ್ನು ಇಟ್ಟುಕೊಂಡಿರುತ್ತಾರೆ. ಆದ್ರೆ ನಮ್ಮ ಶಾಸ್ತ್ರಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ನಾವು ಏನನ್ನು ನೋಡಬೇಕು? ಏನನ್ನು ನೋಡಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಏನನ್ನು ನೋಡಬಾರದು? -ಬೆಳಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಹರಡಿಕೊಂಡ ಹೆಂಡತಿಯನ್ನು ನೋಡಬಾರದು. -ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು. -ಪ್ರಾಣಿಗಳು ಅದರಲ್ಲೂ ಕ್ರೂರ ಪ್ರಾಣಿಗಳ ಫೋಟೋವನ್ನು ನೋಡಲೇಬಾರದು. -ಚಪ್ಪಲಿ, ಪೊರಕೆಯನ್ನು ನೋಡಬಾರದು.

ಏನನ್ನು ನೋಡಬೇಕು? -ಗೋವಿನಲ್ಲಿ ಸಕಲ ದೇವಾನುದೇವತೆಗಳು ನೆಲೆಸಿರುತ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗೇ ಮುಂಜಾನೆ ನಾವು ಎದ್ದ ಕೂಡಲೇ ಗೋವಿನ ಮುಖ ನೋಡಿದ್ರೆ ಬಹಳ ಉತ್ತಮ. -ಗೋವನ್ನು ನೋಡೋದ್ರಿಂದ ಸಕಲ ದೇವರ ದರ್ಶನ ಮಾಡಿದ ಪುಣ್ಯ ದೊರೆಯುತ್ತೆ ಎನ್ನಲಾಗುತ್ತೆ. -ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸೂರ್ಯ. ಸೂರ್ಯನ ದರ್ಶನದಿಂದ ದಿನವಿಡೀ ನವಚೈತನ್ಯವಿರುತ್ತೆ. -ದೇವರುಗಳ ಫೋಟೋ, ನರಿ, ಕುದುರೆ, ತೆಂಗಿನಮರ, ಬಾಳೆಗಿಡ, ತುಳಸಿಗಿಡ, ಫಲ ನೀಡುವ ಯಾವುದೇ ನೀರು, ಮರಗಳನ್ನು ನೋಡಬಹುದು.

ಇವಿಷ್ಟೇ ಅಲ್ಲದೇ, ನಾವು ನಿತ್ಯ ಮುಂಜಾನೆ ಎದ್ದ ತಕ್ಷಣ ಭೂಮಿ ತಾಯಿಗೆ ನಮಸ್ಕರಿಸಬೇಕು. ಹಾಗೇ ತುಳಸಿ ಗಿಡಕ್ಕೂ ನಮಸ್ಕರಿಸೋದು ಶುಭ. ಇದ್ರಿಂದ ನಮ್ಮಲ್ಲಿ ಧನಾತ್ಮಕ ಅಂಶಗಳು ಜಾಗೃತವಾಗಿ ನಮ್ಮ ದಿನದ ಕಾರ್ಯಗಳೆಲ್ಲವೂ ಸುತೂತ್ರವಾಗಿ ಆಗಲಿವೆ ಎಂದು ಹೇಳಲಾಗುತ್ತೆ. ಹಾಗೇ ಅಗ್ನಿ, ಜಲವನ್ನು ನೋಡಿದ್ರೂ ಆ ದಿನ ಒಳ್ಳೆದಾಗುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದ್ಯಾವುದನ್ನು ಮಾಡಲು ಸಾಧ್ಯವಾಗದಿದ್ದರೆ ಬೆಳಗ್ಗೆ ಎದ್ದ ತಕ್ಷಣ ನಮ್ಮ ಅಂಗೈ ನೋಡಿದ್ರೂ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತೆ. ಯಾಕಂದ್ರೆ ನಮ್ಮ ಅಂಗೈಯಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿ ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಹೊಸತನದೊಂದಿಗೆ ದಿನ ಆರಂಭಿಸುವಾಗ ಋಣಾತ್ಮಕ ಅಂಶಗಳನ್ನು ನೋಡಿ ನಮ್ಮ ಮನಸ್ಸು ನಿರಾಶೆಗೊಳ್ಳದಿರಲಿ. ಧನಾತ್ಮಕ ಅಂಶಗಳನ್ನು ನೋಡಿ ಮನಸ್ಸು ನೆಮ್ಮದಿಯಿಂದ ದಿನ ಕಾರ್ಯಗಳಿಗೆ ಅಣಿಗೊಳ್ಳಲಿ ಅನ್ನೋ ಉದ್ದೇಶ ನಮ್ಮ ಹಿರಿಯರದ್ದು. ಹೀಗಾಗೇ ಈ ಆಚರಣೆಯನ್ನು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರಲಾಗ್ತಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಬಹುತೇಕ ಜನರು ಈ ಕೆಲಗಿನ ಶ್ಲೋಕವನ್ನು ಬೆಳಗ್ಗೆ ಎದ್ದ ತಕ್ಷಣನೇ ಅಂಗೈ ನೋಡಿಕೊಂಡು ಹೇಳಿಕೊಳ್ಳುತ್ತಾರೆ. ಇದು ಅನಾದಿಕಾಲದಿಂದಲೂ ಪರಂಪರಾಗತವಾಗಿ ಆಚರಣೆಯಲ್ಲಿದೆ.

ಶ್ಲೋಕ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ||

ಅರ್ಥ ಕೈಯ ಬೆರಳುಗಳ ತುದಿಯಲ್ಲಿ ಲಕ್ಷ್ಮೀಯು ನೆಲೆಸಿದ್ದಾಳೆ. ಕೈಯ ಮಧ್ಯೆ ಸರಸ್ವತಿ ಇದ್ದಾಳೆ. ಕೈಯ ಬುಡದಲ್ಲಿ ಗೋವಿಂದನು ನೆಲೆಸಿದ್ದಾನೆ. ಈ ಬೆಳಗಿನ ಸಮಯದಲ್ಲಿ ನಾನು ಅಂಗೈಯಲ್ಲಿ ಈ ದೇವರುಗಳ ದರ್ಶನ ಮಾಡುತ್ತೇನೆ.

ಇದನ್ನೂ ಓದಿ: World Sleep Day 2021: ಇಂದು ವಿಶ್ವ ನಿದ್ರಾ ದಿನ; ನಿದ್ದೆಯೇ ನಮ್ಮನೆ ದೇವ್ರು.. ಬನ್ನಿ ನಿದ್ರೆ ಮಾಡೋಣ!

(What Should See And What Should Not After Getting From Sleep)

Published On - 7:01 am, Sat, 10 April 21

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್