PSI Recruitment Scam: ಆಯ್ಕೆ ಪಟ್ಟಿ ರದ್ದತಿ ಮುಖ್ಯವಲ್ಲ, ಅಕ್ರಮದಲ್ಲಿ ಭಾಗಿಯಾದವರು ಹೊರಬರಬೇಕು; ಡಿಕೆ ಶಿವಕುಮಾರ್

ಈ ಅಕ್ರಮದಲ್ಲಿ ಭಾಗಿಯಾಗಿರುವ ಪೊಲೀಸರು ಮತ್ತು ಮಕ್ಕಳಿಗೆ ಸಾಲ ಕೊಟ್ಟವರ ವಿವರಗಳೂ ಹೊರಬರಬೇಕಿದೆ ಎಂದು ಪರೋಕ್ಷವಾಗಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು.

PSI Recruitment Scam: ಆಯ್ಕೆ ಪಟ್ಟಿ ರದ್ದತಿ ಮುಖ್ಯವಲ್ಲ, ಅಕ್ರಮದಲ್ಲಿ ಭಾಗಿಯಾದವರು ಹೊರಬರಬೇಕು; ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 03, 2022 | 1:20 PM

ಬೆಂಗಳೂರು: ಪಿಎಸ್​ಐ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದಪಡಿಸಿದ್ದು ಮುಖ್ಯವಲ್ಲ. ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದರೆ ಎಂಬುದು ಬಹಿರಂಗವಾಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನೇಮಕಾತಿ ಅಕ್ರಮ ಕುರಿತು ಪ್ರತಿಕ್ರಿಯಿಸಿದ ಅವರು, ಬಂಧಿತ 10 ಮಂದಿಯ ಪೈಕಿ ಮೂವರು ಅಭ್ಯರ್ಥಿಗಳು ಮಾಗಡಿಯವರಿದ್ದಾರೆ. ಪಾಪ ಅವರೆಲ್ಲರೂ ನಮಗೆ ಗೊತ್ತಿರುವವರೇ, ಒಳ್ಳೆಯವರೇ. ಇವರು ಅಂಗಡಿ ಓಪನ್ ಮಾಡಿದ್ದಕ್ಕೆ ಅವರು ಹೋದರು. ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆಂದು ತಿಳಿಯಬೇಕು. ಮಕ್ಕಳಿಗೆ ಸಾಲ ಕೊಟ್ಟಿದ್ದೆಲ್ಲಾ ಹೊರಬರಬೇಕಲ್ಲವೇ ಎಂದು ಪ್ರಶ್ನಿಸಿದರು. ಈ ಅಕ್ರಮದಲ್ಲಿ ಭಾಗಿಯಾಗಿರುವ ಪೊಲೀಸರು ಮತ್ತು ಮಕ್ಕಳಿಗೆ ಸಾಲ ಕೊಟ್ಟವರ ವಿವರಗಳೂ ಹೊರಬರಬೇಕಿದೆ ಎಂದು ಪರೋಕ್ಷವಾಗಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು.

ಪಿಎಸ್​ಐ ನೇಮಕಾತಿ ಅಕ್ರಮದಿಂದಾಗಿ ಇಡೀ ರಾಜ್ಯಕ್ಕೆ ಆಘಾತವಾಗಿದೆ. ಇದು ಕೇವಲ ಮಾಗಡಿ, ಮಲ್ಲೇಶ್ವರಕ್ಕೆ ಸಂಬಂಧಿಸಿದ್ದು ಅಲ್ಲ. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಶ್ವವಿದ್ಯಾಲಯ ಪರೀಕ್ಷೆಯಲ್ಲೂ ಅವ್ಯವಹಾರವಾಗಿದೆ. PSI ಪರೀಕ್ಷೆಯಲ್ಲಿ ರಾಮನಗರದ ಮೂವರು ಪಾಸಾಗಿದ್ದಾರೆ. ಹಗರಣದಲ್ಲಿ ಯಾವ ರಾಜಕಾರಣಿ ಭಾಗಿಯಾಗಿದ್ದಾರೆ? ಯಾರು ಹಣ ಪಡೆದಿದ್ದಾರೆ ಎಂಬುದು ತಿಳಿಯಬೇಕಿದೆ. ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆ ಮಾಡಿದರೆ ಸಾಲದು. ಮಾಗಡಿ ಒಂದರಲ್ಲೇ ₹ 2 ಕೋಟಿ ವಸೂಲಿಯಾಗಿದೆ. ಅಕ್ರಮದಲ್ಲಿ ಭಾಗಿಯಾದ ಆರೋಪವಿರುವ ಸಚಿವರು ರಾಜೀನಾಮೆ ನೀಡಬೇಕಿದೆ ಎಂದು ಹೇಳಿದರು.

ಅಕ್ರಮದ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ವಿಚಾರಣೆ ವೇಳೆ ದರ್ಶನ್ ಗೌಡ ಕೊಟ್ಟ ಹೇಳಿಕೆ ಏನು ಎಂಬುದು ಬಹಿರಂಗವಾಗಬೇಕಿದೆ. ಪೊಲೀಸರು ಆತನನ್ನು ವಾಪಸ್ ಕಳುಹಿಸಿದ್ದು ಏಕೆ? ಪ್ರಕರಣ ಮುಚ್ಚಿಹಾಕಲು ಹೊರಟಿದ್ದಾರೆ. ಸಹೋದರನನ್ನು ವಿಚಾರಣೆ ಮಾಡಿದರೆ ಸಚಿವರು ಹೊರಗೆ ಬರ್ತಾರೆ. ರಾಮನಗರವನ್ನು ಕ್ಲೀನ್ ಮಾಡುತ್ತೇವೆ ಎಂದು ಬಂದವರು ಈಗ ಏನು ಕ್ಲೀನ್ ಮಾಡಿದರು ಎಂದು ಪ್ರಶ್ನಿಸಿದರು. ಅಮಿತ್ ಶಾ ಬೆಂಗಳೂರಿಗೆ ಬಂದಿರುವುದು ಅವರ ಪಕ್ಷದ ಕೆಲಸಕ್ಕೆ. ಇದು ಮಾಗಡಿ, ಮಲ್ಲೇಶ್ವರಂಗೆ ಸಂಬಂಧಿಸಿದ್ದಲ್ಲ ಎಂದು ಅಭಿಪ್ರಾಯಪಟ್ಟರು.

ಸಿಎಂ ಬದಲಾವಣೆ ಕುರಿತು ಶಾಸಕ ಯತ್ನಾಳ್‌ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಬೇಕಾದರೂ ಮಾತನಾಡಲಿ, ಗುಜರಾತ್, ದೆಹಲಿ ರೀತಿ ಯಾವುದೇ ಫಾರ್ಮುಲಾ ಬರಲಿ. ನಮಗೆ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸಿದರು. ಪತ್ರಿಕೆಯಲ್ಲಿ ಬರೆಸಿದವರು ಯಾರು? ಬರೆದವರು ಯಾರು ಎಂಬುದೂ ಹೊರಬರಬೇಕು ಎಂದು ಆಗ್ರಹಿಸಿದರು.

ಮುಸ್ಲಿಂ ಬಾಂಧವರಿಗೆ ರಂಜಾನ್​ ಶುಭಾಶಯ ಕೋರಿದ್ದೇನೆ. ಪ್ರಸ್ತುತ ದಿನಗಳಲ್ಲಿ ಅವರು ನೋವು ಅನುಭವಿಸುತ್ತಿದ್ದಾರೆ. ಅವರ ನೋವು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಮುಸಲ್ಮಾನ್​ ಬಾಂಧವರು ಆತಂಕದಲ್ಲಿದ್ದಾರೆ. ಮುಸ್ಲಿಂ ಸಮುದಾಯ ಹೆದರುವ ಅವಶ್ಯಕತೆಯಿಲ್ಲ. ಮುಸ್ಲಿಮರ ಪರವಾಗಿ ಕಾಂಗ್ರೆಸ್​ ಪಕ್ಷವಿದೆ. ಮುಂದಿನ ದಿನಗಳಲ್ಲಿ ಅವರ ಸಮಸ್ಯೆಯನ್ನು ದೂರ ಮಾಡುತ್ತೇವೆ. ಬಸವ ಜಯಂತಿ, ರಂಜಾನ್​ ಹಬ್ಬಗಳು ಒಟ್ಟಿಗೆ ಬಂದಿವೆ. ಎಲ್ಲರೂ ಸಾಮರಸ್ಯದಿಂದ ಬಾಳ್ವೆ ಮಾಡಬೇಕು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಖಾದ್ರಿಯಾ ಮಸೀದಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ನಡೆಸಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಡಿ.ಕೆ.ಶಿವಕುಮಾರ್, ಶಾಸಕ ರಿಝ್ವಾನ್ ಅರ್ಷದ್ ಪಾಲ್ಗೊಂಡಿದ್ದರು.

ಇದನ್ನೂ ಓದಿ: PSI ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಬೆಳಕಿಗೆ; 50 ಲಕ್ಷ ರೂಪಾಯಿ ಪಡೆದಿದ್ದ ರುದ್ರಗೌಡ ಪಾಟೀಲ್​ನ ಆಡಿಟರ್

ಇದನ್ನೂ ಓದಿ: TV9 Kannada Digital Live: ಪಿಎಸ್​ಐ ಸ್ಕ್ಯಾಮ್-ಸರಕಾರದ ಮುಂದೆ ದಾರಿ ಯಾವುದು? ಟಿವಿ9 ಡಿಜಿಟಲ್ ಲೈವ್ ಚರ್ಚೆ

Published On - 1:19 pm, Tue, 3 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ