ಅಶ್ವಥ್ ಗೌಡ ಮತ್ತು ನಾಗೇಶ ಗೌಡ ಹೆಸರಿನ ಅರೋಪಿಗಳು ಸಚಿವ ಅಶ್ವಥ್ ನಾರಾಯಣರವರ ಸಂಬಂಧಿಕರು: ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಮಾತು ಅರಂಭಿಸುವ ಅಶ್ವಥ್ ನಾರಾಯಣ ಮಾಗಡಿಯವರೇ ಅಂತ ತಮ್ಮ ಎಡಪಕ್ಕ ಕೂತಿರುವವರನ್ನು ಕೇಳುತ್ತಾರೆ. ಬಿಡಿ ಅವರು ಯಾವ ಊರಿನವರಾದರಾಗಿರಲೀ ಅದರೆ, ಪ್ರಕರಣದಲ್ಲಿ ಆರೋಪಿಗಳಾಗಿರುವ ಅಶ್ವಥ್ ಗೌಡ ಮತ್ತು ನಾಗೇಶ ಗೌಡ ಇಬ್ಬರೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಸಂಬಂಧಿಕರು ಎಂದು ಹೇಳುತ್ತಾರೆ.
ಸಿದ್ದರಾಮಯ್ಯನವರನ್ನು (Siddaramaiah) ಕುರಿತು ಮಾತಾಡುವಾಗ ಒಂದು ವಿಷಯವನ್ನು ಪ್ರಮುಖವಾಗಿ ಹೇಳಲಾಗುತ್ತದೆ. ಅವರು ಯಾವುದಾದರೊಂದು ವಿಷಯವನ್ನು ಪ್ರಸ್ತಾಪಿಸುವಾಗ ಇಲ್ಲವೇ ಯಾರ ವಿರುದ್ಧವಾದರೂ ಅರೋಪ ಮಾಡುವಾಗ ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು (relevant documents) ತಮ್ಮೊಂದಿಗೆ ಇಟ್ಟುಕೊಂಡಿರುತ್ತಾರೆ, ಕತ್ತಲೆಯಲ್ಲಿ ಬಾಣ ಬಿಡುವ ಜಾಯಮಾನ ಅವರದ್ದಲ್ಲ. ಹಾಗಾಗೇ, ಅವರೇನಾದರೂ ಅರೋಪ ಮಾಡಿದರೆ ಆರೋಪಕ್ಕೊಳಗಾಗುವರು ಸಣ್ಣಗೆ ಬೆವರಲಾರಂಭಿಸುತ್ತಾರೆ. ಇದನ್ನು ಯಾಕೆ ಹೇಳಬೇಕಾಯಿತೆಂದರೆ ಪಿಎಸ್ಐ ನೇಮಕಾತಿಯಲ್ಲಿ (PSI Recruitment) ಆಗಿರುವ ಹಗರಣದ ಬಗ್ಗೆ ಬುಧವಾರ ವಿಧಾನ ಸೌಧ ಅವರಣದಲ್ಲಿ ಮಾತಾಡುವಾವ ವಿರೋದ ಪಕ್ಷದ ನಾಯಕರು, ಕೇವಲ ಇದೊಂದೇ ಅಲ್ಲ, ಬೇರೆ ಬೇರೆ ಇಲಾಖೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಅಕ್ರಮ ನಡೆದಿದೆ ಎನ್ನುತ್ತಾ ಅದನ್ನು ಮತ್ತೊಂದು ದಿನ ಮಾತಾಡುತ್ತೇನೆ ಅನ್ನುತ್ತಾರೆ.
ಅವರು ಹಾಗನ್ನಲು ಕಾರಣ ಅದೇ. ತಮ್ಮಲ್ಲಿ ಪೂರಕ ದಾಖಲೆಗಳಿಲ್ಲದೆ ಅವರು ಸುಖಾಸುಮ್ಮನೆ ಆರೋಪ ಮಾಡುವುದಿಲ್ಲ. ಹಾಗಾಗೇ ಅವರು ಬೇರೆ ದಿನ ಮಾತಾಡುತ್ತೇನೆ ಅನ್ನುತ್ತಾರೆ.
ಓಕೆ ಮುಖ್ಯ ವಿಷಯಕ್ಕೆ ಬರೋಣ. ಸಚಿವ ಡಾ ಸಿ ಎನ್ ಆಶ್ವಥ್ ನಾರಾಯಣ ಅವರ ಹೆಸರು ಪಿ ಎಸ್ ಐ ನೇಮಕಾತಿಯಲ್ಲಿ ಕೇಳಿ ಬರುತ್ತಿರುವ ಬಗ್ಗೆ ಮಾತಾಡುವ ಸಿದ್ದರಾಮಯ್ಯ ಅವರು ಮಾತು ಅರಂಭಿಸುವ ಅಶ್ವಥ್ ನಾರಾಯಣ ಮಾಗಡಿಯವರೇ ಅಂತ ತಮ್ಮ ಎಡಪಕ್ಕ ಕೂತಿರುವವರನ್ನು ಕೇಳುತ್ತಾರೆ. ಬಿಡಿ ಅವರು ಯಾವ ಊರಿನವರಾದರಾಗಿರಲೀ ಅದರೆ, ಪ್ರಕರಣದಲ್ಲಿ ಆರೋಪಿಗಳಾಗಿರುವ ಅಶ್ವಥ್ ಗೌಡ ಮತ್ತು ನಾಗೇಶ ಗೌಡ ಇಬ್ಬರೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಸಂಬಂಧಿಕರು ಎಂದು ಹೇಳುತ್ತಾರೆ.
ಪಿ ಎಸ್ ಐ ನೇಮಕಾತಿ ಪ್ರಕರಣವು ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿರುವ ದೊಡ್ಡಮಟ್ಟದ ಪ್ರಕರಣವಾಗಿದೆ. ಸದರಿ ಅಕ್ರಮದಲ್ಲಿ ರೂ. 300 ಕೋಟಿ ರೂ. ಗಳಿಗಿಂತ ಹೆಚ್ಚು ಹಣದ ವ್ಯವಹಾರ ನಡೆದಿದೆ. ಹಾಗಾಗಿ ಪ್ರಕರಣದ ಸಮಗ್ರ ತನಿಖೆಯಾಗಬೇಕು ಅಂತ ಸಿದ್ದರಾಮಯ್ಯ ಹೇಳುತ್ತಾರೆ.
ಇದನ್ನೂ ಓದಿ: Siddaramaiah Press Meet: ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕೂಡಲೇ ವಜಾಗೊಳಿಸಬೇಕು; ಸಿದ್ದರಾಮಯ್ಯ ಒತ್ತಾಯ